ಬೆಳಗಾವಿ- ಬೆಳಗಾವಿ ಡಿಸಿಸಿ ಬ್ಯಾಂಕಿನ ಅದ್ಯಕ್ಷರಾಗಿ,ರಮೇಶ್ ಕತ್ತಿ ,ಉಪಾದ್ಯಕ್ಷರಾಗಿ ಢವಳೇಶ್ವರ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲು ನಿರ್ಧರಿಸಲಾಗಿದೆ.ಎಂದು ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದರು.
ಬೆಳಗಾವಿಯ ಸರ್ಕ್ಯುಟ್ ಹೌಸ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಬೆಳಗಾವಿ ಜಿಲ್ಲೆಯ ಪ್ರತಿಷ್ಠಿತ ಡಿಸಿಸಿ ಬ್ಯಾಂಕು ಶತಮಾನೋತ್ಸವ ಆಚರಿಸುವ ಸಂಧರ್ಭದಲ್ಲಿ ಈ ಬ್ಯಾಂಕಿನ ಚುನಾವಣೆ ನಡೆಯಬಾರದು,ಅವಿರೋಧ ಆಯ್ಕೆ ಆಗಬೇಕೆನ್ನುವದು ಬಿಜೆಪಿ ಪಕ್ಷದ ವರಿಷ್ಠರ ಅಭಿಪ್ರಾಯ ವಾಗಿತ್ತು ಹೀಗಾಗಿ ಈ ಹಿಂದೆ ಅದ್ಯಕ್ಷರಾಗಿದ್ದ ರಮೇಶ್ ಕತ್ತಿ,ಮತ್ತು,ಉಪಾದ್ತಕ್ಷರಾಗಿ,ಢವಳೇಶ್ವರ ಅವರನ್ನು ಮುಂದುವರೆಸಲು ಸರ್ವಾನುಮತದಿಂದ ನಿರ್ಧರಿಸಲಾಗಿದೆ ಎಂದು ಲಕ್ಷ್ಮಣ ಸವದಿ ಹೇಳಿದ್ರು
ಕೆಎಂಎಫ್ ಅದ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮಾತನಾಡಿ ,ಡಿಸಿಸಿ ಬ್ಯಾಂಕಿನಲ್ಲಿ ವ್ಯೆತ್ಯಾಸಗಳಾಗಿರಬಹುದು,ಸಮಸ್ಯೆಗಳಿರಬಹುದು,ಎಲ್ಲರನ್ನು ವಿಶ್ವಾಸಕ್ಕೆ ತೆಗೆದಯಕೊಂಡು ಕೆಲಸ ಮಾಡುವಂತೆ ರಮೇಶ್ ಕತ್ತಿ ಅವರಿಗೆ ಹೇಳಿದ್ದೇವೆ,ಅವರು ಡಿಸಿಸಿ ಬ್ಯಾಂಕಿನ ನಿರ್ದೇಶಕರನ್ನು ಮತ್ತು ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಾರೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.