ಬೆಳಗಾವಿ-ಜಲಸಂಪನ್ಮೂಲ ಸಚಿವರು ಮುಂದೆ ಸಿಎಂ ಆಗ್ತಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ,ಉತ್ತರಿಸಿದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಬೆಂಕಿ ಹಾಕಬೇಡಿ, ಮುಂದಿನ ಮೂರು ವರ್ಷ ಯಡಿಯೂರಪ್ಪನವೇ ಮುಖ್ಯಮಂತ್ರಿಗಳು ಯಡಿಯೂರಪ್ಪ ನೇತೃತ್ವದಲ್ಲೇ ಮುಂದಿನ ಚುನಾವಣೆ ನಡೆಯಲಿದೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು
ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಗ್ರಾಪಂ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಪೂರ್ವ ನಿಗದಿಯಾಗಿದ್ದ ನೀರಾವರಿ ಇಲಾಖೆ ಸಭೆಯನ್ನು ಮುಂದುಡಲಾಗಿದೆ.
ಕೋವಿಡ್ ನಿಯಂತ್ರಿಸುವ ಬಗ್ಗೆ ಮಾತ್ರ ಚರ್ಚೆ ನಡೆದಿದೆ.
ಜಿಲ್ಲೆಯಲ್ಲಿ ಕೊರೊನಾ ಸಂಪೂರ್ಣ ನಿಯಂತ್ರಣ ಆಗಿದೆ.
ಜನ ನಿರ್ಭಯದಿಂದ ತಮ್ಮ ಕೆಲಸದಲ್ಲಿ ತೊಡಗಬೇಕು,ಎಂದರು.
ಕಾಂಗ್ರೆಸ್ ಜಿಲ್ಲಾ ಪಂಚಾಯತ ಸದಸ್ಯ ಬಿಜೆಪಿ ಸೇರ್ಪಡೆ ವಿಚಾರ. ಕಾಂಗ್ರೆಸ್ ಪಕ್ಷದ 43 ಜಿಪಂ ಸದಸ್ಯರ ಪೈಕಿ 22 ಜನ ಸದಸ್ಯರು ನನ್ನ ಜತೆಗೆ ಇದ್ದಾರೆ.
ಎಷ್ಟು ಜನ ರಾಜೀನಾಮೆ ಕೊಡ್ತಾರೆ ಗೊತ್ತಿಲ್ಲ.
ಜಿಪಂ ಸದಸ್ಯ ಕೃಷ್ಣ ಅನಗೋಳ್ಕರ್ ರಾಜೀನಾಮೆ ಅವಶ್ಯಕತೆ ಇರಲಿಲ್ಲ,ಇಷ್ಟು ಬೇಗ ರಾಜೀನಾಮೆ ಕೊಟ್ಟರೋ ಗೊತ್ತಿಲ್ಲ.ಎಂದು ಬೆಳಗಾವಿಯಲ್ಲಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಮಹದಾಯಿ ವಿಚಾರದಲ್ಲಿ ಗೋವಾ ಸಿಎಂ ಪ್ರಮೋದ ಸಾವಂತ ಹೇಳಿಕೆ ವಿಚಾರ ಪ್ರಸ್ತಾಪಿಸಿದ ಅವರು, ಕರ್ನಾಟಕ ಕಾನೂನು ಬಾಹಿರವಾಗಿ ನೀರು ಪಡೆದಿದೆ ಎಂದು ಆರೋಪ ಮಾಡುತ್ತಿದ್ದಾರೆ. ಗೋವಾ ಸಿಎಂ ಪ್ರಮೋದ್ ಸಾವಂತ್ ಬಹಿರಂಗ ಆಹ್ವಾನ ಕೊಡ್ತೀನಿ
ಕಳಸಾ ನಾಲಾಗೆ ನಿರ್ಮಾಣವಾಗಿರೋ ಗೋಡೆ ಮುಟ್ಟಿಲ್ಲ. ಒಂದು ವೇಳೆ ಆರೋಪ ಸಾಬೀತು ಆದರೇ
ತಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ.
ಕಾನೂನು ಬಾಹಿರವಾಗಿ ಕರ್ನಾಟಕ ಯಾವುದೇ ಕೆಲಸ ಮಾಡಿಲ್ಲ. ಕರ್ನಾಟಕ ಸಿಎಂ, ಗೋವಾ ಸಿಎಂ ಮಾತುಕತೆ ಅವಶ್ಯಕತೆ ಇಲ್ಲ. ಕೋರ್ಟ್ ವಿಚಾರವನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ.
ಗೋವಾದಲ್ಲಿ ಮಹದಾಯಿ ವಿಚಾರದಲ್ಲಿ ರಾಜಕೀಯ ನಡೆಯುತ್ತಿದೆ ಎಂದು ಸಚಿವ ರಮೇಶ್ ಆರೋಪಿಸಿದರು.
ಸಂಪುಟ ವಿಸ್ತರಣೆ ಪದೇ ಪದೇ ಮುಂದುಡಿಕೆ ವಿಚಾರ.
ಬೆಳಗಾವಿಯಲ್ಲಿ ಸಚಿವ ರಮೇಶ ಜಾರಕಿಹೊಳಿ ಹೇಳಿಕೆ.
ಶೀಘ್ರದಲ್ಲೇ ಸಂಪುಟ ವಿಸ್ತರಣೆ ಆಗಬೇಕು ಎನ್ನುವುದು ನಮ್ಮ ಬೇಡಿಕೆ. ಆದರೇ ದುರ್ದೈವದಿಂದ ಮುಂದುಡಿಕೆ ಆಗುತ್ತಿದೆ. ಗ್ರಾಪಂ ಚುನಾವಣೆ ಘೋಷಣೆ ಹಿನ್ನೆಲೆ ಒಂದು ತಿಂಗಳು ಮುಂದುಡಿಕೆ ಆಗಬಹುದು,ಮುಖ್ಯಮಂತ್ರಿಗಳು ವಿಶೇಷ ಅನುಮತಿ ಪಡೆದು ಮಾಡಲೂ ಬಹುದು. ಸೋತವರ ಪರ ಲಾಭಿ ಮಾಡೋವರು ತ್ಯಾಗ ಮಾಡಲಿ.
ಶಾಸಕ ಎಂ ಪಿ ರೇಣುಕಾಚಾರ್ಯ ಹೇಳಿಕೆ ವಿಚಾರ.
ಮಾಡೋದು ಆದರೇ ಮಾಡೋಣ ಅದರಲ್ಲಿ ಏನು.
ನನಗೆ ಯಾಕೆ, ಬೇರೆ ಅರ್ಥದಲ್ಲಿ ಮಾತನಾಡಿರಬಹುದು.
ಸಿ ಪಿ ಯೋಗೇಶಗೆ ಸಚಿವ ಸ್ಥಾನ ಸಿಗಬೇಕು.
ತ್ಯಾಗ ಮಾಡಿದ 17 ಜನರಿಗು ಸಂಪುಟದಲ್ಲಿ ಅವಕಾಶ ಸಿಗಬೇಕು. ಶ್ರೀಮಂತ ಪಾಟೀಲ್ ಸಂಪುಟದಲ್ಲಿ ಕೈಬಿಡುವ ಪ್ರಶ್ನೆ ಇಲ್ಲ. ರೇಣುಕಾಚಾರ್ಯ ಆಗ್ರಹ ಸರಿಯಾಗಿದೆ, ನಮ್ಮದು ಸರಿ ಇದೆ ಎಂದರು.
ಬೆಂಗಳೂರಿಲ್ಲಿ ಸಚಿವ ರಮೇಶ ಜಾರಕಿಹೊಳಿ ಬಿಟ್ಟು ಸಭೆ ವಿಚಾರ. ಶಂಕರ್, ವಿಶ್ವನಾಥ, ಎಂ ಡಿ ಬಿ ಸಭೆ ಮಾಡಿದ್ದಾರೆ. ಸಹಜವಾಗಿ ಬೇಡಿಕೆ ಇಡೋದು ಸಹಜ.
ನಾನು ಯೋಗೇಶ ಅಷ್ಟೇ ಅಲ್ಲ ಎಲ್ಲರ ಪರ ಲಾಭಿ ಮಾಡುತ್ತೇನೆ. ಸಿಎಂ ಬಿ ಎಸ್ ಯಡಿಯೂರಪ್ಪ ಅವಧಿ ಪೂರ್ವ ಮಾಡ್ತಾರೆ. ಅವರ ನೇತೃತ್ವದಲ್ಲಿ ಮುಂದಿನ ಚುನಾವಣೆ ನಡೆಯಲಿದೆ
ಬೆಳಗಾವಿ ಜಿಲ್ಲೆಯ ವಿಭಜನೆ ವಿಚಾರ.
ಚಿಕ್ಕೋಡಿ, ಗೋಕಾಕ್ ಎರಡು ಜಿಲ್ಲೆ ಆಗಲೇಬೇಕು.
ಆದರೇ ಗಡಿ ಕೇಸ್ ಸುಪ್ರಿಂ ಕೋರ್ಟ್ ನಲ್ಲಿ ಕೇಸ್ ಇದೆ.
ಮಾಡಬೇಕು ಎನ್ನುವುದು ನಮ್ಮ ಬೇಡಿಕೆ ಸಹ ಇದೆ.ಜಿಲ್ಲೆ ವಿಭಜನೆಗೆ ಕನ್ನಡಪರ ಸಂಘಟನೆಗಳ ವಿರೋಧ ಇದೆ,ಹೀಗಾಗಿ ಬೆಳಗಾವಿ ಜಿಲ್ಲೆಯ ವಿಭಜನೆ ವಿಳಂಭ ಆಗುತ್ತಿದೆ ಎಂದರು.