ಬೆಳಗಾವಿ-ಸೋಲಿಲ್ಲದ ಸರದಾ,ಸರಳ ಸಜ್ಜನ ರಾಜಕಾರಣಿಯಾಗಿದ್ದ ಸುರೇಶ್ ಅಂಗಡಿ ಅವರನ್ನು ಅವರ ಅಭಿಮಾನಿಗಳು ಮರೆತಿಲ್ಲ,ಪ್ರತಿದಿನ ಅವರ ಮನೆಗೆ ಅಭಿಮಾನಿಗಳ ದಂಡು ಹರಿದು ಬರುತ್ತಿದೆ.
ಸುರೇಶ ಅಂಗಡಿಯವರ ನಿಧನದಿಂದ ತೆರವಾದ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸುವಂತೆ ಕೋರಿ ವಿವಿಧ ಗ್ರಾಮಗಳ ಅವರ ಅಭಿಮಾನಿಗಳು ಹಾಗೂ ಭಾಜಪ ಕಾರ್ಯಕರ್ತರು ಇಂದು ಅವರ ಕುಟುಂಬ ಸದಸ್ಯರಿಗೆ ಮನವಿ ಮಾಡಿಕೊಂಡಿದ್ದಾರೆ.
ಸುರೇಶ್ ಅಂಗಡಿ ಅವರು ಬಿಜೆಪಿ ಕಾರ್ಯಕರ್ತರ ಜೀವಾಳವಾಗಿದ್ದರು.ಅವರ ಧರ್ಮಪತ್ನಿ ಮಂಗಳಾ ಅಂಗಡಿ ಅವರು ಚುನಾವಣೆಗೆ ಸ್ಪರ್ದಿಸಬೇಕು ಎನ್ನುವದು ಅಭಿಮಾನಿಗಳ ಒತ್ತಾಯವಾಗಿದೆ.
ಬಿಜೆಪಿ ಹೈಕಮಾಂಡ್ ಸುರೇಶ್ ಅಂಗಡಿ ಅವರ ಕುಟುಂಬದವರಿಗೆ ಟಿಕೆಟ್ ಕೊಡಬೇಕು,ಸುರೇಶ್ ಅಂಗಡಿ ಅವರ ಕುಟುಂಬ ಸದಸ್ಯರಿಂದ ಸೇವೆ ಮುಂದುವರೆಯಬೇಕು ಎನ್ನುವದು,ಸುರೇಶ್ ಅಂಗಡಿ ಅವರ ನಿಧನದಿಂದ ತೆರುವಾದ ಸ್ಥಾನಕ್ಕೆ ಬೇರೆ ಯಾರಿಗೂ ಅವಕಾಶ ಮಾಡಿಕೊಡಬಾರದು,ಸುರೇಶ್ ಅಂಗಡಿ ಅವರ ಕುಟುಂಬದವರಿಗೆ ಟಿಕೆಟ್ ಕೊಟ್ಟು ಅವಧಿ ಪೂರ್ಣಗೊಳಿಸಬೇಕೆಂದು ಸುರೇಶ್ ಅಂಗಡಿ ಅವರ ಅಭಿಮಾನಿಗಳು ಒತ್ತಾಯಿಸುತ್ತಿರುವುದು ಸಾಮಾನ್ಯವಾಗಿದೆ.
ಆದ್ರೆ ಇನ್ನುವರೆಗೆ ಸುರೇಶ್ ಅಂಗಡಿ ಅವರ ಕುಟುಂಬದವರು ಈ ಕುರಿತು ಇನ್ನುವರೆಗೆ ತಮ್ಮು ನಿಲುವು ವ್ಯೆಕ್ತಪಡಿಸಿಲ್ಲ.