ಬೆಳಗಾವಿ-ಬಿಜೆಪಿ ಶಾಸಕ ಮಹಾದೇವಪ್ಪ ಯಾದವಾಡ ಕಚೇರಿಯನ್ನೂ ಕಳ್ಳರು ಟಾರ್ಗೆಟ್ ಮಾಡಿದ್ದು ಕಚೇರಿಯಲ್ಲಿ ಕಳ್ಳತನ ನಡೆದಿದೆ.
ಬೆಳಗಾವಿ ಜಿಲ್ಲೆ ರಾಮದುರ್ಗದ ಪಟ್ಟಣದಲ್ಲಿರುವ ಶಾಸಕರ ಕಚೇರಿಯಲ್ಲಿ ತಡರಾತ್ರಿ ಕಳ್ಳತನ ನಡೆದಿದೆ.ಮಹಾದೇವಪ್ಪ ಯಾದವಾಡ್, ರಾಮದುರ್ಗ ಬಿಜೆಪಿ ಶಾಸಕರಾಗಿದ್ದು ಇವರ ಕಚೇರಿ ಕಳ್ಳರ ಕಣ್ಣಿಗೆ ಬಿದ್ದಿದೆ.
ಕಚೇರಿ ಬೀಗ ಮುರಿದು ದಾಖಲೆಗಳನ್ನು ಚೆಲ್ಲಾಪಿಲ್ಲಿ ಮಾಡಿದ ಮುಸುಕುಧಾರಿಗಳು. ಕಚೇರಿ ಬಳಿಯ ಸಿಸಿ ಕ್ಯಾಮರಾದಲ್ಲಿ ಮುಸುಕುಧಾರಿಗಳ ಚಲನವಲನ ಸೆರೆಯಾಗಿದೆ ಕಚೇರಿಯಲ್ಲಿ ಏನು ಕಳ್ಳತನವಾಗಿದೆ ಎಂಬ ಗುಟ್ಟು ಬಿಟ್ಟು ಕೊಡದ ಕಚೇರಿ ಸಿಬ್ಬಂದಿ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಸಿಸಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ಪೊಲೀಸರು ಕಳ್ಳರ ಶೋಧಕಾರ್ಯ ನಡೆಸಿದ್ದಾರೆ.
ರಾಮದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಶಾಸಕರ ಕಚೇರಿಯೂ ಚೋರಿ..ಚೋರಿ ಎನ್ನುವ ಸುದ್ಧಿ ಈಗ ರಾಮದುರ್ಗ ಕ್ಷೇತ್ರದಲ್ಲಿ ಚರ್ಚೆಯಲ್ಲಿದ್ದೆ….
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ