Breaking News

ನಾಳೆ ಬೆಳಗಾವಿಯಲ್ಲಿ ಅನ್ನದಾತ ಜೀವದಾತ….!!!

 

ಬೆಳಗಾವಿ, – : ಭಾರತೀಯ ಸ್ಟೇಟ್ ಬ್ಯಾಂಕ್ ಹಣಕಾಸು ಸೇರ್ಪಡೆ ಮತ್ತು ಕಿರು ಮಾರುಕಟ್ಟೆ ವಿಭಾಗದ ವತಿಯಿಂದ ಬುಧವಾರ(ಡಿ.23) ಬೆಳಿಗ್ಗೆ 10 ಗಂಟೆಗೆ ನಗರದ ಕೃಷಿ ಇಲಾಖೆಯ ಸಭಾ ಭವನದಲ್ಲಿ ರೈತರ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಜಿಲ್ಲಾಧಿಕಾರಿ ಎಂ. ಜಿ. ಹಿರೇಮಠ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಭಾರತೀಯ ಸ್ಟೇಟ್ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕರಾದ ಜಿ. ನರಸಿಂಹ ಮೂರ್ತಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ದರ್ಶನ ಎಚ್. ವಿ. ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ರವೀಂದ್ರ ಬಿ. ಹಕಾಟಿ ಮತ್ತು ಕೃಷಿ ಇಲಾಖೆಯ ಉಪನಿರ್ದೇಶಕರಾದ ಎಚ್. ಡಿ. ಕೋಳೇಕರ ಅವರು ಉಪಸ್ಥಿತರಿರುವರು ಎಂದು ಜಿಲ್ಲಾ ಮಾರುಕಟ್ಟೆ ಕೇಂದ್ರ -2 ಮುಖ್ಯ ವ್ಯವಸ್ಥಾಪಕರು ಗುರುಪ್ರಸಾದ್ ಕಾಮತ್ ಮತ್ತು ಕೃಷಿ ಅಭಿವೃದ್ಧಿ ಶಾಖೆಯ ಶಾಖಾ ವ್ಯವಸ್ಥಾಪಕರು ಪುಷ್ಪರಾಮ್ ಗಣೇಶ್ ಅವರು ತಿಳಿಸಿದ್ದಾರೆ.
****

Check Also

ಇಂದು ಬೆಳಗಾವಿಯಲ್ಲಿ ಬೃಹತ್ ಮೌನ ಮೆರವಣಿಗೆ ಹತ್ತು ಸಾವಿರ ರೇನ್ ಕೋಟ್ ವಿತರಣೆ

ಇಂದು ಬೆಳಗಾವಿಯಲ್ಲಿ ಬೃಹತ್ ಮೌನ ಮೆರವಣಿಗೆ ಹತ್ತು ಸಾವಿರ ರೇನ್ ಕೋಟ್ ವಿತರಣೆ ಬೆಳಗಾವಿ- ಪುಣ್ಯಕ್ಷೇತ್ರ ಧರ್ಮಸ್ಥಳದ ಕುರಿತು ಸರ್ಕಾರ …

Leave a Reply

Your email address will not be published. Required fields are marked *