ಬೆಳಗಾವಿ – ರಾಜ್ಯದಲ್ಲಿ ಇಂದಿನಿಂದ ನೈಟ್ ಕರ್ಪ್ಯೂ ವಿಚಾರದ ಕುರಿತು ಬೆಳಗಾವಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಪ್ರತಿಕ್ರಿಯೆ ನೀಡಿದ್ದಾರೆ.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು,
ಕೊರೊನಾ ಎರಡನೇ ಅಲೆ ಬರುವ ಸಾಧ್ಯತೆ ಹಿನ್ನಲೆ ರಾಜ್ಯದಲ್ಲಿ ನೈಟ್ ಕರ್ಪ್ಯೂ ಜಾರಿ ಮಾಡಲಾಗಿದೆ.
ಇಂದಿನಿಂದ ರಾಜ್ಯದಲ್ಲಿ ಒಂಬತ್ತು ದಿನಗಳ ಕಾಲ ನೈಟ್ ಕರ್ಪ್ಯೂ ಜಾರಿಯಾಗಿದ್ದು ಬಸ್ ಸಂಚಾರಕ್ಕೆ ಯಾವುದೇ ತೊಂದರೆ, ವ್ಯತ್ಯಯ ಆಗುವುದಿಲ್ಲ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಸಿಎಂಯವರು ಕರೆ ಮಾಡಿ ಸಾರಿಗೆ ಸಂಚಾರದಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳಲು ಹೇಳಿದ್ದಾರೆ.
ರಾತ್ರಿ ಹೊರಡುವ ಬಸ್ ಗಳಲ್ಲಿ ಯಾವುದೇ ವ್ಯತ್ಯಾಸ ಆಗಲ್ಲಾ. ಸರಕು ಸಾಕಾಣಿಕೆ ವಾಹನ ಸ್ಟಾರ್ಟ್ ಇರುತ್ತೆ ನೈಟ್ ಕರ್ಫ್ಯು ದಿಂದ ಸಾರಿಗೆ ಸಂಚಾರಕ್ಕೆ ತೊಂದರೆ ಆಗುವದಿಲ್ಲ ಎಂದು ಸಚಿವರು ಹೇಳಿದರು.
ಟ್ಯಾಕ್ಸಿ ಸಂಘ, ಬಾರ್ ಮಾಲೀಕರು ನೈಟ್ ಕರ್ಪ್ಯೂಗೆ ವಿರೋಧ ವಿಚಾರ. ಜೀವ ಅಮೂಲ್ಯ ಮೊದಲು ಜಿವ ಇದ್ದಾಗ ಎಲ್ಲಾ ಜೀವ ರಕ್ಷಣೆ ಮೊದಲ ಆದ್ಯತೆ.
ಸಂಜೆ ಐದು ಗಂಟೆ ಸುಮಾರಿಗೆ ಮಾರ್ಗಸೂಚಿ ಬಿಡುಗಡೆ ಮಾಡುತ್ತೇವೆ. ಡಿ.ಕೆ.ಸುರೇಶ್ ನೈಟ್ ಕರ್ಪ್ಯೂ ಗೆ ವಿರೋಧ ವಿಚಾರ ಪ್ರಶ್ನಿಸಿದಾಗ
ಮೊದಲಿನಿಂದಲೂ ಎಲ್ಲದಕ್ಕೂ ವಿರೋಧ ಮಾಡುವುದು ಪರಿಪಾಠ ಆಗಿದೆ. ಎಲ್ಲದಕ್ಕೂ ವಿರೋಧ ಮಾಡುವುದೇ ಧರ್ಮ ಅಂತಾ ತಿಳಿದ್ದಾರೆ, ಜೀವದ ಜತೆಗೆ ಚೆಲ್ಲಾಟ ಆಗಬಾರದು. ಮತ್ತೆ ಲಾಕ್ ಡೌನ್ ಆಗುವುದಿಲ್ಲ ಅಂತಾ ತಿಳಿದುಕೊಂಡಿದ್ದೇವೆ. ಮುಂಜಾಗ್ರತಾ ಕ್ರಮವಾಗಿ ನೈಟ್ ಕರ್ಪ್ಯೂ ಜಾರಿಮಾಡಿದ್ದೇವೆ ಎಂದು
ಬೆಳಗಾವಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.