ಬೆಳಗಾವಿ-ಮರಾಠಿ ಸಾಹಿತ್ಯ ಸಮ್ಮೇಳನಗಳನ್ನು ನಡೆಸುವ ಮೂಲಕ ಭಾಷಾ ವೈಷಮ್ಯದ ವಿಷ ಬೀಜ ಬಿತ್ತುತ್ತಿದೆ ಎಂದು,ಜಿಲ್ಲಾಡಳಿತ ಬೆಳಗಾವಿ ಜಿಲ್ಲೆಯಲ್ಲಿ ಮರಾಠಿ ಸಾಹಿತ್ಯ ಸಮ್ಮೇಳನ ನಡೆಸಲು ಅನುಮತಿ ನೀಡುವದನ್ನು ನಿಲ್ಲಿಸಿದ್ದು, ಮಹಾರಾಷ್ಟ್ರ ಏಕೀಕರಣ ಸಮೀತಿ ಈಬಾರಿ ಹೊಸ ಡವ್ ಶುರು ಮಾಡಿದೆ.
ಸಾಹಿತ್ಯ ಸಮ್ಮೇಳನ ನಡೆಸಲು ಅನುಮತಿ ಕೊಡಿ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸುವ ಬದಲು ಈ ಬಾರಿ ಸಾಹಿತ್ಯ ಸಮ್ಮೇಳನ ನಡೆಸಲು ಅನುದಾನ ಕೊಡಿ ಎಂದು ಡಿಸಿಗೆ ಮನವಿ ಅರ್ಪಿಸಿದೆ.
ಜನೇವರಿ ,ಫೇಬ್ರುವರಿ,ಮಾರ್ಚ ತಿಂಗಳುಗಳಲ್ಲಿ ,ಬೆಳಗಾವಿ ತಾಲ್ಲೂಕಿನ ಉಚಗಾಂವ,ಕುದ್ರೇಮನಿ,ಕಡೋಲಿ ,ಯಳ್ಳೂರು,ನೀಲಜಿ,ಸಾಂಬ್ರಾ,ಬೆಳಗುಂದಿ ಸೇರಿದಂತೆ ,ಖಾನಾಪೂರ,ನಿಪ್ಪಾಣಿ,ಚಿಕ್ಕೋಡಿ ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ,ಪ್ರತಿ ವರ್ಷ ಮರಾಠಿ ಸಾಹಿತ್ಯ ಸಮ್ಮೇಳನ ನಡೆಸುತ್ತಾ ಬಂದಿದ್ದೇವೆ. ಈ ಸಮ್ಮೇಳನಗಳಲ್ಲಿ ಕನ್ನಡ ಮತ್ತು ಉರ್ದು ಭಾಷಿಕರು ಭಾಗವಹಿಸುತ್ತಾರೆ.ಮರಾಠಿ ಸಾಹಿತ್ಯ ಸಮ್ಮೇಳನಗಳಲ್ಲಿ ಸ್ಥಳೀಯ ಅತಿಥಿಗಳು ಮಾತ್ರ ಭಾಗವಹಿಸುತ್ತಾರೆ ಎಂದು ಎಂಈಎಸ್ ಮನವಿ ಪತ್ರದಲ್ಲಿ ತಿಳಿಸಿದೆ.
ಕರ್ನಾಟಕ ಸರ್ಕಾರ ಮರಾಠಾ ಅಭಿವೃದ್ಧಿ ನಿಗಮ ಸ್ಥಾಪಿಸಿ 50 ಕೋಟಿ ರೂ ಅನುದಾನ ನೀಡಿದ್ದು ಈ ಅನುದಾನದ ಮೇಲೆ ಕಣ್ಣು ಹಾಕಿದೆ ಎಂಈಎಸ್ ,ಮರಾಠಿ ಸಾಹಿತ್ಯ ಮಹಾಮಂಡಳ ಎಂಬ ಹೆಸರಿನಲ್ಲಿ ಅನುದಾನ ಪಡೆಯಲು ಹುನ್ನಾರ ನಡೆಸಿದೆ.