ಬೆಳಗಾವಿ- ಕೊವ್ಯಾಕ್ಸಿನ್ ತುರ್ತು ಬಳಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು ಸಂತಸ ತಂದಿದೆ ಎಂದುಬೆಳಗಾವಿಯಲ್ಲಿ ಡಾಕ್ಟರ್ ಅಮಿತ್ ಭಾತೆ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾದ್ಯಮ ಮಿತ್ರರ ಜೊತೆ ಮಾತನಾಡಿದ ಅವರು, ಕೋವ್ಯಾಕ್ಸಿನ್ ಬಳಕೆ ಅನುಮತಿ ಕೊಟ್ಟಿದ್ದು ಸಂತಸ ತಂದಿದೆ, ಕೊರೊನಾ ವಾರಿಯರ್ಸ್ ಗೆ ಮೊದಲ ಹಂತದಲ್ಲಿ ಲಸಿಕೆ ನಂತರ 50 ವರ್ಷದ ಮೇಲ್ಪಟ ಹಿರಿಯ ನಾಯಕರಿಗೆ ಲಸಿಕೆ
ಮೊದಲು ಹಂತ ಲಸಿಕೆ ಪ್ರಯೋಗ ಮಾಡಿದಾಗ ತುಂಬ ಕಷ್ಟ ಇತ್ತು ಮೊದಲು ಸ್ವಯಂ ಸೇವಕರು ಮುಂದೆ ಬರಲಿಲ್ಲ ಕೊರೊನಾ ಸೋಂತರು ಅಲ್ಲದವರ ಹುಡುಕಿ ಪ್ರಯೋಗ ನಡೆಸಿದ್ದೇವೆ, ಮೊದಲ ಹಂತದಲ್ಲಿ 4 ಜನ, ಎರಡನೇ ಹಂತದಲ್ಲಿ 50 ಜನರ ಮೇಲೆ ಪ್ರಯೋಗ
ಮೂರನೇ ಹಂತದಲ್ಲಿ 2 ಸಾವಿರಕ್ಕೂ ಹೆಚ್ಚು ಜನರ ಪ್ರಯೋಗ ಮಾಡಲಾಗಿದೆ ಎಂದರು.
ಅಡ್ಡ ಪರಿಣಾಮದ ಭಯದಿಂದ ಅನೇಕರು ವ್ಯಾಕ್ಸಿನ್ ತೆಗೆದುಕೊಳ್ಳಲು ಭಯ ಪಟ್ಟರು ಯಾರೊಬ್ಬರ ಮೇಲೆ ವ್ಯಾಕ್ಸಿನ್ ಅಡ್ಡ ಪರಿಣಾಮ ಬೀರಿಲ್ಲ ಎರಡನೇ ಹಂತದಲ್ಲಿ ವ್ಯಾಕ್ಸಿನ್ 28 ದಿನಗಳ ಬಳಿಕ ಹಾಕುತ್ತೇವೆ
ದೇಶದ 12 ಸೆಂಟರ್ ಗಳಲ್ಲಿ ಕೊವ್ಯಾಕ್ಸಿನ್ ಪ್ರಯೋಗ ನಡೆದಿತ್ತು.ಈ ಹನ್ನೆರಡು ಸೆಂಟರ್ ಗಳಲ್ಲಿ ಬೆಳಗಾವಿಯ ಸೆಂಟರ್ ಸೇರಿದೆ.