Breaking News

ಬೆಳಗಾವಿ ಗ್ರಾಮೀಣದಲ್ಲಿ ನಮ್ಮ ಕ್ಯಾಂಡೀಡೇಟ್ ಅದ್ರ ಇಲ್ಲ ಬಿಡಿ- ಸತೀಶ್ ಜಾರಕಿಹೊಳಿ

ಬೆಳಗಾವಿ- ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸಾಮಾನ್ಯ ಕಾರ್ಯಕರ್ತನ ನಿಲ್ಲಿಸಿ ಗೆಲ್ಲಿಸುವೆ ಎಂಬ ರಮೇಶ್ ಜಾರಕಿಹೊಳಿ‌ ಹೇಳಿಕೆ ವಿಚಾರವನ್ನು ಮಾದ್ಯಮಗಳು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರನ್ನು ಕೇಳಿದಾಗ, ನಿಲ್ಲಾವ್ರು ಗಟ್ಟಿ ಇದಾರೆ, ನಮ್ಮ ಕ್ಯಾಂಡಿಡೇಟ್ ಗಟ್ಟಿ ಇದೆ, ನಮ್ಮ ಕ್ಯಾಂಡಿಡೇಟ್ ಕೂಡಾ ಅದ್ರ ಇಲ್ಲಾ ಬಿಡಿ ನಮ್ಮದು ಕ್ಯಾಂಡಿಡೇಟ್ ಕೂಡಾ ಗಟ್ಟಿ ಇದೆ ಎಂದು ಸತೀಶ್ ಜಾರಕಿಹೊಳಿ ಉತ್ತರಿಸಿದರು.

ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಲಕ್ಷ್ಮೀ ಹೆಬ್ಬಾಳ್ಕರ್ ಪರ ಸತೀಶ್ ಜಾರಕಿಹೊಳಿ‌ ಬ್ಯಾಟಿಂಗ್ ಮಾಡಿದ್ದಾರೆ. ಅಖಾಡದಲ್ಲಿದ್ದೋರು ಸಮರ್ಥವಾಗಿ ನಿಭಾಯಿಸುತ್ತಾರೆ, ಉಪಚುನಾವಣೆ ವೇಳೆ ರಮೇಶ್ ಜಾರಕಿಹೊಳಿ‌ ‘ವಸ್ತು’ ಕಳೆದುಕೊಂಡಿದ್ದಾರೆ ಎಂಬ ಸತೀಶ್ ಹೇಳಿಕೆ ವಿಚಾರ, ಆ ವಸ್ತು ಸಿಕ್ಕಿತಾ ಅಂತಾ ಮಾಧ್ಯಮವರ ಪ್ರಶ್ನೆಗೆ ಸತೀಶ್ ಜಾರಕಿಹೊಳಿ‌ ಉತ್ತರ, ನೋಡೋಣ ಅದಕ್ಕಾಗಿ ಕಮಿಟಿ ರಚಿಸೋಣ ಎಂದ ಸತೀಶ್ ಜಾರಕಿಹೊಳಿ‌ ಹೇಳದರು.

ಬೆಳಗಾವಿ ಗ್ರಾಮೀಣ ಕ್ಷೇತ್ರ ನಂದು ಎಂಬ ರಮೇಶ್ ಜಾರಕಿಹೊಳಿ‌ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸತೀಶ್ ಜಾರಕಿಹೊಳಿ,ರಮೇಶ್ ಜಾರಕಿಹೊಳಿ‌ ಹೇಳಿಕೆಗೆ ಮೆಡಮ್ ಉತ್ತರ ಕೊಟ್ಟಿದ್ದಾರೆ, ತಮ್ಮ ಕ್ಷೇತ್ರ ಗಟ್ಟಿ ಇದೆ, ಭದ್ರ ಇದೆ ನಮ್ಮ ಹಿಡಿತದಲ್ಲಿದೆ ಅಂತಾ ಹೇಳಿದ್ದಾರೆ, ಅದು ಒಂದು ಕ್ಷೇತ್ರಕ್ಕೆ ಸಂಬಂಧಿಸಿದ ಲೆಕ್ಕ, ಜಿಲ್ಲೆ ಮಟ್ಟದ್ದಾದರೇ ನಾವು ಹೇಳ್ತೀವಿ ಎಂದರು.

ಲಕ್ಷ್ಮೀ ಹೆಬ್ಬಾಳ್ಕರ್ ಪ್ರಬಲವಾಗಿ ಇದ್ದಾರೆ, ಹೆಚ್ಚು ಗ್ರಾ.ಪಂ.ಗಳಲ್ಲಿ ಗೆದ್ದಿದೀವಿ, ಅವರ ಹಿಡಿತದಲ್ಲಿ ಕ್ಷೇತ್ರ ಇದೆ ಅಂತಾ ಇದು ತೋರಿಸುತ್ತದೆ. ಮೆಡಮ್ ನೇತೃತ್ವದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಹೆಚ್ಚು ಗ್ರಾ.ಪಂ.ಗಳ ಗೆಲುವು ಸಾಧಿಸಿದ್ದೇವೆ. ಜನ ಸೇರಿಸೋಕೆ ಎಲ್ಲರಿಗೂ ಬರುತ್ತೆ, ಎಲ್ಲ ಪಕ್ಷದವರು ಸೇರಿಸುತ್ತಾರೆ, ಜನ ಸೇರಿಸೋದು ರಾಜಕೀಯ ಪಕ್ಷಕ್ಕೇನು ಹೊಸದಲ್ಲ, ಆದರೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆದ್ದಿದ್ದು ಈಗಾಗಲೇ ಸಾಬೀತಾಗಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

Check Also

ರಾತ್ರಿ ಮಠದಲ್ಲಿ ಲೇಡಿ……..ಗ್ರಾಮಸ್ಥರಿಂದ ಮುತ್ತಿಗೆ ಮಠದಿಂದ ಸ್ವಾಮೀಜಿ ಉಚ್ಛಾಟನೆ

ಮೂಡಲಗಿ : ತಾಲೂಕಿನ ಶಿವಾಪೂರ(ಹ) ಗ್ರಾಮದ ಅಡವಿ ಸಿದ್ದೇಶ್ವರ ಮಠದ ಅಡವಿಸಿದ್ದರಾಮ ಸ್ವಾಮೀಜಿಯ ಅಕ್ರಮ ಸಂಭಂದದ ಆರೋಪದ ಹಿನ್ನಲೆ ಇಡೀ …

Leave a Reply

Your email address will not be published. Required fields are marked *