Breaking News
Home / Breaking News / ಬೆಳಗಾವಿ ಜಿಲ್ಲೆಯ  (ವಿ) ” ಭಜನೆಗೆ” 23 ವರ್ಷಗಳ ಇತಿಹಾಸ…!!!

ಬೆಳಗಾವಿ ಜಿಲ್ಲೆಯ  (ವಿ) ” ಭಜನೆಗೆ” 23 ವರ್ಷಗಳ ಇತಿಹಾಸ…!!!

ಬೆಳಗಾವಿ-ಬೆಳಗಾವಿ ಜಿಲ್ಲೆಯನ್ನು ಎರಡೊಮೂರೊ ತುಕುಡಿ ಮಾಡಿ ಒಡೆಯಬೇಕೆಂಬಚ ರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.ಮೂರೊನಾ ಲ್ಕೊ ವರ್ಷಕ್ಕೊಮ್ಮೆ ವಿಭಜನೆಯೆಂಬ”  ಭಜನೆ” ನಡೆಯುತ್ತಲೇ ಇರುತ್ತದೆ.ಜನತೆಯಹಾಗೂ ಆಡಳಿತದ ಹಿತದೃಷ್ಟಿಯಿಂದ ಎಂಬ ಕಾರಣವೊಡ್ಡಿ ಜಿಲ್ಲೆಯನ್ನು ಮೂರುಭಾ ಗಗಳನ್ನಾಗಿ ಒಡೆಯಬೇಕೆಂಬ ಮಾತಿಗೆ ಬಹುತೇಕ ರಾಜಕೀಯ ಕಾರಣಗಳೇಇವೆ.

ಜಿಲ್ಲೆಯ ವಿಭಜನೆಗೆ 23 ವರ್ಷಗಳ
ಇತಿಹಾಸವೇ ಇದೆ.1997 ರ ಅಗಷ್ಟ 22 ರಂದು ನಡೆದ ಸಚಿವ ಸಂಪುಟ ಕೈಕೊಂಡ ನಿರ್ಧಾರದಂತೆ ಜಿಲ್ಲೆಯನ್ನು ಬೆಳಗಾವಿ ಚಿಕ್ಕೋಡಿ ಮತ್ತು ಗೋಕಾಕ ಜಿಲ್ಲೆಗಳನ್ನಾಗಿ ವಿಭಜಿಸಲಾಗಿತ್ತು.ಬೆಳಗಾವಿ ಜಿಲ್ಲೆಯಲ್ಲಿ ಕೇವಲ ಮೂರು ತಾಲೂಕುಗಳನ್ನು ಸೇರಿಸಲಾಗಿತ್ತು.ಬೆಳಗಾವಿ ಹುಕ್ಕೇರಿ ಮತ್ತು ಖಾನಾಪುರ, ಚಿಕ್ಕೋಡಿ ಜಿಲ್ಲೆಯಲ್ಲಿ ಚಿಕ್ಕೋಡಿ ರಾಯಬಾಗ ಮತ್ತು ಅಥಣಿ ಮತ್ತು ಗೋಕಾಕ ಜಿಲ್ಲೆಯಲ್ಲಿ ಗೋಕಾಕ ಬೈಲಹೊಂಗಲ ಸವದತ್ತಿ ಮತ್ತು ರಾಮದುರ್ಗ ತಾಲೂಕುಗಳನ್ನು ಸೇರಿಸಿ ಅಂದಿನ ಜೆ.ಎಚ್.ಪಟೇಲ ಸರಕಾರ ವಿಭಜನೆ ಮಾಡಿತ್ತು. ಅಗಷ್ಟ 22 ರಂದು ಅತ್ತ ಬೆಂಗಳೂರಿನಲ್ಲಿ ಸಚಿವ ಸಂಪುಟ ಸಭೆಯು ಸಂಜೆ 5 ಗಂಟೆಗೆ ನಿರ್ಧಾರ ಕೈಗೊಳ್ಳುವ ಸಮಯದಲ್ಲೇ ಇತ್ತ ಅದೇ ಹೊತ್ತಿಗೆ ಬೆಳಗಾವಿಯಲ್ಲಿ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಹಾಗೂ ಮಾಜಿ ಮಹಾಪೌರ ದಿ.ಸಿದ್ದನಗೌಡ ಪಾಟೀಲ ಅವರು ಜಂಟೀ ಪತ್ರಿಕಾ ಗೋಷ್ಠಿ ನಡೆಸಿ
ವಿಭಜನೆಯನ್ನು ವಿರೋಧಿಸಿದರು.ಅದೇ ದಿನ ನಾಡಿನ ದಿನಪತ್ರಿಕೆಯೊಂದು ಜಿಲ್ಲೆಯನ್ನು ವಿಭಜಿಸುವ ನಿರ್ಧಾರವನ್ನು ಮುಂಚಿತವಾಗಿಯೇ ಮುಖ್ಯ ಸುದ್ದಿಯನ್ನಾಗಿ ಮುಖಪುಟದಲ್ಲಿ ಪ್ರಕಟಿಸಿತ್ತು.ಇದನ್ನು
ಆಧರಿಸಿಯೇ ಪತ್ರಿಕಾ ಪರಿಷತ್ತಿನಲ್ಲಿ ವಿರೋಧ ವ್ಯಕ್ತಪಡಿಸಲಾಗಿತ್ತು.

ಅಗಷ್ಟ 24 ರಂದು ನೂತನ ಹಾವೇರಿ ಜಿಲ್ಲೆಯ ಉದ್ಘಾಟನೆಗೆ ಆಗಮಿಸಿದ ಮುಖ್ಯಮಂತ್ರಿ ಪಟೇಲರನ್ನು ರಾತ್ರಿ 11 ಗಂಟೆಗೆ ಹುಬ್ಬಳ್ಳಿಯ ನವೀನ್ ಹೊಟೆಲ್ ನಲ್ಲಿ ಭೆಟ್ಟಿಯಾದ ಕ್ರಿಯಾ ಸಮಿತಿಯ ನಿಯೋಗವು ವಿಭಜನೆಯನ್ನು ತೀವ್ರವಾಗಿ ವಿರೋಧಿಸಿತು.” ಇದರಲ್ಲಿ ನನ್ನ ತಪ್ಪೇನೂ ಇಲ್ಲ.ನಿಮ್ಮ ಜಿಲ್ಲೆಯ 11 ಜನತಾ ದಳದ ಶಾಸಕರೇ ನಿರ್ಧಾರ ಕೈಗೊಂಡಿದ್ದಾರೆ” ಎಂದು ಪಟೇಲರು ಹೇಳಿದಾಗ ಅಶೋಕ ಚಂದರಗಿ ಅವರೂ ಮುಖ್ಯಮಂತ್ರಿಗಳಿಗೆ ಖಡಕ್ ಆಗಿಯೇ ಉತ್ತರಿಸಿ,” ಕೇವಲ ಶಾಸಕರೆಂದರೆ ಜಿಲ್ಲೆಯಲ್ಲ.ನಾವು ನಾಳೆಯಿಂದಲೇ  ಆಂದೋಲನ ಆರಂಭಿಸುತ್ತೇವೆ” ಎಂದು ಹೇಳಿಯೇ ಅಲ್ಲಿಂದ ಹೊರಬಂದರು.
ಅಗಷ್ಟ 25 ರಿಂದಲೇ ಸಭೆಗಳು, ಪ್ರತಿಭಟನೆಗಳು ಆರಂಭಗೊಂಡವು.ಮೊಟ್ಟಮೊದಲು ರಾಮದುರ್ಗದಲ್ಲಿ ಪಟೇಲರ ಪ್ರತಿಕೃತಿಯನ್ನು ಶಂಕರ ಮುನವಳ್ಳಿ ಸುಟ್ಟರು.ಅಲ್ಲಿಂದ ಹೊತ್ತಿಕೊಂಡ ಕಿಡಿಯು ಸವದತ್ತಿ ಬೈಲಹೊಂಗಲ ಖಾನಾಪುರ ಬೆಳಗಾವಿ ಹುಕ್ಕೇರಿಗಳಿಗೆ ಹಬ್ಬಿತು. ಸೊಗಲದಲ್ಲಿ ಆರು ತಾಲೂಕುಗಳ ಸಭೆಯು ನಾಗನೂರು ರುದ್ರಾಕ್ಷಿ ಮಠದ  ಶ್ರೀ ಸಿದ್ದರಾಮ ಸ್ವಾಮಿಗಳು ಮತ್ತು ಇತರ ಮಠಾಧೀಶರ ಸಾನಿಧ್ಯದಲ್ಲಿ ನಡೆದು ಚಳವಳಿ ಇನ್ನಷ್ಟು ತೀವ್ರಗೊಂಡಿತು.ಜಿಲ್ಲಾ ವಿಭಜನೆ ವಿರೋಧಿ ಸಮಿತಿಯ ರಚನೆಯೂ ಆಯಿತು.
ಈ ಚಳವಳಿ ತೀವ್ರಗೊಂಡಾಗ ಜನತಾ ದಳದ ಶಾಸಕರು ಮಂತ್ರಿಗಳು ತಮ್ಮ ಮತಕ್ಷೇತ್ರಗಳಿಗೆ ಕಾಲಿಡುವದು ಕಷ್ಟವಾಯಿತು.ಶಾಸಕರ ಅಣುಕು ಶವಯಾತ್ರೆ ನಡೆದವು.ದಿವಂಗತ ಮುಖ್ಯಮಂತ್ರಿಗಳಾದ ನಿಜಲಿಂಗಪ್ಪ, ರಾಮಕೃಷ್ಣ ಹೆಗಡೆ ಮತ್ತು ಪಾಟೀಲ ಪುಟ್ಟಪ್ಪ ಅವರೂ ಸಹ ಪಟೇಲರ ನಿರ್ಧಾರವನ್ನು ವಿರೋಧಿಸಿದರು.

ಸಪ್ಟೆಂಬರ್ 21 ರಂದು ಪಟೇಲ ಸರಕಾರ ಚಳವಳಿಗೆ ಮಣಿಯಿತು.ಮಹಾಜನ ವರದಿ ಜಾರಿಯಾಗಿ ಗಡಿ ಸಮಸ್ಯೆ ಪರಿಹಾರವಾಗುವವರೆಗೂ ಬೆಳಗಾವಿ ಜಿಲ್ಲೆಯನ್ನು ವಿಭಜಿಸದೇ ಅಖಂಡವಾಗಿಯೇ ಉಳಿಸಿಕೊಳ್ಳುವದಾಗಿ ವಿಧಾನಸಭೆಯಲ್ಲೇ ಘೋಷಿಸಲಾಯಿತು. ಸವದತ್ತಿಯ ಶಾಸಕ ದಿ.ಚಂದ್ರಶೇಖರ ಮಾಮನಿಯವರು ಸಭಾಧ್ಯಕ್ಷರಾಗಿದ್ದರು.ಎ.ಬಿ.ಪಾಟೀಲರು ಸಂಕೇಶ್ವರದ ಮತ್ತು ಉಮೇಶ ಕತ್ತಿ ಹುಕ್ಕೇರಿಯ ಶಾಸಕರಾಗಿದ್ದರು.ಅವರೇ ಜನತಾದಳದ ಪ್ರಬಲ ನಾಯಕರಾಗಿ ಜಿಲ್ಲೆಯನ್ನು ಮೂರು ಭಾಗಗಳನ್ನಾಗಿ
ಒಡೆಯುವ ನಿರ್ಧಾರ ಕೈಗೊಳ್ಳಲು
ಕಾರಣರಾಗಿದ್ದರು.

ಚಿಕ್ಜೋಡಿ ಜಿಲ್ಲೆಯಲ್ಲಿ ಸೇರಲು ರಾಯಬಾಗ ಮತ್ತು ಅಥಣಿ ತಾಲೂಕುಗಳ ಜನತೆಯ ಸಹಮತವಿತ್ತು.ಆದರೆ ಗೋಕಾಕ ಜಿಲ್ಲೆಯಲ್ಲಿ ಸೇರಲು ರಾಮದುರ್ಗ ಸವದತ್ತಿ ಮತ್ತು ಬೈಲಹೊಂಗಲ ತಾಲೂಕುಗಳ ಜನತೆಯ ತೀವ್ರ ವಿರೋಧವಿತ್ತು.ಈಗಲೂ ಇದ್ದೇ ಇದೆ.
1997 ರಲ್ಲೇ ಬೆಳಗಾವಿ ಜಿಲ್ಲೆಯನ್ನು ಎರಡೇ ಜಿಲ್ಲೆಯನ್ನಾಗಿ ಒಡೆದಿದ್ದರೆ
ಬೃಹತ್ ಆಂದೋಲನ ನಡೆಯುತ್ತಿರಲಿಲ್ಲ.ಮೂರು ಜಿಲ್ಲೆ ಮಾಡಿದ್ದರಿಂದ ಚಳವಳಿಯ ಕಿಡಿಯು
ಹೊತ್ತಿಕೊಂಡಿತೆನ್ನಬಹುದು.

Check Also

ಗೋ ಬ್ಯಾಕ್ ಸಂಧಾನಕ್ಕಾಗಿ ,ದಿಢೀರ್ ಬೆಳಗಾವಿಗೆ ಯಡಿಯೂರಪ್ಪ…!!

ಬೆಳಗಾವಿ- ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಬೆಳಗಾವಿ ಕ್ಷೇತ್ರದಿಂದ ಸ್ಪರ್ದಿಸುವ ವಿಚಾರದಲ್ಲಿ ಬಿಜೆಪಿಯಿಂದಲೇ ಗೋ ಬ್ಯಾಕ್ ಆಂದೋಲನ ಶುರುವಾದ …

Leave a Reply

Your email address will not be published. Required fields are marked *