Breaking News

ಹಿಂಡಲಗಾ ಜೈಲಿನಲ್ಲಿ ವಿನಯ್ ಕುಲಕರ್ಣಿಯನ್ನು ಭೇಟಿಯಾದ ಕುಟುಂಬಸ್ಥರು…

ಬೆಳಗಾವಿ -ವಿನಯ್ ಕುಲಕರ್ಣಿ ಕುಟುಂಬಸ್ಥರು ಇಂದು ಬೆಳಗಾವಿ ಹಿಂಡಲಗಾ ಜೈಲಿಗೆ ಆಗಮಿಸಿ ವಿನಯ್ ಕುಲಕರ್ಣಿ ಅವರನ್ನು ಭೇಟಿಯಾದರು.

ಜಿ.ಪಂ.ಸದಸ್ಯ ಯೋಗೇಶ್‌ಗೌಡ ಕೊಲೆ ಕೇಸ್‌ನಲ್ಲಿ ಜೈಲು ಸೇರಿರುವ ವಿನಯ್ ಕುಲಕರ್ಣಿ ಹಲವಾರು ದಿನಗಳಿಂದ ಹಿಂಡಲಗಾ ಜೈಲಿನಲ್ಲಿದ್ದಾರೆ.
ವಿನಯ್ ಕುಲಕರ್ಣಿ ಭೇಟಿಗೆ ಅವಕಾಶ ಕೋರಿ ಕೋರ್ಟ್‌ಗೆ ಮನವಿ ಮಾಡಿದ್ದ ಕುಟುಂಬದ ಸದಸ್ಯರು
ಇಂದು ಸಂಜೆ 4 ರಿಂದ 5 ಗಂಟೆಯವರೆಗೆ ಭೇಟಿಗೆ ಅವಕಾಶ ನೀಡಿದ್ದ ಕೋರ್ಟ್.ಆದೇಶದಂತೆ ಭೇಟಿಯಾದರು.

ಈ ಹಿಂದೆ ಡಿಸೆಂಬರ್ 10ರಂದು ವಿನಯ್ ಕುಲಕರ್ಣಿ ಭೇಟಿಯಾಗಿದ್ದ ಕುಟುಂಬಸ್ಥರು. ಇಂದು ಎರಡನೇ ಬಾರಿ ವಿನಯ್ ಕುಲಕರ್ಣಿ ಭೇಟಿಗೆ ಆಗಮಿಸಿದ್ದರು. ಪತ್ನಿ ಹಾಗೂ ಸಹೋದರ.ಜೈಲಿನ ಒಳಗೆ ಹೋಗಿ ವಿನಯ್ ಕುಲಕರ್ಣಿ ಅವರನ್ನು ಭೇಟಿಯಾದರು. ಜೈಲಿನ ಹೊರಗೆ ಕಾರಿನಲ್ಲಿ ಮಕ್ಕಳು ಕುಳಿತುಕೊಂಡಿದ್ದರು.

Check Also

ವೀರ ಮದಕರಿ ಪುತ್ಥಳಿ ಸ್ಥಾಪನೆ- ಸ್ಥಳ ಪರಿಶೀಲಿಸಿ ವರದಿ ನೀಡಲು ಸೂಚನೆ:

ಪರಿಶಿಷ್ಟರ ದೂರು ನಿವಾರಣೆಗೆ ತ್ವರಿತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ಬೆಳಗಾವಿ, -: ಪರಿಶಿಷ್ಟ ಜಾತಿ/ವರ್ಗಗಳ ದೌರ್ಜನ್ಯ …

Leave a Reply

Your email address will not be published. Required fields are marked *