ಬೆಳಗಾವಿ- ಸತೀಶ್ ಜಾರಕಿಹೋಳಿಗೆ ರಮೇಶ್ ಜಾರಕಿಹೋಳಿ ತಿರಿಗೇಟು ನೀಡಿದ್ದಾರೆ. ಸತೀಶ್ ಜಾರಕಿಹೋಳಿ ಹೇಳಿಕೆ ನನಗೆ ನಗು ಜೊತೆಗೆ ವಿಚಿತ್ರ ಎನಿಸುತ್ತಿದೆ ಸತೀಶ್ ಜಾರಕಿಹೊಳಿ ಕೃತಕ ರಾಜಕಾರಣಿ ಎಂದು ರಮೇಶ್ ಜಾರಕಿಹೊಳಿ ಸಹೋದರ ಸತೀಶ್ ಗೆ ಟಾಂಗ್ ಕೊಟ್ಟಿದ್ದಾರೆ.
ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ನಮ್ಮ ತಂದೆ ಲಕ್ಷ್ಮಣರಾವ್ ಜಾರಕಿಹೋಳಿ ಬಗ್ಗೆ ಮಾದ್ಯಮದವರೇ ಗೋಕಾಕ್ ಗೆ ಹೋಗಿ ಚೆಕ್ ಮಾಡಬಹುದು, ಜನಸಂಘದಿಂದ ಬಂದಿದ್ದು ನಿಜ, ಕಾಂಗ್ರೆಸ್ ನಲ್ಲಿ ಜಾತ್ಯಾತೀತ ಆಗಿದ್ದು ನಿಜ, ಅಜಮೀರ್ ಗೆ ಹೋಗಿ ಮುಸ್ಲಿಂ ಟೋಪಿ ಹಾಕಿದ್ದು ನಿಜ, ಮುಸ್ಲಿಂ ಕಾರ್ಯಕ್ರಮಕ್ಕೆ ಹೋದ್ರೆ ಟೋಪಗಿ ಹಾಕ್ತಾರೆ,ಹಿಂದೂ ಕಾರ್ಯಕ್ರಮಕ್ಕೆ ಹೋದ್ರೆ ರುಮಾಲು ಹಾಕುತ್ತಾರೆ ಇದನ್ನೇ ರಾಜಕೀಯ ಮಾಡಲಾಗುತ್ತಿದೆ ಎಂದು ರಮೇಶ್ ಜಾರಕಿಹೊಳಿ ಆರೋಪಿಸಿದರು.
ಈಗಲೂ ನಾನು ಹಿಂದೂ- ಮುಸ್ಲಿಂ ಪರವಾಗಿಯೇ ಇದ್ದೇನೆ, ಸತೀಶ್ ಜಾರಕಿಹೋಳಿಗೆ ನಾನು ಬಾಲ್ಯದಲ್ಲಿ ಕಾಲೇಜಿನ ಚುನಾವಣೆಯಲ್ಲಿ ಬೋರ್ಡ್ ಬರೆಯಲು ಕಳುಹಿಸುತ್ತಿದ್ದೆ, ಸತೀಶ ಜಾರಕಿಹೋಳಿ ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ ಮುಂದೆ ಸಿಎಂ ಆಗೋದು ಬೇರೆ ಇರಲಿ, ಎಲ್ಲ ಅಧಿಕಾರ ಕಳೆದುಕೊಳ್ಳುತ್ತಾನೆಮುಂದಿನ ಚುನಾವಣೆಯಲ್ಲಿ ಯಮಕನಮರಡಿಯಲ್ಲಿ ಗೆದ್ದು ತೋರಿಸಲಿ, ಆ ಮೇಲೆ ನೋಡೋಣ, ನಿಜವಾಗಿಯೂ ಆತ ಜಾರಕಿಹೋಳಿ ಮನುಷ್ಯ ನಾಗಿದ್ದರೆ ಈ ವಿಚಾರ ಮಾತನಾಡುತ್ತಿರಲಿಲ್ಲ ಎಂದು ರಮೇಶ್ ಜಾರಕಿಹೊಳಿ ಸತೀಶ್ ಜಾರಕಿಹೊಳಿ ವಿರುದ್ಧ ಕಿಡಿ ಕಾರಿದ್ದಾರೆ.
ಸತೀಶ್ ಜಾರಕಿಹೋಳಿ ರಾಜಕಾರಣಿಯೇ ಅಲ್ಲ ಆತ ಕೃತಕ ರಾಜಕಾರಣಿ , ನಾನು ಪಕ್ಷದ ವರಿಷ್ಠ ಅಲ್ಲ, ಸಾಮಾನ್ಯ ಕಾರ್ಯಕರ್ತ ಜನರೇಣುಕಾಚಾರ್ಯ ಹೇಳಿಕೆಗೆ ರಮೇಶ್ ಜಾರಕಿಹೋಳಿ ಪ್ರತಿಕ್ರಿಯೆ
ರೇಣುಕಾಚಾರ್ಯ, ಯತ್ನಾಳ್, ವಿಶ್ವನಾಥ ಅವರಿಗೆ ಮನವಿ ಮಾಡುತ್ತೇನೆ ಶಿಸ್ತಿನ ಪಕ್ಷ ಇರುವುದರಿಂದ ಭಿನ್ನಾಭಿಪ್ರಾಯ ಇದ್ರೆ ಕುಳಿತು ಮಾತನಾಡಿ
ರೇಣುಕಾಚಾರ್ಯ ಅವರು ನನ್ನ ಗೆಳೆಯಾ, ಆತನನ್ನು ಕರೆದು ಮಾತನಾಡುತ್ತೇನೆ ಸಿಎಂ ಯೋಗೇಶ್ವರ ವ್ಯವಹಾರದಲ್ಲಿ ನಷ್ಟ ಇದ್ದೇ ಇರುತ್ತೆ ಕೋರ್ಟನಲ್ಲಿ ಆರೋಪಿ ಅಂತ ಸಾಭೀತಾಗುವವರೆಗೂ ಆರೋಪಿ ಎನ್ನುವುದು ತಪ್ಪು ವಿಶ್ವನಾಥ ಬಾಂಬೆ ಡೇ ಪುಸ್ತಕ ಬರೆಯಲಿ, ಒಳ್ಳೆಯದು ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.