Breaking News

ರಾತ್ರಿ ಹೊತ್ತು ಪೋಲೀಸರ ಗಸ್ತು….ಹಗಲು ಹೊತ್ತು ಕಳ್ಳರ ಮಸ್ತು…ಕಳ್ಳರ ಹಾವಳಿಯಿಂದ ಜನ ಸುಸ್ತೋ ಸುಸ್ತು.!!!

ಬೆಳಗಾವಿಯಲ್ಲಿ ಹಾಡುಹಗಲೇ ಕಳ್ಳತನ 100 ಗ್ರಾಂ ಬಂಗಾರ ,2 ಲಕ್ಷ ರೂ ಸ್ವಾಹಾ….!!

,ಬೆಳಗಾವಿ- ಬೆಳಗಾವಿ ನಗರ ಹೊಸ ವರ್ಷದ ಆಚರಣೆಯ ಮೂಡ್ ನಲ್ಲಿರುವಾಗ ಸುಭಾಷ್ ನಗರದ ಮನೆಯನ್ನು ಟಾರ್ಗೇಟ್ ಮಾಡಿರುವ ಕಳ್ಳರು ಮನೆಯ ಲಾಕ್ ಮುರಿದು ಬಂಗಾರದ ಆಭರಣ ಮತ್ತು ನಗದು ಹಣವನ್ನು ದೋಚಿದ್ದಾರೆ

ಮನೆಗೆ ಕೀಲಿ ಹಾಕಿ ಶನಿವಾರ ಬೆಳಿಗ್ಗೆ ಸಮಂಧಿಕರ ಮನೆಗೆ ಹೋದ ಸಂಧರ್ಭದಲ್ಲಿ ಮನೆಯ ಲಾಕ್ ಮುರಿದು ಮನೆಯೊಳಗೆ ನುಗ್ಗಿರುವ ಕಳ್ಳರು ಟ್ರೇಝರಿಯ ಲಾಕ್ ಮುರಿದು ಹತ್ತು ತೊಲೆ ಬಂಗಾರದ ಆಭರಣ ಮತ್ತು ಎರಡು ಲಜ್ಷ ರೂ ನಗದು ಹಣವನ್ನು ದೋಚಿದ್ದಾರೆ

ಸುಭಾಷ್ ನಗರದ ಎರಡನೇಯ ಕ್ರಾಸ್ ನಲ್ಲಿರುವ ರಪೀಕ ಸನದಿ ಎಂಬಾತರ ಮನೆಯಲ್ಲಿ ಈ ಕಳ್ಳತನ ನಡೆದಿದ್ದು ಕಳ್ಳರು ಮನೆಯಲ್ಲಿದ್ದ ಎಲ್ಲ ಸಾಮುಗ್ರಿಗಳನ್ನು ಚೆಲ್ಲಾಪಿಲ್ಲಿಯಾಗಿ ಬೀಸಾಡಿ ಹೋಗಿದ್ದಾರೆ

ಮನೆ ಮಾಲೀಕರು ಸಮಂಧಿಕರ ಮನೆಯಿಂದ ತಮ್ಮ ಮನೆಗೆ ಮರಳಿದಾಗ ಮನೆ ಕಳುವಾದ ಬಗ್ಗೆ ಮನೆ ಮಾಲೀಕರಿಗೆ ಗೊತ್ತಾಗಿದೆ

ಬೆಳಗಾವಿ ನಗರ ಪೋಲೀಸರು ರಾತ್ರಿ ಹೊತ್ತು ಗಸ್ತು ಚುರುಕು ಗೊಳಿಸಿರುವದರಿಂದ ಹಗಲು ಹೊತ್ತಿನಲ್ಲೇ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ

Check Also

ನಿವೃತ್ತ ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಮರ್ಡರ್…

ಬೆಂಗಳೂರು-ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಅವರ ಮೃತದೇಹ ರಕ್ತದ ಮಡುವಿನಲ್ಲಿ ಪತ್ತೆಯಾಗಿದೆ. ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ನ ಮನೆಯಲ್ಲಿ …

Leave a Reply

Your email address will not be published. Required fields are marked *