Breaking News

ಶಿವಸೇನೆ ವಾಹನದ ಮೇಲೆ ಕರವೇ ದಾಳಿ.,ಜಟಾಪಟಿ

ಬೆಳಗಾವಿ- ಮಹಾರಾಷ್ಟ್ರದ ಕೊಲ್ಹಾಪೂರದಲ್ಲಿ ಶಿವಸೇನೆ ಕಾರ್ಯಕರ್ತರು ಕನ್ನಡ ನಾಮಫಲಕಗಳಿಗೆ ಕಪ್ಪು ಮಸಿ ಹಚ್ಚಿರುವದಕ್ಕೆ ಪ್ರತೀಕಾರವಾಗಿ ಕರವೇ ಕಾರ್ಯಕರ್ತರು ಬೆಳಗಾವಿಯ ಶಿವಸೇನೆ ವಾಹನದ ಮೇಲೆ ದಾಳಿ ಮಾಡಿ ವಾಹನದ ಮೇಲಿನ ಶಿವಸೇನೆಯ ಫಲಕ್ಕಕ್ಕೆ ಕಪ್ಪು ಮಸಿ ಬಳಿದು ಫಲಕವನ್ನು ಧ್ವಂಸ ಮಾಡಿದ್ದಾರೆ..

ಕರವೇ ಕಾರ್ಯಕರ್ತರು ರಾಮಲಿಂಗ ಖಿಂಡ ಗಲ್ಲಿಯ ಎಂಈಎಸ್ ಕಚೇರಿಯ ಮೇಲೆ ದಾಳಿ ಮಾಡಿ ಕಚೇರಿಗೆ ನುಗ್ಗಲು ಯತ್ನಿಸಿದಾ ಪೋಲೀಸರು ತಡೆದಿದ್ದಾರೆ.

ಇದೇ ಸಂಧರ್ಭದಲ್ಲಿ ಶಿವಸೇನೆ ಮಾಜಿ ಜಿಲ್ಲಾಧ್ಯಕ್ಷ ಪ್ರಕಾಶ ಶಿರೋಳಕರ ಅವರ ಕಾರು ಅಲ್ಲಿಗೆ ಆಗಮಿಸಿದೆ,ಕರವೇ ಕಾರ್ಯಕರ್ತರು ಶಿವಸೇನೆ ಮುಖಂಡನ ಕಾರು ನಿಲ್ಲಿಸಿ ಕಾರಿನ ಮೇಲೆ ಹಾಕಲಾಗಿದ್ದ ಶಿವಸೇನೆ ಫಲಕಕ್ಕೆ ಕಪ್ಪು ಮಸಿ ಬಳಿದು,ಫಲಕವನ್ನೇ ಕಿತ್ತೆಸೆದಿದ್ದಾರೆ.

ಎಂಇಎಸ್, ಶಿವಸೇನೆ ಕಚೇರಿ ನುಗ್ಗಲು ಕರವೇ ಕಾರ್ಯಕರ್ತರ ಯತ್ನಿಸಿದ್ದಾರೆ.ಕರವೇ ಕಾರ್ಯಕರ್ತರನ್ನು ಪೋಲೀಸರು ತಡೆದಿದ್ದಾರೆ.ಕನ್ನಡ ನಾಡಿನಲ್ಲಿ ಮರಾಠಿ ಭಾಷೆ ನಾಮಫಲಕ ಹಾಕದಂತೆ ಶಿವಸೇನೆ ಪುಂಡರಿಗೆ ಎಚ್ಚರಿಕೆ ನೀಡಿದ್ದಾರೆ.ಶಿವಸೇನೆ , ಎಂಇಎಸ್ ಪುಂಡರಿಗೆ ಕರವೇ ಕಾರ್ಯಕರ್ತರ ಎಚ್ಚರಿಕೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಶಿವಸೇ‌ನೆ – ಕರವೇ ಮುಖಂಡರ ಮಧ್ಯೆ ವಾಗ್ವಾದ ನಡೆದಿದೆ.
ಶಿವಸೇನೆ ಮುಖಂಡನ ಕಾರಿನ ಮೇಲಿದ್ದ ಮರಾಠಿ ಬೋರ್ಡ್ ಕಿತ್ತಿಹಾಕಿದ ಕರವೇ ಕಾರ್ಯಕರ್ತರು ಬೆಳಗಾವಿ ನಗರದ ವಿವಿಧ ಪ್ರದೇಶಗಳಲ್ಲಿದ್ದ ಮರಾಠಿ ನಾಮಫಲಕಗಳಿಗೆ ಕಪ್ಪು ಮಸಿ ಬಳಿದಿದ್ದಾರೆ.

 

ಮರಾಠಿಯಲ್ಲಿ ಬರೆದಿದ್ದ ಶಿವಸೇನೆ ಮುಖಂಡ ಪ್ರಕಾಶ ಶಿರೋಳಕರ ಅವರಿಗೆ ಸೇರಿದ ನಾಮಫಲಕ, ನಂಬರ್ ಪ್ಲೇಟ್ ಕರವೇ ಕಾರ್ಯಕರ್ತರು ಕಿತ್ತಾಕಿದ್ದಾರೆ.

ಕರವೇ ರಾಜ್ಯ ಸಂಚಾಲಕ ಮಹಾದೇವ ತಳವಾರ್, ಕರವೇ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ನೇತೃತ್ವದಲ್ಲಿ ತೆರಳಿದ್ದ ಕರವೇ ಕಾರ್ಯಕರ್ತರು ಹಾಗು,ಶಿವಸೇನೆ ಹಾಗೂ ಕರವೇ ಮುಖಂಡರ ಮಧ್ಯೆ ತೀವ್ರ ವಾಗ್ವಾದ ನಡೆದಿದೆ.ಶಿವಸೇನೆ, ಕರವೇ ಮುಖಂಡರನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ ಪಟ್ಟಿದ್ದಾರೆ.ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ವಾಗಿದೆ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *