ಬೆಳಗಾವಿ-ಬೆಳಗಾವಿಯಲ್ಲಿ ಶಿವಸೇನೆ ಕಚೇರಿ ಬಂದ್ ಮಾಡುವಂತೆ ಆಗ್ರಹಿಸಿ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಬೆಳಗಾವಿ ಜಿಲ್ಲಾಧಿಕಾರಿ ಮೂಲಕ ಗೃಹ BBB ಸಚಿವರಿಗೆ ಮನವಿ ಅರ್ಪಿಸಿದೆ.ಕನ್ನಡ ಕ್ರೀಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಮನವಿ ಅರ್ಪಿಸಿದರು
ಶಿವಸೇನೆ ಬೋರ್ಡ್ ಹೊಂದಿರೋ ವಾಹನ ಜಪ್ತಿ ಮಾಡಲು ಆಗ್ರಹಿಸಿದ್ದುಬೆಳಗಾವಿಯಲ್ಲಿ ಶಿವಸೇನೆ ಕಚೇರಿಯನ್ನು ಕೂಡಲೇ ಬಂದ್ ಮಾಡುವಂತೆ ಒತ್ತಾಯ ಮಾಡಿದ್ದಾರೆ.
ಮಹಾರಾಷ್ಟ್ರದಲ್ಲಿ ಕನ್ನಡ ನಾಮಫಲಕ ಹಾಕಲು,ಕನ್ನಡ ಸಂಘಟನೆಗಳು ಕಾರ್ಯನಿರ್ವಹಿಸಲು ಅವಕಾಶ ಕೊಡದೇ ಇರುವಾಗ,ನಿರಂತರವಾಗಿ ನಾಡವಿರೋಧಿ ಚಟುವಟಿಕೆ ನಡೆಸುವ ಶಿವಸೇನೆಗೆ ಬೆಳಗಾವಿಯಲ್ಲಿ ಕಚೇರಿ ಮುಂದುವರೆಸಲು ಅನುಮತಿ ನೀಡಬಾರದು,ಬೆಳಗಾವಿಯಲ್ಲಿ ಇರುವ ಶಿವಸೇನೆ ಕಚೇರಿಯನ್ನು ತಕ್ಷಣ ಬಂದ್ ಮಾಡಬೇಕು ಎಂದು ಅಶೋಕ ಚಂದರಗಿ ಒತ್ತಾಯ ಮಾಡಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ