ಬೆಳಗಾವಿ-ಬೆಳಗಾವಿ ಲೋಕಸಭಾ ಮತಕ್ಷೇತ್ರದ ಮಿನಿ ಸಮರಕ್ಕೆ ಮಹೂರ್ಥ ಫಿಕ್ಸ್ ಆಗುತ್ತಿದ್ದಂತೆಯೇ ಬಿಜೆಪಿಯಲ್ಲಿ ಎಲ್ಲಿಲ್ಲದ ಬಿರುಸಿನ ಲಾಭಿ ಶುರುವಾಗಿದೆ.
ಬೆಳಗಾವಿ ಲೋಕಸಭಾ ಮತಕ್ಷೇತ್ರದಿಂದ ಸ್ಪರ್ದೆ ಮಾಡಲು ಬರೊಬ್ಬರಿ 70 ಜನ ಆಕಾಂಕ್ಷಿಗಳು ಟಿಕೆಟ್ ಗಾಗಿ ಅರ್ಜಿ ಹಾಕಿದ್ದಾರೆ,ಈ ವಿಚಾರದಲ್ಲಿ ಕ್ಷಣಕ್ಕೊಂದು ಹೆಸರು ಪ್ರಸ್ತಾಪ ಆಗುತ್ತಲೇ ಇದೆ.ಹೀಗಾಗಿ ಬಿಜೆಪಿ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇದೆ.
ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಸಹಜವಾಗಿ ಆಕಾಂಕ್ಷಿಗಳ ಓಡಾಟವೂ ಚುರುಕುಗೊಂಡಿದ್ದು,ಕೆಲವು ಆಕಾಂಕ್ಷಿಗಳು ಬೆಂಗಳೂರಿಗೆ ಹೋಗಿ ಢವಳಗಿರಿಯಲ್ಲಿ ಅಪ್ಪಾಜಿಗೆ ಕೈ ಮುಗಿಯುತ್ತಿದ್ದರೆ,ಇನ್ನೂ ಕೆಲವು ಜನ ಆಕಾಂಕ್ಷಿಗಳು ದೆಹಲಿಗೆ ದೌಡಾಯಿಸಿದ್ದಾರೆ.
ಯಾಕಂದ್ರೆ ನಾಳೆ ಶುಕ್ರವಾರ ದೆಹಲಿಯಲ್ಲಿ ಬೆಳಗಾವಿ ಬಿಜೆಪಿ ಅಭ್ಯರ್ಥಿ ಅಂತಿಮಗೊಳಿಸುವ ನಿಟ್ಟಿನಲ್ಲಿ ಮಹತ್ವದ ಸಭೆ ನಡೆಯಲಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.
ಮಾಜಿ ಸಂಸದ ರಮೇಶ್ ಕತ್ತಿ ಅವರು ಕಳೆದ ಒಂದು ವಾರದಿಂದ ದೆಹಲಿಯಲ್ಲೇ ಠಿಖಾನಿ ಹೂಡಿದ್ದಾರೆ,ಕಿರಣ ಜಾಧವ ಬ್ಯಾಗ್ ತಗೊಂಡು ದೆಹಲಿಗೆ ವಿಮಾನ ಹತ್ತಿದರೆ,ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ,ಎಂ.ಬಿ ಝಿರಲಿ ಸೇರಿದಂತೆ ಅನೇಕ ಜನ ಆಕಾಂಕ್ಷಿಗಳು ಬೆಳಗಾವಿಯಲ್ಲಿ ಇದ್ದುಕೊಂಡೇ ತಮ್ಮ,ತಮ್ಮ,ಗಾಡ್ ಫಾದರ್ ಗಳ ಮನವೊಲಿಕೆಯ ಕಸರತ್ತು ನಡೆಸಿದ್ದಾರೆ.
ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿರುವ ಕಾರಣ, ಬಿಜೆಪಿ ಹೈಕಮಾಂಡ್ ಸುರೇಶ್ ಅಂಗಡಿ ಅವರ ಧರ್ಮಪತ್ನಿ ಮಂಗಲಾ ಅಂಗಡಿ ಅವರಿಗೆ ಟಿಕೆಟ್ ಕೊಡುವ ಸಾಧ್ಯತೆಗಳು ಇವೆ.ಎಂದು ಹೇಳಲಾಗುತ್ತಿದೆ.