Breaking News
Home / Breaking News / ಮನೆಯಲ್ಲಿ ಜಗಳಾಡಿದ್ರು ಪೋಸ್ಟಮಾರ್ಟಮ್ ರೂಮ್ ನಲ್ಲಿ ಒಂದಾದ್ರು….

ಮನೆಯಲ್ಲಿ ಜಗಳಾಡಿದ್ರು ಪೋಸ್ಟಮಾರ್ಟಮ್ ರೂಮ್ ನಲ್ಲಿ ಒಂದಾದ್ರು….

ಬೆಳಗಾವಿ- ವಿಜಯಪೂರ ಜಿಲ್ಲೆಯಿಂದ ಬೆಳಗಾವಿಗೆ ದುಡಿಯಲು ಆಗಮಿಸಿದ್ದ ದಂಪತಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಕತಿ ಬಳಿಯ ಅಲತಗಾ ಗ್ರಾಮದಲ್ಲಿ ನಡೆದಿದೆ

ವಿಜಯಪೂರ ಜಿಲ್ಲೆಯ ಸಿಂಧಗಿ ತಾಲ್ಲೂಕಿನ ಯಲಗೂಡ ತಡಾದಿಂದ ಬೆಳಗಾವಿಗೆ ಬಂದು ಅಲತಗಾ ಗ್ರಾಮದ ಗೋಡಂಬಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ 21 ವರ್ಷದ ಅಂಜಲಿ ರವಿ ರಾಠೋಡ್,25 ವರ್ಷದ ರವಿ ರಾಮಚಂದ್ರ ರಾಠೋಡ್ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳಾಗಿದ್ದಾರೆ

ನಿನ್ನೆ ಸಂಜೆ ಮನೆಯಲ್ಲಿ ಇಬ್ಬರು ಯಾವುದೋ ಕಾರಣಕ್ಕಾಗಿ ಪರಸ್ಪರ ಜಗಳಾಡಿದ್ದಾರೆ ಗಂಡನನ್ನು ಮನೆಯಿಂದ ಹೊರಗೆ ತಳ್ಳಿದ ಅಂಜಲಿ ಬೀಗ ಹಾಕಿಕೊಂಡು ನೇಣಿಗೆ ಶರಣಾಗಿದ್ದಾಳೆ ತನ್ನ ಮಡದಿ ನೇಣು ಹಾಕಿಕೊಂಡಿರುವದನ್ನು ಕಿಟಕಿಯಿಂದ ನೋಡಿದ ರವಿ ರಾಠೋಡ್ ಹೆದರಿ ಅಲ್ಲಿಂದ ಪರಾರಿಯಾಗಿದ್ದ

ಆತ್ಮಹತ್ಯೆ ಮಾಡಿಕೊಂಡ ಅಂಜಲಿಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಭೀಮ್ಸ ಶವಾಗಾರಕ್ಕೆ ತರಲಾಗಿತ್ತು ಇನ್ನೇನು ಪೋಸ್ಟ ಮಾರ್ಟಮ್ ಮುಗಿಯುವಷ್ಟರಲ್ಲಿ ಅಲತಗಾ ಬಳಿಯ ಗಿಡವೊಂದಕ್ಕೆ ಇನ್ನೊಂದು ಶವ ನೇತಾಡುತ್ತಿದೆ ಎನ್ನುವ ಮಾಹಿತಿ ಕಾಕತಿ ಪೋಲೀಸರಿಗೆ ಬಂದಿದೆ ವಿಚಾರಣೆ ಮಾಡಿದಾಗ ಈ ಶವ ಅಂಜಲಿಯ ಪತಿ ರವಿಯ ಶವ ಎಂದು ಗೊತ್ತಾಯಿತು ಆತನ ಶವವನ್ನೂ ಮರಣೋತ್ತರ ಪರೀಕ್ಷೆಗಾಗಿ ಬೆಳಗಾವಿಯ ಶವಾಗಾರಕ್ಕೆ ತರಲಾಯಿತು ಮನೆಯಲ್ಲಿ ಜಗಳಾಡಿಕೊಂಡಿದ್ದ ದಂಪತಿಗಳೂ ಕೊನೆಗೂ ಬೆಳಗಾವಿಯ ಶವಾಗಾರದಲ್ಲಿ ಒಂದಾಗಿದ್ದು ದುರ್ದೈವ..

About BGAdmin

Check Also

ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ಜಿಲ್ಲಾ ಉಸ್ತುವಾರಿ ಮಂತ್ರಿ ರಮೇಶ್ ಜಾರಕಿಹೊಳಿ ಹಾಜರ್

ಬೆಳಗಾವಿ-ರಾಷ್ಟ್ರಪತಿಗಳನ್ನು ಸ್ವಾಗತಿಸಲು ಬೆಳಗಾವಿಯ ಸಾಂಬ್ರಾ ಎರಪೋರ್ಟ ಗೆ ಸಚಿವ ರಮೇಶ ಜಾರಕಿಹೋಳಿ ಆಗಮಿಸಿದರು ಸರ್ಕಾರಿ ವಾಹನ ಬಿಟ್ಟು ಎಸ್ಕಾಟ್ ಇಲ್ಲದೇ …

Leave a Reply

Your email address will not be published. Required fields are marked *