ಬೆಳಗಾವಿ-ಮಾರ್ಚ್ 31ರಂದು ಬೆಳಗಾವಿಯಲ್ಲಿ ರೈತ ಮಹಾ ಪಂಚಾಯತ್ ಸಮಾವೇಶ ನಡೆಯಲಿದ್ದು ಈ ಸಮಾವೇಶದಲ್ಲಿ ಐವತ್ತು ಸಾವಿರಕ್ಕೂ ಹೆಚ್ಚು ರೈತರು ಸಮಾವೇಶ ಗೊಳ್ಳುತ್ತಾರೆ ಎಂದು ರೈತ ಮುಖಂಡರು ತಿಳಿಸಿದ್ದಾರೆ
ಬೆಳಗಾವಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ರೈತ ಮುಖಂಡರು,ಕೇಂದ್ರ ಸರ್ಕಾರದ ವಿರುದ್ಶ ಆಕ್ರೋಶ ವ್ಯೆಕ್ತಪಡಿಸಿದರು ರೈತ ಮುಖಂಡ ಕೆ.ಟಿ.ಗಂಗಾಧರ ಮಾತನಾಡಿ ಭಾರತದ ಭೂಮಿಯೇ ಭಾರತ ಮಾತೆ,ಮೋದಿ ಸರ್ಕಾರ ಭಾರತ ಮಾತೆಯನ್ನೇ ಮಾರಾಟಕ್ಕಿಟ್ಟು ಭಾರತ್ ಮಾತಾಕೀ ಜೈ ಅಂದ್ರೆ ಹೇಗೆ? ಎಂದು ಬೆಳಗಾವಿಯಲ್ಲಿ ರೈತ ಮುಖಂಡ ಕೆ.ಟಿ.ಗಂಗಾಧರ್ ಪ್ರಶ್ನೆ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ
ಹೋರಾಟ,ರೈತರ ಸಂವಿಧಾನ ಬದ್ಧವಾದ ಹಕ್ಕು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಪ್ರಧಾನಿ ಮೋದಿ, ಸಿಎಂ ಬಿಎಸ್‌ವೈ ಎಚ್ಚರಿಕೆಯಿಂದ ವರ್ತಿಸಬೇಕು, ತಕ್ಷಣವೇ ಈ ಮೂರು ರೈತ ವಿರೋಧಿ ಮಸೂದೆ ಹಿಂಪಡೆಯಬೇಕು, ಶಿವಮೊಗ್ಗ, ಹಾವೇರಿ ರೀತಿ ಬೆಳಗಾವಿಯಲ್ಲೂ ರೈತ ಮಹಾ ಪಂಚಾಯತ ಸಮಾವೇಶ ನಡೆಯುತ್ತದೆ ಎಂದರು.
ಬೆಳಗಾವಿಯಲ್ಲಿ ರೈತ ಮಹಾ ಪಂಚಾಯತ ಸಮಾವೇಶಕ್ಕೆ ಅಡ್ಡಿಪಡಿಸದಂತೆ ಎಚ್ಚರಿಕೆ ನೀಡಿದ ಅವರು,ಸಂಯುಕ್ತ ಕಿಸಾನ್ ಮಂಚ್ ಹೋರಾಟ ಈಗ ಜನಾಂದೋಲನ ಆಗಿದೆ.ಇದಕ್ಕೆ ಸಮಾಜದ ಎಲ್ಲಾ ವಲಯದ ಸಂಘಟನೆಗಳು ಬೆಂಬಲಿಸುತ್ತಿವೆ. ಕೇಂದ್ರ ಸರ್ಕಾರದ ಖಾಸಗೀಕರಣ ನೀತಿ ಮಾರಕವಾಗಿದೆ. ಅನ್ನ ಬೆಳೆಯುವ ರೈತನ ಭೂಮಿಯನ್ನ ಖಾಸಗೀಕರಣ ಮಾಡಲು ಹೊರಟಿದೆ ಎಂದು ಬೆಳಗಾವಿಯಲ್ಲಿ ರೈತ ಮುಖಂಡ ಕೆ.ಟಿ.ಗಂಗಾಧರ್ ಆರೋಪಿಸಿದರು.
ಇವತ್ತು ದೇಶದಲ್ಲಿ ನಡೆಯುತ್ತಿರುವುದು ರೈತ ಚಳವಳಿ ಅಲ್ಲ, ದೇಶದ ಸ್ವಾತಂತ್ರ್ಯಕ್ಕಾಗಿ ನಡೆಯುತ್ತಿರುವ ಚಳವಳಿ ಇದು,ಎಂದು ಬೆಳಗಾವಿಯಲ್ಲಿ ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಹೇಳಿದರು.ಈ ಮೂರು ಕಾಯ್ದೆಗಳು ಜಾರಿಗೆ ಬಂದ್ರೆ ರೈತರ ಜೊತೆಗೆ ಮಧ್ಯಮವರ್ಗದ ಜನತೆ ಮೇಲೂ ಪರಿಣಾಮ ಬೀರುತ್ತದೆ. ಬೆಳಗಾವಿಯಲ್ಲಿನ ರೈತ ಮಹಾ ಪಂಚಾಯತಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸಬೇಕು,ಎಂದು ಸಾರ್ವಜನಿಕರಲ್ಲಿ ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಮನವಿ ಮಾಡಿದ್ರು
ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಬಾಬಾಗೌಡ ಪಾಟೀಲ್ ಆಕ್ರೋಶ ವ್ಯೆಕ್ತಪಡಿಸಿದರು.ದೇಶದಲ್ಲಿ ರೈತ ವಿರೋಧಿ ಮಸೂದೆ ವಿರೋಧಿಸಿ ಹೋರಾಟ ಮಾಡುತ್ತಿದ್ದೇವೆ. ಹೀಗಿರುವಾಗ ರೈತ ಮುಖಂಡ ಯುದವೀರ್ ಸಿಂಗ್ ಬಂಧಿಸಿದ್ದನ್ನು ಬಲವಾಗಿ ಖಂಡಿಸುವೆ.ಇದೇ ಪ್ರಜಾಪ್ರಭುತ್ವವೋ ಎಂದು ಬಾಬಾಗೌಡ ಪಾಟೀಲ್ ಪ್ರಶ್ನೆ ಮಾಡಿದ್ರು
ರೈತರ ಮಹಾ ಪಂಚಾಯತ ಸಮಾವೇಶ ಹತ್ತಿಕ್ಕಲು ಹುನ್ನಾರ ನಡೆಯುತ್ತಿದೆ. ಕೇಂದ್ರ ಸರ್ಕಾರ ಹಸಿವು ನಿಗಿಸುವ ಕೆಲಸ ಮಾಡಬೇಕು. ಇದನ್ನ ಹೊರತುಪಡಿಸಿ ಏರ್‌ಪೋರ್ಟ್ ಮಾಡುವುದಲ್ಲ, ಮೊದಲು ಕೈಯಲ್ಲಿ ಉದ್ಯೋಗವಿಲ್ಲದ ಯುವಕರಿಗೆ ಕೆಲಸ ಕೊಡಿ,ಈ ರೈತರ ಹೋರಾಟ ಯುವಕರ ಹೋರಾಟ ಆಗಬೇಕು ಎಂದರು.
ಮಾರ್ಚ್ 31 ರಂದು ಬೆಳಗಾವಿಯಲ್ಲಿ ದೊಡ್ಡ ಸಮಾವೇಶ ಮಾಡ್ತಿವಿ, ಬೆಳಗಾವಿಯ ಸಮಾವೇಶದಲ್ಲಿ 50 ಸಾವಿರ ಜನರು ಸೇರ್ತಾರೆ,ಎಂದು ಬಾಬಾಗೌಡ್ರು ಹೇಳಿದ್ರು.