ಕಾಂಗ್ರೆಸ್ಸಿಗೆ ನೋ ಸ್ಟ್ಯಾಂಡ್ ಅದು ಬಸ್ ಸ್ಟ್ಯಾಂಡ್

ಬೆಳಗಾವಿ-ಕಾಂಗ್ರೆಸ್ಸಿಗೆ ಸ್ಟ್ಯಾಂಡ್ ಅದು ಬಸ್ ಸ್ಟ್ಯಾಂಡ್ ಆಗಿದೆ.ಅಲ್ಲಿ ಯಾರೋ ಹೊಕ್ತಾರೆ,ಬಸ್ಸಿನ ಜೊತೆ ಟಿಂಪೋಗಳು ಹೊಕ್ತಾವೆ,ಎಂದು ಬೆಳಗಾವಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಲೇವಡಿ ಮಾಡಿದ್ದಾರೆ.

ರಾಜ್ಯದಲ್ಲಿ ನಡೆಯುವ ಮೂರು ಉಪಚುನಾವಣೆ ಬಿಜೆಪಿ ಐತಿಹಾಸಿಕ ಗೆಲವು ಸಾಧಿಸುತ್ತದೆ. ಬೆಳಾಗಾವಿ ಲೋಕಸಭಾ ಕ್ಷೇತ್ರದ  ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ದಾಖಲೆ  ಗೆಲವು ಸಾಧಿಸಲಿದ್ದಾರೆ‌ ಎಂದು ಜೋಶಿ ಭವಿಷ್ಯ ನುಡಿದರು.

ಬೆಳಗಾವಿ ಉಪಚುನಾವಣೆಯಲ್ಲಿ ದೇಶದಲ್ಲಿ ನರೇಂದ್ರ ಮೋದಿ ಅಭಿವೃದ್ಧಿ ಕೆಲಸ.ಸುರೇಶ್ ಅಂಗಡಿ ಅಭಿವೃದ್ಧಿ ಕೆಲಸ ಮುಂದೆ ಇಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ.ಕಾಂಗ್ರೆಸ್ ಪಕ್ಷಕ್ಕೆ  ಯಾವುದೇ ಸ್ಟ್ಯಾಂಡ್ ಇಲ್ಲಾ . ಪಕ್ಷಕ್ಕೆ ನೇತೃತ್ವ ಅನ್ನೊದೇ ಇಲ್ಲ. ದೃಷ್ಟಿಯೂ ಇಲ್ಲ. ಕಾಂಗ್ರೆಸ್  ಇನ್ ಟ್ರಬಲ್,ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ದಿದಿ ಅವರ ಪಾರ್ಟಿ ಅರ್ದ ಖಾಲಿಯಾಗಿದೆ ಮನೆ ಹೋಗುತ್ತಾರೆ.. ದಿದಿ ಸರ್ಕಾರದಲ್ಲಿ  ಭ್ರಷ್ಟಾಚಾರ ಇದೆ  ಎಂದ ಜೋಶಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ,ಆಸ್ಸಾಂ ನಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳುತ್ತೇವೆ.ತಮಿಳು ನಾಡಿನಲ್ಲಿ ಒಳ್ಳೆಯ ಪೈಪೋಟಿ ಕೊಟ್ಟಿದ್ದೇವೆ,ಕೇರಳದಲ್ಲಿ,ಪ್ರಯತ್ನ ಮಾಡಿದ್ದೇವೆ,ಎಂದು ಪ್ರಲ್ಹಾದ್ ಜೋಶಿ ಹೇಳಿದರು.

ಸಿಎಂ ಯಡಿಯೂರಪ್ಪ ಬದಲಾವಣೆ ಪ್ರಶ್ನೆ ಇಲ್ಲ,  ಅವರ ನೇತೃತ್ವದಲ್ಲಿ ಸರ್ಕಾರ ಮುಂದೆ ನಡೆಯುತ್ತದೆ, ಬಸವಕಲ್ಯಾಣ ಅಭ್ಯರ್ಥಿ ಹೈಕಮಾಂಡ ಗೆ ದೊಡ್ಡ ಮೊತ್ತದ  ಹಣ ನೀಡಿ  ಟಿಕೆಟ್ ತಂದಿದ್ದಾರೆ ಎಂಬ ಹೇಳಿಕೆ ವಿಚಾರ, ಕುಮಾರಸ್ವಾಮಿ  ವಿರುದ್ಧ ಟಾಂಗ್‌ ಕೊಟ್ಟ ಅವರು,ಮಾಜಿ ಸಿಎಂ ಕುಮಾರಸ್ವಾಮಿ ಸದಾ ಸುದ್ದಿಯಲ್ಲಿ ಇರಬೇಕು ಅಂತಾ ಈ ರೀತಿಯಲ್ಲಿ ಗಂಭೀರವಾಗಿ ಆರೋಪ  ಮಾಡುತ್ತಿದ್ದಾರೆ, ಅವರ ಪಾರ್ಟಿಗೆ ಬಂದಿರುವ  ಪರಿಸ್ಥಿತಿ, ನಮ್ಮ ಪಾರ್ಟಿಗೆ ಇಲ್ಲಾ ಅಂದ್ರು..

 

ಜಗದೀಶ್ ಶೆಟ್ಟರ್ ಹೇಳಿದ್ದು….

ಮಾಜಿ ಸಚಿವ ರಮೇಶ ಜಾರಕಿಹೊಳಿ‌ ಸಿಡಿ ಬಹಿರಂಗ ವಿಚಾರ,ಬೆಳಗಾವಿಯಲ್ಲಿ  ಸಚಿವ  ಜಗದೀಶ್ ಶೆಟ್ಟರ್ ಮಾತನಾಡಿ,ಸಿಡಿ ಪ್ರಕರಣದ ಸತ್ಯಾಂಶ ಹೊರಗಡೆ ಬರಬೇಕು. ಎಸ್ ಐ ಟಿ ನೇಮಕ ಮಾಡಿದೆ ತನಿಖೆ ನಡೆಯುತ್ತಿದೆ,ಸಿಡಿ ಬಿಡುಗಡೆ ಹಿಂದೆ ರಾಜಕೀಯ ಷಡ್ಯಂತರ ಅಡಗಿದೆ ಅಂತಾ ಜನರೇ ಮಾತನಾಡುತ್ತಿದ್ದಾರೆ,ಸಿಡಿ ವಿಚಾರ  ಚುನಾವಣೆ ಮೇಲೆ ಯಾವುದೇ ಪರಿಣಾಮ ಬಿಳಲ್ಲ, ಮತದಾರರಲ್ಲಿ ಸಂಶಯ ಶುರುವಾಗಿದೆ. ಕ್ರಿಯೇಟ್ ಮಾಡಿದ್ದಾರೋ ಕುತಂತ್ರದಿಂದ ಮಾಡಿದ್ದಾರೋ ಅಂತಾ ಸಂಶಯ ಶುರುವಾಗಿದೆ,ಎಂದು ಜಗದೀಶ್ ಶೆಟ್ಟರ್ ಹೇಳದರು. ಜನರು ಪ್ರಧಾನಿ ನರೇಂದ್ರ ಮೋದಿ ಅಭಿವೃದ್ಧಿ ಕೆಲಸದ ಬಗ್ಗೆ ಮಾತನಾಡುತ್ತಿದ್ದಾರೆ..ಸಿಡಿ ಬಗ್ಗೆ ಮಾತನಾಡುತ್ತಿಲ್ಲ.ಅಂದ್ರು  ರಮೇಶ್ ಜಾರಕಿಹೋಳಿ, ಬಾಲಚಂದ್ರ‌ ಜಾರಕಿಹೋಳಿ ಚುನಾವಣೆ ಪ್ರಚಾರಕ್ಕೆ ಬರ್ತಾರೆ

ಈಗಾಗಲೇ ಪ್ರಚಾರಕ್ಕೆ ಬರುವಂತೆ ಅವರ ಜೊತೆ ಮಾತನಾಡಿದ್ದೇನೆಅವರು ಪ್ರತಿನಿಧಿಸುವ ಕ್ಷೇತ್ರಗಳು ಲೋಕಸಭಾ ಉಪ ಚುನಾವಣೆ ವ್ಯಾಪ್ತಿಗೆ ಬರುತ್ತವೆ.ಹಾಗಾಗಿ ಅವರು ಬಿಜೆಪಿ ಪರ ಪ್ರಚಾರ ಮಾಡುತ್ತಾರೆ ಎಂದು ಜಗದೀಶ್ ಶೆಟ್ಟರ್ ಹೇಳಿದ್ರು

ಪಂಚತಾರಾ ಹೊಟೇಲ್ ನಲ್ಲಿ ಬಿಜೆಪಿ ಸಭೆ

ಬೆಳಗಾವಿ ಲೋಕಸಭಾ ಮತಕ್ಷೇತ್ರದ ಚುನಾವಣೆ ಕುರಿತು ಬೆಳಗಾವಿಯ ಪಂಚತಾರಾ ಹೊಟೇಲ್ ನಲ್ಲಿ ಬಿಜೆಪಿ ಪಕ್ಷದ ಮಹತ್ವದ ಸಭೆ ನಡೆಯುತ್ತಿದೆ.ಸಭೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜಗದೀಶ್ ಶೆಟ್ಟರ್ ಅಭ್ಯರ್ಥಿ ಮಂಗಲಾ ಅಂಗಡಿ ಸೇರಿದಂತೆ ಬೆಳಗಾವಿ ಜಿಲ್ಲೆಯ ಬಿಜೆಪಿ ಶಾಸಕರು ಮತ್ತು ನಾಯಕರು ಭಾಗವಹಿಸಿದ್ದಾರೆ.

Check Also

ಗಣೇಶ್ ಪ್ರತಿಷ್ಠಾಪನೆ ಮಾಡಿದ ಬೆಳಗಾವಿ ಡಿಸಿ ಮಹ್ಮದ್ ರೋಷನ್…..!

ಬೆಳಗಾವಿ – ತೆಲೆಯ ಮೇಲೆ ಗಾಂಧಿ ಟೊಪ್ಪಗಿ,ಹಣೆಯ ಮೇಲೆ ನಾಮ, ಕೇಸರಿ ಝುಬ್ಬಾ ಹಾಕಿಕೊಂಡು ಗಣೇಶ ಮೂರ್ತಿಗೆ ಆರತಿ ಬೆಳಗಿ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.