Breaking News
Home / Breaking News / ಶೆಟ್ಟರ್ ಒಬ್ಬರೇ ಆಪ್ತ…ಬಾಲಚಂದ್ರ ಜೊತೆ ಸಿಎಂ ಚರ್ಚೆ ಗುಪ್ತ..ಗುಪ್ತ…!!!

ಶೆಟ್ಟರ್ ಒಬ್ಬರೇ ಆಪ್ತ…ಬಾಲಚಂದ್ರ ಜೊತೆ ಸಿಎಂ ಚರ್ಚೆ ಗುಪ್ತ..ಗುಪ್ತ…!!!

ಬೆಳಗಾವಿ-ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಬಿಜೆಪಿ ನಾಯಕರ ವಿದ್ಯಮಾನಗಳನ್ನು ಗಮನಿಸಿದರೆ,ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಸ್ಪಷ್ಟವಾಗಿ ಗೊತ್ತಾಗುತ್ತದೆ.

ಯಾಕಂದ್ರೆ ಬೆಳಗಾವಿ ಜಿಲ್ಲೆಯ ರಾಜಕಾರಣವೇ ಅಂತಹದ್ದು ಅಷ್ಟು ಬೇಗ ಹೊರಗಿನ ನಾಯಕರಿಗೆ ಸುಲಭವಾಗಿ ಅದು ಅರ್ಥವಾಗುವದಿಲ್ಲ,ಈ ಜಿಲ್ಲೆಯ ರಾಜಕಾರಣದ  ಚಲನವಲನ ಬೇರೆ ಆಗಿರುತ್ತದೆ,ಆಂತರಿಕವಾಗಿ ಅಲ್ಲಿ ಬೇರೆಯೇ ನಡೆದಿರುತ್ತದೆ.ಯಾವ ನಾಯಕ ಯಾರಿಗೆ ಬೆಂಬಲ ಕೊಡುತ್ತಿದ್ದಾನೆ,ಏನು ಮಾಡುತ್ತಿದ್ದಾನೆ ಅನ್ನೋದೇ ಗೊತ್ತಾಗುವದಿಲ್ಲ.ಇದು ಬೆಳಗಾವಿ ಜಿಲ್ಲೆಯ ಪಾಲಿಟೀಕ್ಸ್ ಸ್ಪೇಶ್ಯಾಲಿಟಿ…

ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಎಲ್ಲವೂ ಸರಿಯಾಗಿಲ್ಲ ಅನ್ನೋದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ಗೊತ್ತಾಗಿದೆ.ಅದಕ್ಕಾಗಿ ಅವರು ಪದೇ,ಪದೇ ಬೆಳಗಾವಿಗೆ ಬಂದು ಇಲ್ಲಿಯ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ಬುಧವಾರ,ಸಿಎಂ ಯಡಿಯೂರಪ್ಪ ಅರಭಾಂವಿ ಕ್ಷೇತ್ರದ ಮೂಡಲಗಿಗೆ ಹೋಗಿದ್ದರು,ಸಿಎಂ ಹೆಲಿಕಾಪ್ಟರ್ ನಿಂದ ಇಳಿಯುತ್ತಿದ್ದಂತೆ,ಕೆಎಂಎಫ್ ಅದ್ಯಕ್ಷ ಬಾಲಚಂದ್ರ ಜಾರಕಿಹೊಳಿ‌ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು,

ಸರ್ ನೇರವಾಗಿ ಸ್ಟೇಜ್ ಕಾರ್ಯಕ್ರಮಕ್ಕೆ ಹೋಗೋಣವೇ ಎಂದು ಬಾಲಚಂದ್ರ ಜಾರಕಿಹೊಳಿ ಮುಖ್ಯಮಂತ್ರಿಗಳನ್ನು ಕೇಳಿದಾಗ,ಬಾರಪ್ಪ ಇಲ್ಲಿ ನಿನ್ನ ಜೊತೆ ಮಾತಾಡೋದು ಇದೆ ಅಂತ ಬಾಲಚಂದ್ರ ಅವರನ್ನು ಕರೆದುಕೊಂಡು ಸಿಎಂ ದೂರ ಹೋಗಿ ಪ್ರತ್ಯೇಕವಾಗಿ ಚರ್ಚೆ ಮಾಡಿದ್ರು ಸಚಿವ ಜಗದೀಶ್ ಶೆಟ್ಟರ್,ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಬಾಲಚಂದ್ರ ಜಾರಕಿಹೊಳಿ ಅವರು ಐದು ನುಮಿಷಗಳ ಕಾಲ ಪ್ರತ್ಯೇಕವಾಗಿ ಚರ್ಚೆ ಮಾಡಿದ್ರು.

ಸಚಿವ ಉಮೇಶ್ ಕತ್ತಿ,ಸಚಿವ ಮುರುಗೇಶ್ ನಿರಾಣಿ,ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಅಲ್ಲೇ ಇದ್ದರೂ ಅವರನ್ನು ಬಿಟ್ಟು ,ಸಿಎಂ ಬಾಲಚಂದ್ರ ಜಾರಕಿಹೊಳಿ ಮತ್ತು ಜಗದೀಶ್ ಶೆಟ್ಟರ್ ಜೊತೆ ಪ್ರತ್ಯೇಕವಾಗಿ ಚರ್ಚೆ ಮಾಡಿದ್ದು ವಿಶೇಷವಾಗಿತ್ತು.

ರಾತ್ರಿಯೂ ಸಿಎಂ ಚರ್ಚೆ…

ಅರಭಾಂವಿ ಗೋಕಾಕ್ ನಲ್ಲಿ ಪ್ರಚಾರ ಮುಗಿಸಿ ಬೆಳಗಾವಿಗೆ ಮರಳಿದ ಮುಖ್ಯಮಂತ್ರಿ ಯಡಿಯೂರಪ್ಪನವರು,ಶಾಸಕ ಅಭಯ ಪಾಟೀಲ,ಅನೀಲ ಬೆನಕೆ,ಮತ್ತು ಮಾಜಿ ಶಾಸಕ ಸಂಜಯ ಪಾಟೀಲ ಅವರ ಜೊತೆ  ಚರ್ಚೆ ಮಾಡಿದ್ದಾರೆ.ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ನಡೆಯುತ್ತಿರುವ ಪಕ್ಷದ ಆಂತರಿಕ ಬೆಳವಣಿಗೆಗಳ ಕುರಿತು ಚರ್ಚೆ ಮಾಡಿ,ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ ಎಂದು ಗೊತ್ತಾಗಿದೆ.

Check Also

ಶಹಾಪೂರ್ ಘರ್ಷಣೆ ಪ್ರಕರಣ ಹತ್ತು ಜನರ ಬಂಧನ

ಬೆಳಗಾವಿ-ನಿನ್ನೆ ರಾತ್ರಿ ಶಹಾಪೂರ ಪೋಲೀಸ್ ಠಾಣೆ ವ್ಯಾಪ್ತಿಯ ಅಳ್ವಾನ್ ಗಲ್ಲಿಯಲ್ಲಿ ನಡೆದ ಗುಂಪು ಘರ್ಷಣೆ ಪ್ರಕರಣಕ್ಕೆ ಸಂಭಂಧಿಸಿದಂತೆ ಒಟ್ಟು ಹತ್ತು …

Leave a Reply

Your email address will not be published. Required fields are marked *