ಬೆಳಗಾವಿ- ಮೊಟ್ಟೆಯ ಟೆಂಡರ್ ಪ್ರಕರಣದಲ್ಲಿ ಕೋಟ್ಯಾಂತರ ರೂ ಲಂಚ ಪಡೆಯುವ ಕಳಂಕ ಹೊತ್ತಿರುವ ಶಶಿಕಲಾ ಜೊಲ್ಲೆ ಇಂದು ಬೆಳಗಾವಿಯಲ್ಲಿ ಮೌನ ಮುರಿದಿದ್ದಾರೆ. ನನ್ನ ಮೇಲಿನ ಆರೋಪಗಳೆಲ್ಲ ಸುಳ್ಳು, ನಾನು ಯಾವುದೇ ತಪ್ಪು ಮಾಡಿಲ್ಲ,ಯಾರ ಜೊತೆಯೂ ಹಣದ ಬಗ್ಗೆ ಮಾತನಾಡಿಲ್ಲ,ನನ್ನ ಹಿತ ಶತ್ರುಗಳು,ನನ್ನ ಏಳಿಗೆ ಸಹಿಸದೇ ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ.ನನ್ನ ಮೇಲಿನ ಆರೋಪವನ್ನು ಜಿದ್ದಿನಿಂದ ಸ್ವೀಕರಿಸಿದ್ದೇನೆ,ಅದನ್ನು ಎದುರಿಸುತ್ತೇನೆ. ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ಬೆಳಗಾವಿಯ ಬಿಜೆಪಿ ಕಚೇರಿಗೆ ಭೇಟಿ ನೀಡಿ,ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ರಾಷ್ಟ್ರೀಯ, ರಾಜ್ಯ ಬಿಜೆಪಿ ನಾಯಕರು, ಮಾಜಿ ಸಿಎಂ ಬಿಎಸ್‌ವೈ, ಸಿಎಂ ಬೊಮ್ಮಾಯಿ ವಿಶ್ವಾಸವಿಟ್ಟು ಎರಡನೇ ಬಾರಿ ಸಚಿವ ಸ್ಥಾನ ಕೊಟ್ಟಿದ್ದಾರೆ,ಕಳೆದ ಎರಡು ವರ್ಷಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ.ಯಾವ ಇಲಾಖೆ ಜವಾಬ್ದಾರಿ ಕೊಡ್ತಾರೋ ಅದನ್ನ ನಿಭಾಯಿಸಿ ಪಕ್ಷ ಸಂಘಟನೆ ಮಾಡ್ತೀನಿ ಎಂದಿದ್ದಾರೆ ಶಶಿಕಲಾ ಜೊಲ್ಲೆ.
ಮುಂದಿನ ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಪ್ರಯತ್ನ ಮಾಡ್ತೀನಿ, ಕೋವಿಡ್, ಪ್ರವಾಹದಿಂದ ಜನ ತತ್ತರಿಸಿದ್ದು ಇಂದು ನನ್ನ ಕ್ಷೇತ್ರಕ್ಕೆ ಭೇಟಿ ಕೊಡ್ತಿದೀನಿ ನಾಳೆ ಬೆಳಗ್ಗೆ ವಿಜಯಪುರ ಜಿಲ್ಲೆಯ ಮುದ್ದೆಬಿಹಾಳ ನಿಡಗುಂದಿ ತಾಲೂಕಿಗೆ ಭೇಟಿ ನೀಡುವೆ,ವಿಜಯಪುರ ದ ಗಡಿ ಭಾಗಗಳಲ್ಲಿ ಭೇಟಿ ನೀಡಿ ಪರಿಶೀಲನೆ ಮಾಡ್ತೀನಿ, ಯಾವುದೇ ಜಿಲ್ಲೆ ಉಸ್ತುವಾರಿ ಕೊಟ್ಟರೂ ನಿಭಾಯಿಸುವೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.