ಬೆಳಗಾವಿ- ತುಮಕೂರಿನ ಸಿದ್ಧಗಂಗಾ ಶ್ರೀಗಳ ಆಶೀರ್ವಾದ ಪಡೆದು ರಾತ್ರಿ 11-30 ಕ್ಕೆ ಬೆಂಗಳೂರಿಗೆ ಮರಳಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮದ್ಯರಾತ್ರಿ ಸಚಿವರಿಗೆ ಖಾತೆ ಹಂಚಿಕೆಯ ಪಟ್ಟಿ ರೆಡಿ ಮಾಡಿ ಇಂದು ಬೆಳಿಗ್ಗೆ 11 ಗಂಟೆಗೆ ಪ್ರಕಟಿಸಿದ್ದಾರೆ.
ರಾತ್ರಿ ಬೆಂಗಳೂರಿನ ಆರ್.ಟಿ ನಗರದಲ್ಲಿರುವ ಖಾಸಗಿ ನಿವಾಸಕ್ಕೆ ತೆರಳಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಜೊತೆ ಸಚಿವ ಮುರುಗೇಶ್ ನಿರಾಣಿ,ಮತ್ತು ವಿ.ಸೋಮಣ್ಣವರ ಜೊತೆಗಿದ್ದರು.
ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವೀಂದ್ ಕಾರಜೋಳ ಅವರಿಗೆ ಅತ್ಯಂತ ಪ್ರಮುಖ,ಜಲ ಸಂಪನ್ಮೂಲ ಖಾತೆ,ಉಮೇಶ್ ಕತ್ತಿ ಅವರಿಗೆ ಅರಣ್ಯ ಇಲಾಖೆಯ ಜೊತೆ ಆಹಾರ ಮತ್ತು,ನಾಗರೀಕ ಪೂರೈಕೆ ಹಾಗೂ ಶಶಿಕಲಾ ಜೊಲ್ಲೆ ಅವರಿಗೆ ಮುಜರಾಯಿ,ವಕ್ಫ್,ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಖಾತೆಯನ್ನು ನೀಡಲಾಗಿದೆ.
ಖಾತೆ ಹಂಚಿಕೆ ಮಾಡುವ ಮುನ್ನ ಕೆಎಂಎಫ್ ಅದ್ಯಕ್ಷ ಬಾಲಚಂದ್ರ ಜಾರಕಿಹೊಳಿ,ಶಾಸಕ ಮಹೇಶ ಕುಮಟೊಳ್ಳಿ ಅವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾಗಿ ಸುಧೀರ್ಘ ವಾಗಿ ಚರ್ಚೆ ಮಾಡಿದ್ದು ವಿಶೇಷ.
ಜಲಸಂಪನ್ಮೂಲ ಖಾತೆಯನ್ನು ಗೋವೀಂದ್ ಕಾರಜೋಳ ಅವರಿಗೆ ನೀಡಲಾಗಿದ್ದು,ಈ ಬೆಳವಣಿಗೆಯಿಂದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತಾರೆ ಅನ್ನೋದನ್ನು ಕಾಯ್ದು ನೋಡಬೇಕಾಗಿದೆ.