Breaking News

ವಿಗ್ ಹಾಕೊಂಡು,ಹೈಟ್ ಹೆಚ್ಚಿಸಿಕೊಂಡ,ಹೈಟೆಕ್ ವಂಚಕ ಅರೆಸ್ಟ್….!!!

ಬೆಳಗಾವಿ- ವಿಗ್ ಹಾಕೊಂಡು ಹೈಟ್ ಹೆಚ್ಚಿಸಿಕೊಂಡ ಹೈಟೆಕ್ ವಂಚಕ ಕೊನೆಗೂ ಪೋಲೀಸರ ಅತಿಥಿಯಾಗಿದ್ದಾನೆ..

ಪೊಲೀಸರಿಗೆ ಚೇಳೆ ಹಣ್ಣು ತನ್ನಿಸಿ ಪೊಲೀಸರಾಗಲು ಯತ್ನಿಸಿದ ಇಬ್ಬರು ಹೈಟೆಕ್ ವಂಚಕರು ಜೈಲು ಪಾಲಾಗಿದ್ದಾರೆ.
ಸಬ್ ಇನ್ಸ್ಪೆಕ್ಟರ್ ಹುದ್ದೆಯ ದೇಹದಾರ್ಡ್ಯತೆ ಪರೀಕ್ಷೆಯಲ್ಲಿ ಫಿಜಿಕಲ್ ಟೆಸ್ಟ್ ನಡೆಯುವ ಸಂಧರ್ಭದಲ್ಲಿ ಈ ಘಟನೆ ನಡೆದಿದೆ.

ಬೆಳಗಾವಿ ಮಚ್ಚೆ ಕೆ ಎಸ್ ಆರ್ ಪಿ ಮೈದಾನದಲ್ಲಿ ಫಿಜಿಕಲ್ ಟೆಸ್ಟ್ ಪರೀಕ್ಷೆ ನಡೆಯುವಾಗ
ಎತ್ತರ ಕಡಿಮೆ ಹಿನ್ನೆಲೆಯಲ್ಲಿ ಖತರನಾಕ್ ಐಡಿಯ ಮಾಡಿದ್ದ ಆರೋಪಿ, ತಲೆಯ ಮೇಲೆ ಮೂರು ತುಣಕು ಥರ್ಮಾಕೋಲ್, ಅದರ ಮೇಲೆ ವಿಗ್.
ತನ್ನ ಎತ್ತರ ಹೆಚ್ಚು ಮಾಡಿಕೊಳ್ಳಲು ಈ ರೀತಿಯ ಐಡಿಯಾ ಮಮಾಡಿದ್ದ ಆದ್ರೆ ಕೊನೆಗೂ ಸಿಕ್ಕಿಬಿದ್ದ.

ನೇಮಕಾತಿಯಲ್ಲಿ ಪ್ರಾಧಿಕಾರಕ್ಕೆ ಮೋಸ ಮಾಡಲು ಯತ್ನಿಸಿದ ಚಿಕ್ಕೋಡಿ ತಾಲೂಕಿನ ಬಾಳೇಶ ದುರುಂಡಿ ಬಂಧ‌ನ ಆಗಿದ.
ಬೆಳಗಾವಿ ಗ್ರಾಮೀಣ ‌ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು. ಇನ್ನೊಂದು ಪ್ರಕರಣದಲ್ಲಿ ಉಮೇಶ ಪರೀಕ್ಷಾರ್ಥಿಯ ಬಂಧನ.
ಮೂಡಲಗಿ ತಾಲೂಕಿನ ಕುಲಗೋಡು ಗ್ರಾಮ ಉಮೇಶ.ಈತನು ಎತ್ತರ ಹೆಚ್ಚು ಮಾಡಿಕೊಳ್ಳಲು ತಲೆಗೆ ಮೇಲೆ ಫವಿಕಾಲ್ ಹಾಕಿ ಕುದಲು ಅಂಟಿಸಿಕೊಂಡಿದ್ದ. ಉಮೇಶ ವಿರುದ್ಧ ಮಾರ್ಕೆಟ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Check Also

ವೀರ ಮದಕರಿ ಪುತ್ಥಳಿ ಸ್ಥಾಪನೆ- ಸ್ಥಳ ಪರಿಶೀಲಿಸಿ ವರದಿ ನೀಡಲು ಸೂಚನೆ:

ಪರಿಶಿಷ್ಟರ ದೂರು ನಿವಾರಣೆಗೆ ತ್ವರಿತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ಬೆಳಗಾವಿ, -: ಪರಿಶಿಷ್ಟ ಜಾತಿ/ವರ್ಗಗಳ ದೌರ್ಜನ್ಯ …

Leave a Reply

Your email address will not be published. Required fields are marked *