Home / Breaking News / ಯಾರಿಗೆ ಎಷ್ಟು ಮತ, ಎಷ್ಟಿದೆ ಗೆಲುವಿನ ಅಂತರ…

ಯಾರಿಗೆ ಎಷ್ಟು ಮತ, ಎಷ್ಟಿದೆ ಗೆಲುವಿನ ಅಂತರ…

ಬೆಳಗಾವಿ,- ಬೆಳಗಾವಿ ಲೋಕಸಭಾ ಉಪ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಮಂಗಲಾ ಸುರೇಶ್ ಅಂಗಡಿ ಅವರು 5240 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.

ರೈಲ್ವೆ ಇಲಾಖೆಯ ರಾಜ್ಯ ಸಚಿವರಾಗಿದ್ದ ಸುರೇಶ್ ಅಂಗಡಿ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಏ.17 ರಂದು ಮತದಾನ ನಡೆದಿತ್ತು.

ಭಾನುವಾರ (ಮೇ 2) ನಗರದ ಆರ್.ಪಿ.ಡಿ. ಕಾಲೇಜಿನಲ್ಲಿ ಮತ ಎಣಿಕೆ ನಡೆಯಿತು.

ವಿಜೇತ ಅಭ್ಯರ್ಥಿಯಾದ ಮಂಗಲಾ ಸುರೇಶ್ ಅಂಗಡಿ ಅವರು ಚುನಾವಣಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಅವರಿಂದ ಪ್ರಮಾಣಪತ್ರವನ್ನು ಪಡೆದುಕೊಂಡರು.

ಬೆಳಗಾವಿ ಲೋಕಸಭಾ ಉಪ ಚುನಾವಣೆಯ ಸಾಮಾನ್ಯ ವೀಕ್ಷಕರಾದ ಚಂದ್ರಭೂಷಣ್ ತ್ರಿಪಾಠಿ, ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ್ ಪಾಟೀಲ ಅಪರ ಜಿಲ್ಲಾಧಿಕಾರಿ ಯೋಗೇಶ್ವರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮಂಗಲಾ ಅಂಗಡಿಗೆ 4,40,0327 ಮತಗಳು:

ಬೆಳಗಾವಿ ಲೋಕಸಭಾ ಉಪ ಚುನಾವಣೆಯಲ್ಲಿ ವಿಜೇತ ಅಭ್ಯರ್ಥಿಯಾಗಿರುವ ಮಂಗಲಾ ಅಂಗಡಿ ಅವರು 4,40,327 ಮತಗಳನ್ನು ಪಡೆದುಕೊಂಡರು.

ಸಮೀಪದ ಪ್ರತಿಸ್ಪರ್ಧಿಯಾದ ಕಾಂಗ್ರೆಸ್ ಪಕ್ಷದ ಸತೀಶ್ ಜಾರಕಿಹೊಳಿ ಅವರು 4,35,087 ಮತಗಳನ್ನು ಪಡೆದುಕೊಂಡರು.

ಮತ ಎಣಿಕೆಯ ಆರಂಭದಿಂದಲೂ ತೀವ್ರ ಕುತೂಹಲ ಮೂಡಿತ್ತು. ಕೊನೆಗೂ ಮಂಗಲಾ ಅಂಗಡಿ ಅವರು 5240 ಮತಗಳ ಅಂತರದಿಂದ ಜಯ ಸಾಧಿಸಿದರು.

ಕಣದಲ್ಲಿ ಇದ್ದ ಹತ್ತು ಅಭ್ಯರ್ಥಿಗಳ ಪೈಕಿ ಪಕ್ಷೇತರ ಅಭ್ಯರ್ಥಿ ಶುಭಂ ಶೆಳಕೆ 1,17,174 ಮತಗಳನ್ನು ಪಡೆದುಕೊಳ್ಳುವ ಮೂಲಕ ಮೂರನೇ ಸ್ಥಾನ ಗಳಿಸಿದರು.

ಒಟ್ಟು 18,21,614 ಮತಗಳ ಪೈಕಿ 10,11,616 ಮತಗಳು ಚಲಾವಣೆಯಾಗಿರುತ್ತವೆ. 556 ಮತಗಳು ತಿರಸ್ಕೃತಗೊಂಡಿರುತ್ತವೆ. ಟೆಂಡರ್ಡ್ ಮತಗಳ ಸಂಖ್ಯೆ

ಮತ ಪಡೆದವರ ವಿವರ:

* ಒಟ್ಟು ಮತಗಳು : 18,21,614

* ಚಲಾವಣೆಯಾದ ಮತಗಳು: 10,11,616

1. ಮಂಗಲಾ ಸುರೇಶ್ ಅಂಗಡಿ(ಬಿಜೆಪಿ)- 4,40,327

2. ಸತೀಶ್ ಜಾರಕಿಹೊಳಿ(ಕಾಂಗ್ರೆಸ್)- 4,35,087

3. ವಿವೇಕಾನಂದ ಬಾಬು ಘಂಟಿ(ಕರ್ನಾಟಕ ರಾಷ್ಟ್ರ ಸಮಿತಿ)-4844

4. ಶ್ರೀ ವೆಂಕಟೇಶ್ವರ ಮಹಾಸ್ವಾಮೀಜಿ(ಹಿಂದುಸ್ತಾನ ಜನತಾ ಪಾರ್ಟಿ)- 2015

5. ಮಾರಲಿಂಗಣ್ಣವರ ಸುರೇಶ್ ಬಸಪ್ಪ(ಕರ್ನಾಟಕ ಕಾರ್ಮಿಕರ ಪಕ್ಷ)- 2021

6. ಅಪ್ಪಾಸಾಹೇಬ್ ಶ್ರೀಪತಿ ಕುರಣೆ(ಪಕ್ಷೇತರ)-1364

7. ಶ್ರೀ ಗೌತಮ್ ಯಮನಪ್ಪ ಕಾಂಬಳೆ(ಪಕ್ಷೇತರ)- 1390

8. ನಾಗಪ್ಪ ಕಳಸಣ್ಣವರ(ಪಕ್ಷೇತರ)- 3006

9. ಶುಭಂ‌ ಶೆಳಕೆ(ಪಕ್ಷೇತರ)- 1,17,174

10. ಶ್ರೀಕಾಂತ್ ಪಡಸಲಗಿ(ಪಕ್ಷೇತರ)- 4388

11. ನೋಟಾ- 10,631

Check Also

52 ದಿನಗಳ ಬೀಗಕ್ಕೆ ಬ್ರೆಕ್,ಬೆಳಗಾವಿ ಇಂದಿನಿಂದ ಖುಲ್ಲಂ ಖುಲ್ಲಾ…!!!

ಬೆಳಗಾವಿ- ಬೆಳಗಾವಿ ಜಿಲ್ಲೆ ಕೊರೋನಾ ಮಹಾಮಾರಿಯ ಕಾಟಕ್ಕೆ ತತ್ತರಿಸಿತ್ತು,ಜಿಲ್ಲೆಯ ಜನ ಬರೊಬ್ಬರಿ 52 ದಿನಗಳ ಅನುಭವಿಸಿದ ಮನೆವಾಸದಿಂದ ಇಂದು ಮುಕ್ತಿ …

Leave a Reply

Your email address will not be published. Required fields are marked *