ಬೆಳಗಾವಿ-ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ಬೈಲಹೊಂಗಲ ತಾಲ್ಲೂಕಿನ ಸಂಪಗಾಂವಿ ತಾಲ್ಲೂಕು ಆಗಿತ್ತು,ಇದು ಬ್ರಿಟಿಷ್ ಅಧಿಕಾರಿಗಳ ಹೆಡ್ ಕ್ವಾಟರ್ ಕೂಡಾ ಆಗಿತ್ತು ಇಂತಹ ಕ್ರಾಂತಿಕಾರಿ ನೆಲದಲ್ಲಿ ಸ್ವಾತಂತ್ರ್ಯ ಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರ ಎಂ.ಕೆ ಹುಬ್ಬಳ್ಳಿ ಗ್ರಾಮದ ಮಹಾದೇವಪ್ಪಾ ಮಮದಾಪೂರ ಅವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.
ಪ್ರತಿ ವರ್ಷ ಸ್ವಾತಂತ್ರ್ಯೋತ್ಸವದ ದಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಮಹಾದೇವಪ್ಪ ಮಮದಾಪೂರ ಅವರನ್ನು ಗಾಂಧೀ ಚಿತಾಭಸ್ಮ ಸ್ಮಾರಕದ ಬಳಿ ಅವರನ್ನು ಸತ್ಕರಿಸಿ ಗೌರವಿಸಲಾಗುತ್ತಿತ್ತು,ಆದ್ರೆ ಈ ವರ್ಷ ಸ್ವಾತಂತ್ರ್ಯೋತ್ಸವದ ದಿನವೇ ಹಿರಿಯ ಹೋರಾಟಗಾರ ಇಹಲೋಕ ತ್ಯೇಜಿಸಿದ್ದು ವಿಷಾಧನೀಯ
1942 ರಲ್ಲಿ ಮಹಾತ್ಮಾ ಗಾಂಧಿಯವರು ಭಾರತ ಬಿಟ್ಟು ತೊಲಗಿ,ಚಲೇಜಾವ್ ಚಳುವಳಿ ಆರಂಭಿಸಿದ ಸಂಧರ್ಭದಲ್ಲಿ ಮಹಾದೇವಪ್ಪ ಮಮದಾಪೂರ ಅವರು ಜೈಲುವಾಸ ಅನುಭವಿಸಿದ್ದರು,ಜೈಲು ಸೇರಿದ ಚಳುವಳಿಗಾರರಿಗೆ ಅಡುಗೆ ಮಾಡಿ ಊಟ ಕೊಡುವ ಕಾರ್ಯವನ್ನು ಮಮದಾಪೂರ ಅವರು ಮಾಡಿದ್ದರು…