ಬೆಳಗಾವಿ- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಬೆಳಗಾವಿಗೆ ಭೇಟಿ ನೀಡಿದ್ರು,ಸುವರ್ಣ ವಿಧಾನಸೌಧದಲ್ಲಿ ಸಭೆಯ ಬಳಿಕ ಅವರು ಆಡಿದ ಮಾತುಗಳು ಬೆಳಗಾವಿ ಜಿಲ್ಲೆಯ ಜನರಲ್ಲಿ ಭರವಸೆಯ ಬೆಳಕು ಮೂಡಿಸಿದ್ದು ಸತ್ಯ.
ಸುವರ್ಣ ವಿಧಾನಸೌಧದಲ್ಲಿ ಜಿಲ್ಲೆಯ ಶಾಸಕರು ಮತ್ತು,ಅಧಿಕಾರಿಗಳ ಜೊತೆ ಸಭೆ ನಡೆಸಿದ ನಂತರ ಪತ್ರಿಕಾಗೋಷ್ಢಿ ನಡೆಸಿದ ಅವರು,ಬೆಳಗಾವಿಯ ಸುವರ್ಣಸೌಧವನ್ನು ಶಕ್ತಿ ಕೇಂದ್ರವನ್ನಾಗಿ ಮಾರ್ಪಡಿಸುವ ಕುರಿತು ಭರವಸೆಯ ಮಾತುಗಳನ್ನಾಡಿದರು.ನನಗೆ ಸ್ವಲ್ಪ ಸಮಯ ಕೊಡಿ ಬೆಂಗಳೂರಿನ ವಿಧಾನ ಸೌಧ ಇದ್ದಂಗೆ ಬೆಳಗಾವಿಯ ಸುವರ್ಣ ವಿಧಾನಸೌಧವನ್ನೂ ಮಾಡ್ತೀನಿ. ಎಂದು ಹೇಳುವ ಮೂಲಕ ಒಂದೇ ಮಾತಿನಲ್ಲಿ ನೂರೆಂಟು ಭರವಸೆಗಳನ್ನು ಮೂಡಿಸಿದರು.
ಸಕ್ಕರೆ ಆಯುಕ್ತರ ಕಚೇರಿಯನ್ನು ಕೂಡಲೇ ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಶಿಪ್ಟ್ ಮಾಡ್ತೀನಿ.ಬೆಂಗಳೂರಿಗೆ ಹೋದ ತಕ್ಷಣ ಈ ಕುರಿತು ಅಧಿಕೃತ ಆದೇಶ ಹೊರಡಿಸುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಅನೇಕ ಕಚೇರಿಗಳನ್ನು ಸ್ಥಳಾಂತರಿಸುವ ಕುರಿತು ಅನೇಕ ಆದೇಶಗಳು,ಆಗಿವೆ ಆದ್ರೆ ಅನುಷ್ಠಾನ ಆಗಿಲ್ಲ. ಆದೇಶಗಳನ್ನು ಪರಶೀಲಿಸಿ ಪುನರ್ ಆದೇಶ ಮಾಡ್ತೀನಿ.ಬೆಳಗಾವಿಯ ಸುವರ್ಣ ವಿಧಾನಸೌಧವನ್ನು ಶಕ್ತಿ ಕೇಂದ್ರವನ್ನಾಗಿ ಮಾಡುವ ಸಂಕಲ್ಪ ನನ್ನದಾಗಿದೆ ಎಂದು ಸಿಎಂ ಹೇಳಿದ್ದು ಅವರ ಇಚ್ಛಾಶಕ್ತಿಯನ್ನು ತೋರಿಸಿತು.
ಡಿಸೆಂಬರ್ ತಿಂಗಳಲ್ಲಿ ಬೆಳಗಾವಿಯಲ್ಲೇ ಚಳಿಗಾಲದ ಅಧಿವೇಶನ ಮಾಡುತ್ತೇವೆ.ಈ ವಿಚಾರದಲ್ಲಿ ಅನುಮಾನವೇ ಬೇಡ ಎಂದು ಸಿಎಂ ಹೇಳಿದ್ರು.