ಬೆಳಗಾವಿ ಮಹಾನಗರದ ಬಾಂಡ್ ಮನೆಗಳನ್ನು ಸಕ್ರಮಗೊಳಿಸಲು,ಸಿಎಂ ಗೆ ಮನವಿ ಮಾಡಿದ ಶಾಸಕ ಅಭಯ ಪಾಟೀಲ
ಬೆಳಗಾವಿ-ಬೆಳಗಾವಿ ಮಹಾನಗರದಲ್ಲಿ ಬಡವರು ನೂರು ರೂ ಬಾಂಡ್ ಮೇಲೆ ಜಮೀನು ಖರೀಧಿಸಿ ಮನೆ ನಿರ್ಮಿಸಿಕೊಂಡಿದ್ದು ಇಂತಹ ಮನೆಗಳನ್ನು ಸರ್ಕಾರ ಸಕ್ರಮಗೊಳಿಸುವಂತೆ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾದ ಶಾಸಕ ಅಭಯ ಪಾಟೀಲ,ಬೆಳಗಾವಿ ಮಹಾನಗರದಲ್ಲಿ ಬಾಂಡ್ ಪೇಪರ್ ಮೇಲೆ ಜಮೀನು ಖರೀಧಿಸಿದ ಸಾವಿರಾರು ಮನೆಗಳಿವೆ.ಬಡವರು ಅನಿವಾರ್ಯ ಪರಿಸ್ಥಿತಿಯಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಇಂತಹ ಮನೆಗಳು ಇರುವ ಬಡಾವಣೆಗಳಿಗೆ ಮಾನವೀಯತೆ ದೃಷ್ಠಿಯಿಂದ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದೇವೆ.ಸರ್ಕಾರ ಈ ರೀತಿಯ ಮನೆಗಳನ್ನು ಸಕ್ರಮಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಬೇಕೆಂದು,ಅಭಯ ಪಾಟೀಲ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿಕೊಂಡರು.
ಹುಬ್ಬಳ್ಳಿಯಲ್ಲಿ ಸಿಎಂ ಭೇಟಿಯಾಗಿ ಬೆಳಗಾವಿಗೆ ಮರಳಿ ಮಾದ್ಯಮ ಮಿತ್ರರಿಗೆ ಈ ವಿಷಯ ತಿಳಿಸಿದ ಅಭಯ ಪಾಟೀಲ, ಬೆಳಗಾವಿ ಮಹಾನಗರದಲ್ಲಿರುವ ಬಡವರ ಬಾಂಡ್ ಮನೆಗಳನ್ನು ಸಕ್ರಮಗೊಳಿಸುವ ನಿಟ್ಟಿನಲ್ಲಿ ಹಲವಾರು ವರ್ಷಗಳಿಂದ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮುಂದುವರೆದಿದೆ.ಇದೇ ವಿಚಾರಗೋಸ್ಕರ ನಾನು ಸಿಎಂ ಭೇಟಿಯಾಗಲು ಹುಬ್ಬಳ್ಳಿಗೆ ಹೋಗಿದ್ದೆ.ಈ ವಿಚಾರದ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಬಡವರ ಮನೆಗಳು ಆದಷ್ಟು ಬೇಗ ಸಕ್ರಮಗೊಳ್ಳಲಿವೆ.ಎಂದು ಶಾಸಕ ಅಭಯ ಪಾಟೀಲ ವಿಶ್ವಾಸ ವ್ಯೆಕ್ತಪಡಿಸಿದ್ದಾರೆ.