ಬೆಳಗಾವಿ- ರಾಜ್ಯೋತ್ಸವ ಸಮೀಪಿಸುತ್ತಿದ್ದಂತೆಯೇ ಬೆಳಗಾವಿಯಲ್ಲಿ ನಾಡವಿರೋಧಿ ಎಂಈಎಸ್ ನಾಯಕರ ಪುಂಡಾಟಿಕೆ ಶುರುವಾಗುತ್ತದೆ, ವಾಡಿಕೆಯಂತೆ ಇವತ್ತು ಎಂಈಎಸ್ ನಾಯಕರು ಹೈಡ್ರಾಮಾ ನಡೆಸಿದ್ದಾರೆ.
ರಾಜ್ಯೋತ್ಸವ ಕೇಲವೆ ದಿನಗಳ ಮೊದಲು ಎಂಇಎಸ್ ಕಿರಿಕ್ ಶುರುವಾಗಿದೆ.
ಬೆಳಗಾವಿಯಲ್ಲಿ ಮರಾಠಿ ಬೋರ್ಡ್ ಹಾಕುವಂತೆ,
ಬೆಳಗಾವಿಯಲ್ಲಿ ಎಂಇಎಸ್ ಸಂಘಟನೆ ಕ್ಯಾತೆ ತೆಗೆದಿದೆ.
ಸಂಭಾಜೀ ವೃತ್ತದಲ್ಲಿ ಎಂಇಎಸ್ ಕಾರ್ಯಕರ್ತರು ಪುಂಡಾಟಿಕೆ ನಡೆಸಿ ಬ್ಯಾರಿಕೆಟ್ ತಳ್ಳಿ ನುಗ್ಗಲು ಯತ್ನಿಸಿ ಗುಂಡಾಗಿರಿ ಪ್ರದರ್ಶಿಸಿದ ನಾಡವಿರೋಧಿಗಳು, ಪೊಲೀಸರ ಜತೆಗೆ ವಾಗ್ವಾದ ನಡೆಸಿದ ಘಟನೆಯೂ ನಡೆಯಿತು.
ಪ್ರತಿಭಟನಾ ರ್ಯಾಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಹೋಗಲು ಅವಕಾಶ ಕೊಡಬೇಕು, ಕರ್ನಾಟಕ ಸರ್ಕಾರ ನಾಲಾಯಕ ಸರ್ಕಾರ ಎಂದೆಲ್ಲ ಘೋಷಣೆ ಕೂಗಿದ ಎಂಈಎಸ್ ಇವತ್ತು ಹುಚ್ಚಾಟ ನಡೆಸಿತು.ಮನವಿ ಸ್ವೀಕರಿಸಲು ಅಪರ ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಿದರೂ ಅವರಿಗೆ ಮನವಿ ಕೊಡದೇ ನಾವು ಜಿಲ್ಲಾಧಿಕಾರಿಗಳಿಗೆ ಮನವಿ ಕೊಡುತ್ತೇವೆ ಎಂದು ಈ ನಾಡವಿರೋಧಿಗಳು ಪುಂಡಾಟಿಕೆ ಪ್ರದರ್ಶಿಸಿದರು
ಕನ್ನಡ ಸಂಘಟನೆಗಳ ತುರ್ತು ಸಭೆ
ಬೆಳಗಾವಿಯಲ್ಲಿ ರಾಜ್ಯೋತ್ಸವದ ಮೆರವಣಿಗೆ ಅನುಮತಿ ಕೊಡುವ ವಿಚಾರದಲ್ಲಿ ಸರ್ಕಾರದ ವಿಳಂಬ ನೀತಿ, ಎಂಈಎಸ್ ಪುಂಡಾಟಿಕೆ,ಸೇರಿದಂತೆ ವಿವಿಧ ವಿಚಾರಗಳ ಕುರಿತು ಚರ್ಚೆ ಮಾಡಲು ಬೆಳಗಾವಿಯ ಕನ್ನಡಪರ ಸಂಘಟನೆಗಳ ನಾಯಕರು ಇಂದು ಸಂಜೆ 4-00 ಗಂಟೆಗೆ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ತುರ್ತು ಸಭೆ ಕರೆದಿದ್ದಾರೆ.
ಸಭೆಯಲ್ಲಿ ಕನ್ನಡಪರ ಸಂಘಟನೆಗಳ ನಾಯಕರು ಕಾರ್ಯಕರ್ತರು ಅಭಿಮಾನಿಗಳು ಭಾಗವಹಿಸಿ ಮುಂದಿನ ಹೋರಾಟದ ಕುರಿತು ನಿರ್ಣಯ ಕೈಗೊಳ್ಳಲಿದ್ದಾರೆ.