ಬೆಳಗಾವಿ- ಸರ್ಕಾರ ಡಿಸೆಂಬರ್ ತಿಂಗಳಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಸಲು ನಿರ್ಧರಿಸಿರುವ ಹಿನ್ನಲೆಯಲ್ಲಿ ಕಾನೂನು ಸುವ್ಯೆವಸ್ಥೆ ವಿಭಾಗದ ಎಡಿಜಿಪಿ ಪ್ರತಾಪ ರೆಡ್ಡಿ ಇಂದು ಸುವರ್ಣವಿಧಾನಸೌಧಕ್ಕೆ ಭೇಟಿ ನೀಡಿ ಸ್ಥಳೀಯ ಪೋಲೀಸ್ ಅಧಿಕಾರಗಳ ಜೊತೆ ಸಮಾಲೋಚನೆ ನಡೆಸಿದ್ರು
ಸುವರ್ಣ ವಿಧಾನಸೌಧದ ಒಳಾಂಗಣ,ಹೊರಾಂಗಣ,ಮುಖ್ಯಮಂತ್ರಿಗಳ ಕಚೇರಿಯ ಭದ್ರತೆ ಸೇರಿದಂತೆ ಪೋಲೀಸ್ ಬಂದೋಬಸ್ತಿ,ಹಾಗೂ ಅಧಿವೇಶನದ ಸಂಧರ್ಭದಲ್ಲಿ ಪ್ರತಿಭಟನೆ ನಡೆಸುವ ಸ್ಥಳ,ಸೇರಿದಂತೆ ವಿವಿಧ ವಿಷಯಗಳ ಕುರಿತು ಸ್ಥಳೀಯ ಪೋಲೀಸ್ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ ಎಡಿಜಿಪಿ ಪ್ರತಾಪ ರಡ್ಡಿ ಸುವರ್ಣಸೌಧದ ಸಮಗ್ರ ಭದ್ರತೆಯ ಕುರಿತು ಮಾಹಿತಿ ಪಡೆದುಕೊಂಡರು.
ಉತ್ತರ ವಲಯ ಐಜಿಪಿ ಸತೀಶ್ ಕುಮಾರ,ನಗರ ಪೋಲೀಸ್ ಆಯುಕ್ತ ತ್ಯಾಗರಾಜನ್,ಎಸ್ ಪಿ ಲಕ್ಷ್ಮಣ ನಿಂಬರಗಿ,ಸೇರಿದಂತೆ ಇತರ ಪೋಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ