Home / Breaking News / ತಂಬಾಕಿನಿಂದಾಗುವ ದುಷ್ಪರಿಣಾಮದ ಕುರಿತು ಸಫಾಯಿ ಕರ್ಮಚಾರಿಗಳಿಗೆ ಜಾಗೃತಿ ಕಾರ್ಯಕ್ರಮ

ತಂಬಾಕಿನಿಂದಾಗುವ ದುಷ್ಪರಿಣಾಮದ ಕುರಿತು ಸಫಾಯಿ ಕರ್ಮಚಾರಿಗಳಿಗೆ ಜಾಗೃತಿ ಕಾರ್ಯಕ್ರಮ

ಬೆಳಗಾವಿ, – ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಸರದಾರ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ (ಜೂ.11) ಮಹಾನಗರ ಪಾಲಿಕೆಯ ಸಫಾಯಿ ಕರ್ಮಚಾರಿಗಳಿಗೆ ತಂಬಾಕು ಹಾಗೂ ತಂಬಾಕಿನಿಂದಾಗುವ ದುಷ್ಪರಿಣಾಮದ ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿಲ್ಲಾ ಸಮೀಕ್ಷಾ/ತಂಬಾಕು ನಿಯಂತ್ರಣಾಧಿಕಾರಿ ಡಾ.ಬಿ.ಎನ್.ತುಕ್ಕಾರ ವಿಶ್ವದಾದ್ಯಂತ 55 ಲಕ್ಷ ಜನರು ತಂಬಾಕು ಬಳಕೆಯಿಂದ ಸಾಯುತ್ತಿದ್ದಾರೆ. ಪ್ರತಿ ವರ್ಷ 8 ಲಕ್ಷ ಭಾರತೀಯರು ತಂಬಾಕು ಬಳಕೆಯಿಂದ ಸಾಯಿತ್ತಿದ್ದಾರೆ. ತಂಬಾಕು ಸೇವನೆಯಿಂದ ದಿನಕ್ಕೆ 2.200 ಕ್ಕಿಂತ ಹೆಚ್ಚು ಭಾರತೀಯರು ಸಾಯುತ್ತಿದ್ದಾರೆ.

ಭಾರತದಲ್ಲಿ 100 ಕ್ಯಾನ್ಸರ್ ಪ್ರಕರಣಗಳಲ್ಲಿ 40 ತಂಬಾಕು ಸಂಬಂಧಿತವಾಗಿವೆ ಹಾಗೂ ಈ ದಿನದ ಆಚರಣೆಯ ಉದ್ದೇಶ “ತಂಬಾಕು ತ್ಯಜಿಸಲು ಬದ್ಧರಾಗಿರಿ” ಈ ವರ್ಷದ ಘೋಷವಾಕ್ಯ ಎಂದು ತಿಳಿಸಿದರು.

ಅಲ್ಲದೇ, ಕೋವಿಡ್ -19 ಕುರಿತು ಸಾಮಾಜಿಕ ಅಂತರ
ಮತ್ತು ಸ್ಯಾನಿಟೈಸರ್ ಹಾಗೂ ಲಸಿಕೆಯನ್ನು ಆದ್ಯತೆ ಮೇರೆಗೆ ಹಾಕಿಸಿಕೊಳ್ಳಲು ಕರೆ ನೀಡಿದರು.

ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ
ಡಾ.ಡುಮ್ಮಗೋಳ ಮಾತನಾಡಿ, ಮಹಾನಗರ ವ್ಯಾಪ್ತಿಯಲ್ಲಿ ಬರುವ ತಂಬಾಕು ಉತ್ಪನ್ನ ಮಾರಾಟ ಮಾಡುವ ವ್ಯಾಪಾರಸ್ತರು ಪ್ರತ್ಯಕ್ಷ ಉದ್ಯಮ ಪರವಾನಿಗೆ ಪಡೆದುಕೊಳ್ಳಬೇಕು.

ತಂಬಾಕು ಮಾರಾಟ ಮಾಡುವ ಅಂಗಡಿಗಳು ಶೈಕ್ಷಣಿಕ ಸಂಸ್ಥೆಗಳ 100 ಗಜದ ಅಂತರದೊಳಗೆ ಮಾರಾಟ ಮಾಡದಂತೆ ಹಾಗೂ ಕೋಟ್ಟಾ ಕಾಯ್ದೆಯ 6(ಎ) ಅಡಿಯ ಅಪ್ರಾಪ್ತ ವಯಸ್ಕರಿಗೆ ಹಾಗೂ ಅಪ್ರಾಪ್ತ ವಯಸ್ಕರಿಂದ ತಂಬಾಕು ಮಾರಾಟ ಮಾಡದಂತೆ ಎಚ್ಚರ
ವಹಿಸಬೇಕು ಎಂದು‌ ತಿಳಿಸಿದರು.

ಜಿಲ್ಲಾ ಸಲಹೆಗಾರರಾದ ಡಾ.ಶ್ವೇತಾ ಪಾಟೀಲ ಕೋಟ್ಟಾ-2003 ರ ಬಗ್ಗೆ ಸೆಕ್ಷನ್ -4 ರ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಮಾಡಲಾಗಿದೆ. ಈ ಕಾನೂನು ಉಲ್ಲಂಘಿಸಿದ ವ್ಯಕ್ತಿಗೆ 200/-ದಂಡ ವಿಧಿಸಲಾಗುವುದು. ಸೆಕ್ಷನ್ -5 ಪ್ರಕಾರ ತಂಬಾಕು ಉತ್ಪನ್ನಗಳ ನೇರ ಹಾಗೂ ಪರೋಕ್ಷ ಜಾಹೀರಾತನ್ನು ನಿಷೇಧಿಸಲಾಗಿದೆ.

ಅದೇ ರೀತಿ, ಸೆಕ್ಷನ್-6ರ ಪ್ರಕಾರ ತಂಬಾಕು ಉತ್ಪನ್ನಗಳ ಅಪ್ರಾಪ್ತ ವಯಸ್ಕರಿಗೆ ನಿಯಂತ್ರಣ ಮಾಡುವುದು ಹಾಗೂ ಸೆಕ್ಷನ್ -6(ಬಿ)ಪ್ರಕಾರ ಶಿಕ್ಷಣ ಸಂಸ್ಥೆಗಳ
100 ಮೀಟರ ಒಳಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ.

ಸೆಕ್ಷನ್ -7 ಪ್ರಕಾರ ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಮೇಲೆ ನಿರ್ದಿಷ್ಟ ಆರೋಗ್ಯ ಎಚ್ಚರಿಕೆಗಳ ಸಂದೇಶಗಳಿಲ್ಲದೆ ಮಾರಾಟ ಮಾಡುವದು ಸಹ ಶಿಕ್ಷಾರ್ಹ
ಅಪರಾಧವಾಗಿರುತ್ತದೆ ಎಂದು ತಂಬಾಕಿನ ಕುರಿತು ಕಾನೂನು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಲಾಯಿತು ಮತ್ತು ಟೀ-ಶರ್ಟ್ ಗಳನ್ನು
ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ನಗರ ಪಾಲಿಕೆಯ ಸಿಬ್ಬಂದಿಗಳು ಹಾಗೂ ಸಫಾಯಿ ಕರ್ಮಚಾರಿಗಳು ರಮೇಶ ಹುಲಿಕೆರಿ ಹಾಜರಿದ್ದರು.

ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಮಾಜ ಕಾರ್ಯಕರ್ತೆಯಾದ ಕವಿತಾ ರಾಜನ್ನವರ ನಿರೂಪಿಸಿದರು. ಆಶಾ ಹೀರೆಮಠ ವಂದಿಸಿದರು.
******

Check Also

52 ದಿನಗಳ ಬೀಗಕ್ಕೆ ಬ್ರೆಕ್,ಬೆಳಗಾವಿ ಇಂದಿನಿಂದ ಖುಲ್ಲಂ ಖುಲ್ಲಾ…!!!

ಬೆಳಗಾವಿ- ಬೆಳಗಾವಿ ಜಿಲ್ಲೆ ಕೊರೋನಾ ಮಹಾಮಾರಿಯ ಕಾಟಕ್ಕೆ ತತ್ತರಿಸಿತ್ತು,ಜಿಲ್ಲೆಯ ಜನ ಬರೊಬ್ಬರಿ 52 ದಿನಗಳ ಅನುಭವಿಸಿದ ಮನೆವಾಸದಿಂದ ಇಂದು ಮುಕ್ತಿ …

Leave a Reply

Your email address will not be published. Required fields are marked *