Breaking News

ನನ್ನ ಸ್ವಂತ ತಮ್ಮನನ್ನು ಸೋಲಿಸಿ ಬೆಜೆಪಿ ಗೆಲ್ಲಿಸಿದ್ದು ನಾನೇ- ರಮೇಶ್ ಜಾರಕಿಹೊಳಿ

ನನ್ನ ಸ್ವಂತ ತಮ್ಮನನ್ನು ಸೋಲಿಸಿ ಬೆಜೆಪಿ ಗೆಲ್ಲಿಸಿದ್ದು ನಾನೇ- ರಮೇಶ್ ಜಾರಕಿಹೊಳಿ

ಬೆಳಗಾವಿ- ಇತ್ತೀಚಿಗೆ ನಡೆದ ಬೆಳಗಾವಿ ಲೋಕಸಭಾ ಮತಕ್ಷೇತ್ರದ ಉಪ ಚುನಾವಣೆಯಲ್ಲಿ ನನ್ನ ಸ್ವಂತ ತಮ್ಮ ಸತೀಶ್ ಜಾರಕಿಹೊಳಿ ಅವರನ್ನು ಸೋಲಿಸಿ,ಲಿಂಗಾಯತ ಸಮುದಾಯದ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಅವರನ್ನು ಗೆಲ್ಲಿಸಿದ್ದು ನಾನೇ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿರೇಬಾಗೇವಾಡಿಯಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ್ ಕವಟಗಠ ಅವರ ಪರವಾಗಿ ಮತಯಾಚಿಸಿದ ಅವರು ಪಕ್ಷದ ವಿಚಾರ ಬಂದಾಗ ನಾನೆಂದಿಗೂ ಕುಟುಂಬ ನೋಡಿಲ್ಲ,ನನಗೆ ಪಕ್ಷದ ಗೆಲುವೇ ಮುಖ್ಯವಾಗಿದ್ದು,ನಾನು ಬಸವ ತತ್ವದ ಪರಿಪಾಲಕನಾಗಿದ್ದೇನೆ.ನಾನೆಂದಿಗೂ ಜಾತಿವಾದ ಮಾಡಿದವನಲ್ಲ. ಕೆಲವರು ಸೋಲೀನ ಬೀತಿಯಿಂದ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಮಹಾಂತೇಶ್ ಕವಟಗಠ ಅವರನ್ನು ಗೆಲ್ಲಿಸುವದು,ಕಾಂಗ್ರೆಸ್ ಪಕ್ಷವನ್ನು ಸೋಲೀಸುವದೇ ನನ್ನ ಗುರಿ ಎಂದು ರಮೇಶ್ ಜಾರಕಿಹೊಳಿ ಹೇಳಿದ್ರು.

ಮಹಾಂತೇಶ್ ಕವಟಗಿಮಠ ಅವರು ಪ್ರತಿಷ್ಠಿತ ಲಿಂಗಾಯತ ಸಂಸ್ಥೆಯ ನಿರ್ದೇಶಕರಾಗಿದ್ದಾರೆ,ಸಮಾಜ ಅವರ ಪರವಾಗಿ ನಿಲ್ಲಬೇಕು,ಯಾವುದೇ ವದಂತಿಗಳಿಗೆ ಕಿವಿಗೊಡದೇ ಮಹತೇಶ್ ಕವಟಗಿಮಠ ಅವರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿಕೊಂಡ ಅವರು,ನಾನು ಶೀಘ್ರದಲ್ಲೇ ದೆಹಲಿಗೆ ಹೋಗುತ್ತಿದ್ದೇನೆ.ಬಿಜೆಪಿ ವರಿಷ್ಠರನ್ನು ಭೇಟಿಯಾದ ಬಳಿಕ ಮತ್ತೆ ನಿಮ್ಮನ್ನು ಭೇಟಿಯಾಗುತ್ತೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ರು…

ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜೇಂದ್ರ ಅಂಕಲಗಿ ಮಾತನಾಡಿ,ರಮೇಶ್ ಜಾರಕಿಹೊಳಿ ಹಿರೇಬಾಗೇವಾಡಿ ಗ್ರಾಮಕ್ಕೆ ನೀರು ಹರಿಸಿದ ಭಗೀರಥ,ಹಿರೇಬಾಗೇವಾಡಿ ಗ್ರಾಮಕ್ಕೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ತಂದ ಸಾಧಕ,ನನ್ನಂತಹ ಲಿಂಗಾಯತ ನಾಯಕನನ್ನು ಡಿಸಿಸಿ ಬ್ಯಾಂಕಿಗೆ ಅವಿರೋಧವಾಗಿ ಆಯ್ಕೆ ಮಾಡಿದ ಜಾತ್ಯಾತೀತ ನಾಯಕ ರಮೇಶ್ ಜಾರಕಿಹೊಳಿ ಅವರಾಗಿದ್ದಾರೆ ಎಂದರು.

Check Also

ಬಸವರಾಜ ಹೊರಟ್ಟಿ ಅವರ ಪಟ್ಟಿಯಲ್ಲಿ ಎಂಈಎಸ್ ನಿಷೇಧದ ವಿಚಾರವೂ ಸೇರಲಿ- ಕರವೇ

ಬೆಳಗಾವಿ -ನಾಳೆಯಿಂದ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ವಾರದಲ್ಲಿ ಎರಡು ದಿನ ಉತ್ತರ ಕರ್ನಾಟಕ ಪ್ರದೇಶದ ಅಭಿವೃದ್ಧಿಯ ಕುರಿತು ಚರ್ಚೆಗೆ …

Leave a Reply

Your email address will not be published. Required fields are marked *