ವೃದ್ಧೆ ತಾಯಿ,ಅಂಗವಿಕಲ
ಮಗನಿಗೆ ಈ ಬಸ್ ತಂಗುದಾಣವೇ
ಆಲಯವು!
ಹಾಸಲುಂಟು,ಹೊದೆಯಲುಂಟು
ಇವರೊಂದಿಗೆ ಎಲ್ಲವೂ ಇಲ್ಲುಂಟು!
ಇಂದು ಶುಕ್ರವಾರ ಸಂಜೆ
ಬೆಳಗಾವಿಯ ಟಿವ್ಹಿ ಸೆಂಟರ್
(ಬೂಡಾ ಯೋಜನೆ ಸಂಖ್ಯೆ13)
ನಲ್ಲಿರುವ ಬಸ್ ತಂಗುದಾಣದಲ್ಲಿ
ಈ ದೃಶ್ಯ ಕಂಡು ಬಂದಿತು.ಸುಮಾರು
ಎಪ್ಪತ್ತರ ಆಸು ಪಾಸು ವಯಸ್ಸಿನ
ವೃದ್ಧೆ ಜಯಲಕ್ಷ್ಮೀ ಹಾಗೂ 25 / 30
ವರ್ಷ ವಯಸ್ಸಿನ ಗುರುದತ್ತ ವಿನಾಯಕ
ತಮ್ಮ ಮನೆಯ ಸಾಮಾನು ಸರಂಜಾಮಿನ ಜೊತೆಗೆ ಇಲ್ಲಿ ಠಿಕಾಣಿ ಹೂಡಿದ್ದಾರೆ.
ಗುರುದತ್ತನಿಗೆ ಒಂದು ಕಾಲು
ಕೃತಕ.ಇಬ್ಬರೂ ಒಂದು ವಾರದಿಂದ ಇಲ್ಲಿಯೇ ವಾಸವಾಗಿದ್ದಾರೆ.ಸುತ್ತಮುತ್ತಲಿನ
ರಹವಾಸಿಗಳು ಊಟೋಪಚಾರ
ಒದಗಿಸುತ್ತಿದ್ದಾರೆ.ಮುಂಜಾನೆ ಸಿವ್ಹಿಲ್ ಆಸ್ಪತ್ರೆಗೆ ಹೋಗಿ ಸ್ನಾನ ಮಾಡಿ ಬರುತ್ತಾರೆ.ಈ ವೃದ್ಧೆಯ ಊರು ದಾಂಡೇಲಿ ಬಳಿಯ ಅಂಬಿಕಾನಗರ.ಮರಾಠಿಯಲ್ಲಿ ಮಾತ್ರ ಮಾತನಾಡುತ್ತಾರೆ.ನೋಡಲು ಸುಸಂಸ್ಕೃತ ಮನೆತನಕ್ಕೆ ಸೇರಿದವರಂತೆ ಕಾಣುತ್ತಾರೆ.
ಈ ವೃದ್ಧೆಯ ಪತಿ ತೀರಿಕೊಂಡಿದ್ದಾರೆ.ಪುತ್ರಗುರುದತ್ತ ಅಪಘಾತವೊಂದರಲ್ಲಿ ಬಲಗಾಲು
ಕಳೆದುಕೊಂಂಡಿದ್ದಾನೆ.ಕೃತಕ ಕಾಲು
ಹಾಕಲಾಗಿದೆ.ಈ ಇಬ್ಬರಿಗೂ ವಿಧವಾ ಮತ್ತು ಅಂಗವಿಕಲ ಮಾಸಾಶನ ಬರಲಿದೆಯಂತೆ.ಬಂದ ಕೂಡಲೇ ಇವರು
ಇಲ್ಲಿಂದ ತಮ್ಮೂರಿಗೆ ಮರಳಲಿದ್ದಾರೆ.ಇದು
ಅವರು ಹೇಳುತ್ತಿರುವ ಮಾತು.
ತಾಯಿ ಮಗನ ಜೊತೆಗೆ ನಾಲ್ಕೈದು
ಗಂಟುಗಳಿವೆ.ಅರಿವೆ ಅಂಚಡಿಗಳಿವೆ.
ಮನೆಬಿಟ್ಟು ಏಕೆ ಬಂದಿರೆಂಬುದಕ್ಕೆ
ಇವರ ಬಳಿ ಸರಿಯಾದ ಉತ್ತರವಿಲ್ಲ!
ನಾನೂ ಒಂದಿಷ್ಟು ಹಣ ಕೊಟ್ಟು
ನನ್ನ ಕ್ರಿಯಾ ಸಮಿತಿಯ ಕಾರ್ಡು
ಕೊಟ್ಟು ಬಂದೆ.
ಅಶೋಕ ಚಂದರಗಿ
ಬೆಳಗಾವಿ 9620114466