Breaking News
Home / Breaking News / ಬೆಳಗಾವಿಯಲ್ಲಿ ಅಧಿವೇಶನ್, ಪುಂಡಾಟಿಕೆ ನಡೆಸಲು ಎಂಈಎಸ್ ಗೆ ಪರ್ಮಿಶನ್…!!!!

ಬೆಳಗಾವಿಯಲ್ಲಿ ಅಧಿವೇಶನ್, ಪುಂಡಾಟಿಕೆ ನಡೆಸಲು ಎಂಈಎಸ್ ಗೆ ಪರ್ಮಿಶನ್…!!!!

ಬೆಳಗಾವ್ಯಾಗ ಸೋಮವಾರದಿಂದ ಜಾತ್ರೆ ಶುರು ಆಗತೈತಿ ನೋಡ ಗುರು….!!!

ಬೆಳಗಾವಿ- ಸೋಮವಾರದಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ.ರಾಜ್ಯ ಸರ್ಕಾರದ ಸಂಪೂರ್ಣ ವ್ಯೆವಸ್ಥೆಯೇ ಗಂಟು ಮೂಟೆ ಕಟ್ಟಿಕೊಂಡು ಬೆಳಗಾವಿಗೆ ಬರುತ್ತಿರುವ ಹಿನ್ನಲೆಯಲ್ಲಿ,ಹಾಳಾದ ರಸ್ತೆಗಳು ಸುಧಾರಿಸುತ್ತಿವೆ,ಗಲೀಜ್ ಆಗಿದ್ದ ರಸ್ತೆಯ ಡಿವೈಡರ್ ಗಳಿಗೆ ಸುಷ್ಣ ಬಣ್ಣ ಹಚ್ವುವದರ ಜೊತೆಗೆ ಕುಂದಾ ನಗರಿ ಸುಂದರಿಯ ರೂಪ ಕೊಡುವ ಕಾರ್ಯ ಭರದಿಂದ ಸಾಗಿದೆ.

ಇದೇ ಸೋಮವಾರ 13 ರಿಂದ 24 ರವರೆಗೆ ಸುವರ್ಣಸೌಧದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೆ ಕುಂದಾನಗರಿ ಬೆಳಗಾವಿ ಸಕಲ ರೀತಿಯಲ್ಲೂ ಸಜ್ಜುಗೊಂಡಿದೆ. ಇಡೀ ಸರಕಾರವೇ 10 ದಿನಗಳ ಕಾಲ ಬೆಳಗಾವಿಯಲ್ಲಿ ಠಿಕಾಣಿ ಹೂಡಲಿದೆ.ಇಂದು ಸಂಜೆಯಿಂದಲೇ ಮಂತ್ರಿಗಳು ಶಾಸಕರು ವಿಧಾನ ಪರಿಷತ್ತಿನ ಸದಸ್ಯರು ಬೆಳಗಾವಿಯತ್ತ ಮುಖ ಮಾಡಲಿದ್ದಾರೆ.

ಭರ್ಜರಿ ಸಿದ್ಧತೆ, ಸಾವಿರಾರು ಜನ ಸಿಬ್ಬಂದಿ, ಊಟ ವಸತಿ…

ಒಮೈಕ್ರಾನ್ ಆತಂಕದ ನಡುವೆಯೂ ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು ಜಿಲ್ಲಾಡಳಿತದ ವತಿಯಿಂದ ಸಕಲ ಸಿದ್ದತೆಯನ್ನು ಮಾಡಿಕೊಳ್ಳಲಾಗಿದೆ. ಬೆಳಗಾವಿ ಅಧಿವೇಶನದಲ್ಲಿ ಶಾಸಕರು ಪರಿಷತ್ ಸದಸ್ಯರು ಸೇರಿ 300 ಜನ ಭಾಗವಹಿಸಲಿದ್ದು, ಸಚಿವಾಲಯದ ಅಧಿಕಾರಿಗಳು ಸಿಬ್ಬಂದಿ ಸೇರಿದಂತೆ 3500 ಜನ ಭಾಗಿಯಾಗಲಿದ್ದಾರೆ.

ಎಲ್ಲರ ವಸತಿ ಸೌಕರ್ಯಕ್ಕಾಗಿ 72 ಹೋಟೆಲ್ ನಲ್ಲಿ‌ 2100 ರೂಂಗಳನ್ನ ಬುಕ್ ಮಾಡಲಾಗಿದೆ. ಇನ್ನೂ ಭದ್ರತೆಗಾಗಿ 15 ಎಸ್ಪಿ, 40 Dsp, 200 ಇನ್ಸ್ಪೆಕ್ಟರ್ ಸೇರಿದಂತೆ 4 ಸಾವಿರ ಪೋಲಿಸರನ್ನ ಭದ್ರತೆಗೆ ನಿಯೋಜಿಸಲಾಗಿದೆ. ಪೋಲಿಸರ ವಸತಿಗಾಗಿ ತಾರೀಹಾಳ-ಶಿಂದೊಳ್ಳಿ ರಸ್ತೆಯಲ್ಲಿ ಟೌನ್ ಶಿಪ್ ನಿರ್ಮಿಸಲಾಗಿದೆ. ಟೌನ್ ಶಿಪ್ ನಲ್ಲಿ ಊಟ, ವಸತಿ, ಶೌಚಗೃಹ, ಆಸ್ಪತ್ರೆ, ವಿದ್ಯುತ್, ಕಂಟ್ರೋಲ್ ರೂಂ ಸೇರಿದಂತೆ ಎಲ್ಲ ಸೌಲಭ್ಯ ಒದಗಿಸಿ 1800 ಜನರಿಗೆ ವ್ಯವಸ್ಥೆ ಮಾಡಲಾಗಿದೆ.

ಪ್ರತಿಭಟನೆ…..

ಇನ್ನೂ ಚಳಿಗಾಲದ ಅಧಿವೇಶನಕ್ಕೆ ಪ್ರತಿಭಟನೆ ಕಾವು ತಟ್ಟಲಿದೆ. ಪ್ರತಿಭಟನಾಕಾರರಿಗಾಗಿ ಬೆಳಗಾವಿ ಸುವರ್ಣಸೌಧದ ಹೊರ ಭಾಗದ ಸುವರ್ಣ ಗಾರ್ಡನ್,ಹಾಗೂ ಕೊಂಡುಸಕೊಪ್ಪದಲ್ಲಿ ಟೆಂಟ್ ನಿರ್ಮಾಣ ಮಾಡಲಾಗಿದೆ.

ಈವರೆಗೂ 75 ಕ್ಕೂ ಹೆಚ್ಚು ಸಂಘಟನೆಗಳು ಪ್ರತಿಭಟನಾ ಅನುಮತಿಗಾಗಿ ಅರ್ಜಿ ಸಲ್ಲಿಸಿವೆ.
ಕೋವಿಡ್ ನಿಯಮ ಪಾಲಿಸಿ ಪ್ರತಿಭಟನೆ ನಡೆಸಲು ಸೂಚಿಸಲಾಗಿದ್ದು, 500 ಕ್ಕೂ ಹೆಚ್ಚು ಜನರನ್ನ ಸೇರಿಸುವಂತಿಲ್ಲ, ಎರಡು ಡೋಸ್ ವ್ಯಾಕ್ಸಿನ್ ಪಡೆದಿರಬೇಕು.72 ಗಂಟೆಯೊಳಗಿನ ಆರ್.ಟಿ.ಪಿ.ಸಿ.ಆರ್ ವರದಿ ಕಡ್ಡಾಯ ಎಂಬ ಶರತ್ತು ವಿಧಿಸಲಾಗಿದೆ.

ಮತ್ತೆ ಎಂಈಎಸ್ ಪುಂಡಾಟಿಕೆ

ಬೆಳಗಾವಿಯ ಚಳಿಗಾಲದ ಅಧಿವೇಶನಕ್ಕೆ ವಿರುದ್ದವಾಗಿ ಮಹಾಮೇಳಾವ ನಡೆಸಿಕೊಂಡು ಬಂದಿರುವ ಎಂ.ಇ.ಎಸ್ ಪುಂಡರು ಈ ಭಾರಿಯೂ ಅಧಿವೇಶನದ ಮೊದಲ ಮಹಾಮೇಳಾವ ನಡೆಸಲು ಸಿದ್ದತೆ ನಡೆಸಿದ್ದಾರೆ.
ಕರ್ನಾಟಕ ಸರ್ಕಾರದ ವಿರುದ್ಧವೇ ಸೆಡ್ಡುಹೊಡೆಯಲು ಎಂಇಎಸ್ ಪುಂಡರು ಮಹಾಮೇಳಾವ ಆಯೋಜನೆ ಮಾಡಿದ್ದು
ನಗರದ ವ್ಯಾಕ್ಸಿನ್ ಡಿಪೋ ಬಳಿಯ ಮೈದಾನದಲ್ಲಿ ಮೇಳಾವ ನಡೆಸಲು ಸಿದ್ಧತೆ ನಡೆಸುವ ಮೂಲಕ ಉಂಡ ಮನೆಗೆ ಕನ್ನ ಹಾಕಿದ್ದಾರೆ.
ಬೆಳಗಾವಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಇದುವರೆಗೂ ಅನುಮತಿ ನೀಡಿಲ್ಲ. ಆದ್ರು ಮಹಾಮೇಳಾವ ವೇದಿಕೆ ನಿರ್ಮಿಸಲು ನಾಡದ್ರೋಹಿಗಳು ಭೂಮಿ ಪೂಜೆ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ನಲ್ಲಿ 2004 ರಿಂದ ಗಡಿ ವಿವಾದ ಪ್ರಕರಣವಿದ್ದು, ಕರ್ನಾಟಕ ಸರ್ಕಾರ ಗಡಿ ಭಾಗದ ಮರಾಠಿಗರ ಮೇಲೆ ದಬ್ಬಾಳಿಕೆ ಮಾಡುತ್ತಿದೆ. 2007 ರಿಂದಲೂ ನಾವು ಬೆಳಗಾವಿ ಅಧಿವೇಶನ ವಿರೋಧಿಸುತ್ತ ಬಂದಿದ್ದೇವೆ. ಈಗಲೂ ಬೆಳಗಾವಿ ಅಧಿವೇಶನ ವಿರೋಧಿಸಿ ಮಹಾಮೇಳಾವ ಮಾಡ್ತಿವಿ
ಈ ಮಹಾಮೇಳಾವಗೆ ಮಹಾರಾಷ್ಟ್ರ ದಿಂದ ದಿಗ್ಗಜ ನಾಯಕರಿಗೆ ಆಹ್ವಾನ ಕೊಡ್ತಿವಿ,
ಮಹಾಮೇಳಾವಗೆ ಅನುಮತಿ ಕೊಟ್ಟರು,ಕೊಡದಿದ್ದರೂ ಮೇಳಾವ ಮಾಡ್ತಿವಿ ಎಂದು ಎಂಇಎಸ್ ಪುಂಡ ದೀಪಕ ದಳವಿ ಸರ್ಕಾರಕ್ಕೆ ಧಮಕಿ ಹಾಕಿದ್ದಾನೆ.

ಸರ್ಕಾರ ಪ್ರತಿಸಲವೂ ಮೇಳಾವ್ ನಡೆಸಲು ಅನುಮತಿ ಕೊಡೋದಿಲ್ಲ ಅಂತಾ ಹೇಳಿ ಕೊನೆ ಘಳಿಗೆಯಲ್ಲಿ ಪರ್ಮಿಶನ್ ಕೊಡುತ್ತಲೇ ಬಂದಿದೆ ಅದಕ್ಕಾಗಿಯೇ ಎಂಈಎಸ್ ಪುಂಡರು ಅನುಮತಿ ಇಲ್ಲದೇ ಮೇಳಾವ್ ಮಾಡಲು ತಯಾರಿ ಮಾಡಿಕೊಂಡಿದ್ದಾರೆ.

ಒಟ್ಟಿನಲ್ಲಿ 10 ದಿನಗಳ ಕಾಲ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದ ಕಿವಿ ಹಿಂಡಲು ವಿಪಕ್ಷಗಳು ರೆಡಿಯಾಗಿದ್ದು, ಮತ್ತೊಂದೆಡೆ ಪ್ರತಿಭಟನೆ ಬಿಸಿ ಕೂಡ ಸರ್ಕಾರಕ್ಕೆ ತಟ್ಟಲಿದೆ.

Check Also

ದ ಮೇಕರ್ ಆಫ್ ನ್ಯೂ ಇಂಡಿಯಾ ಪುಸ್ತಕ ರೆಡಿ ಮಾಡಿದವರು ಯಾರು ಗೊತ್ತಾ..??

ಪ್ರಾಮಿಸ್ಡ್ ನೇಷನ್’ ಪ್ರಧಾನಿಗೆ ಅರ್ಪಣೆ * ಹುಬ್ಬಳ್ಳಿಯ ‘ಸೆನ್ಸ್ ಎಸೆನ್ಸ್’ ಸಂಸ್ಥೆಯಿಂದ ಅಂಧರಿಗಾಗಿ ಸಿದ್ಧಪಡಿಸಿದ ಪುಸ್ತಕ ಬೆಂಗಳೂರು ದೇಶದ ಏಳು …

Leave a Reply

Your email address will not be published. Required fields are marked *