ಬೆಳಗಾವಿ-ಬೆಳಗಾವಿ ಅಧಿವೇಶನ ವೇಳೆ ಎಂಇಎಸ್ ಪುಂಡಾಟ ಪ್ರಕರಣಕ್ಕೆ ಸಧಿಸಿದಂತೆ ದೇಶದ್ರೋಹ ಪ್ರಕರಣದಲ್ಲಿ ಎಂಇಎಸ್ ಪುಂಡರಿಗೆ, ಜಾಮೀನು ಮಂಜೂರಾದರೂ ಎಂಇಎಸ್ ಪುಂಡರಿಗಿಲ್ಲ ಬಿಡುಗಡೆ ಭಾಗ್ಯ
ಬೆಳಗಾವಿಯ ಖಡೇಬಜಾರ್ ಠಾಣೆಯಲ್ಲಿ ದಾಖಲಾಗಿದ್ದ ದೇಶದ್ರೋಹ ಪ್ರಕರಣದಲ್ಲಿ ಮಾತ್ರ ಜಾಮೀನು ಸಿಕ್ಕಿದ್ದು ಬೆಳಗಾವಿ ಜಿಲ್ಲಾ 8ನೇ ಸತ್ರ ನ್ಯಾಯಾಲಯದಿಂದ ಜಾಮೀನು ಮಂಜೂರಾಗಿದೆ. ಆದರೂ ಬಂಧಿತ 38 ಎಂಇಎಸ್ ಪುಂಡರಿಗೆ ಜಾಮೀನು ಸಿಕ್ಕರೂ ಬಿಡುಗಡೆ ಭಾಗ್ಯ ಇಲ್ಲ.
ಯಾಕಂದ್ರೆ, ಮಾರ್ಕೆಟ್, ಕ್ಯಾಂಪ್ ಪೊಲೀಸ್ ಠಾಣೆಯಲ್ಲಿಯೂ ಪ್ರಕರಣ ದಾಖಲು ಹಿನ್ನೆಲೆಯಲ್ಲಿ ಇನ್ನು ಎರಡು ಠಾಣೆಗಳಲ್ಲಿ ದಾಖಲಾದ ಪ್ರಕರಣಗಳಿಗೆ ಜಾಮೀನು ಸಿಕ್ಕಿಲ್ಲ, ಬೆಳಗಾವಿಯ ಮಾರ್ಕೆಟ್ ಠಾಣೆಯಲ್ಲಿ ದಾಖಲಾದ ದೇಶದ್ರೋಹ ಕೇಸ್‌ನಲ್ಲಿ ಇಬ್ಬರಿಗೆ ಮಾತ್ರ ಜಾಮೀನು ಸಿಕ್ಕಿದೆ. ಧಾರವಾಡ ಹೈಕೋರ್ಟ್ ಪೀಠದಲ್ಲಿ ಜಾಮೀನು ಮಂಜೂರಾಗಿದೆ.
ಎಂಇಎಸ್ ಯುವ ಘಟಕದ ಅಧ್ಯಕ್ಷ ಶುಭಂ ಶೆಳಕೆ, ಉಪಾಧ್ಯಕ್ಷ ಅಂಕುಶ್ ಕೇಸರಕರ್‌ಗೆ ಜಾಮೀನು ಸಿಕ್ಕಿದೆ. ಇನ್ನುಳಿದ 36 ಆರೋಪಿಗಳ ಜಾಮೀನು ಅರ್ಜಿ ಸೋಮವಾರದಂದು ವಿಚಾರಣೆಗೆ ಬರಲಿದೆ.ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದ್ದ ವೇಳೆ ಪುಂಡಾಟ ಮೆರೆದಿದ್ದ ಎಂಇಎಸ್ ಪುಂಡರು,ಬೆಂಗಳೂರಲ್ಲೆ ಶಿವಾಜಿ ಪ್ರತಿಮೆಗೆ ಅಪಮಾನ ಖಂಡಿಸಿ ಪ್ರತಿಭಟನೆ ನಡೆಸಿದ್ದರು. ಡಿಸೆಂಬರ್ 17ರ ರಾತ್ರಿ ಬೆಳಗಾವಿಯಲ್ಲಿ ಪ್ರತಿಭಟನೆ ಬಳಿಕ ಕಲ್ಲು ತೂರಾಟ ನಡೆದಿತ್ತು, ಸರ್ಕಾರಿ ವಾಹನಗಳನ್ನೇ ಟಾರ್ಗೆಟ್ ಮಾಡಿ ಕಲ್ಲೆಸೆಯಲಾಗಿತ್ತು.
ಈ ಕುರಿತು ಬೆಳಗಾವಿಯ ಮೂರು ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಮಾರ್ಕೆಟ್, ಕ್ಯಾಂಪ್, ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧ 38 ಪುಂಡರನ್ನು ಬಂಧಿಸಿದ್ದ ಬೆಳಗಾವಿ ಪೊಲೀಸರು,ಎಂಇಎಸ್ ಯುವ ಘಟಕದ ಅಧ್ಯಕ್ಷ ಶುಭಂ ಶೆಳಕೆ, ಶ್ರೀರಾಮಸೇನೆ ಹಿಂದೂಸ್ತಾನ್ ಸಂಘಟನೆ ಅಧ್ಯಕ್ಷ ರಮಾಕಾಂತ ಕೊಂಡುಸ್ಕರ್ ಸೇರಿ 38 ಜನರ ಬಂಧಿಸಿದ್ದರು.
ದಿಂಡಿ ಯಾತ್ರೆ ರದ್ದು…
ಮಹಾರಾಷ್ಟ್ರ ಶಿವಸೇನೆ ಪುಂಡರು ಇಂದು ಹಮ್ಮಿಕೊಂಡಿದ್ದ ದಿಂಡಿ ಯಾತ್ರೆ ರದ್ದಾಗಿದೆ. ದಿಂಡಿಯಾತ್ರೆ ಮಾಡಲು ಶಿವಸೇನೆ ಕೊಲ್ಹಾಪೂರದಲ್ಲಿ ಹಾಕಲಾಗಿದ್ದ ವೇದಿಕೆಯನ್ನೇ ಕಿತ್ತೆಸೆದು ಯಾತ್ರೆಗೆ ಬ್ರೇಕ್ ಹಾಕಿದ್ದಾರೆ.
ಮಹಾರಾಷ್ಟ್ರದ ಕೊಲ್ಲಾಪುರದಿಂದ ಬೆಳಗಾವಿವರೆಗೆ ಶಿವಸೇನೆ ಹಮ್ಮಿಕೊಂಡಿದ್ದ ದಿಂಡಿಯಾತ್ರೆ ರದ್ದಾಗಿದೆ.
ಎಂಇಎಸ್ ಪುಂಡರ ವಿರುದ್ಧ ದೇಶದ್ರೋಹ ಕೇಸ್ ವಾಪಸ್‌ಗೆ ಆಗ್ರಹಿಸಿ ಹಮ್ಮಿಕೊಂಡಿದ್ದ ದಿಂಡಿಯಾತ್ರೆ ಶುರುವಾಗುವ ಮೊದಲೇ ಮೂಲೆಗುಂಪಾಗಿದೆ.
ಎಂಇಎಸ್ ಪುಂಡರ ವಿರುದ್ಧ ದಾಖಲಾದ ದೇಶದ್ರೋಹ ಪ್ರಕರಣದಲ್ಲಿ ಜಾಮೀನು ಸಿಕ್ಕಿರುವ ಹಿನ್ನೆಲೆಯಲ್ಲಿ ಶಿವಸೇನೆ, ಇಂದಿನ ಪ್ರತಿಭಟನೆ ರದ್ದುಗೊಳಿಸಿದೆ.ಶಿವಸೇನೆ ಪ್ರತಿಭಟನೆ ನಿರ್ಧಾರದಿಂದ ಕರ್ನಾಟಕ ಸರ್ಕಾರ ಮೆತ್ತಗಾಯ್ತು ಅಂತಾ ಸಾಮಾಜಿಕ ಜಾಲತಾಣಗಳಲ್ಲಿ ಶಿವಸೇನೆ ಪೋಸ್ಟ್ ಮಾಡುತ್ತಿದೆ.
ಕರ್ನಾಟಕ ಸರ್ಕಾರ ಮೆತ್ತಗಾಗಿ ಶಿವಸೇನೆ ಹೋರಾಟಕ್ಕೆ ಬೆದರಿ,ಎಂಈಎಸ್ ನಾಯಕರಿಗೆ ಜಾಮೀನು ನೀಡಿದೆ ಅಂತಾ ಪೋಸ್ಟ್ ಮಾಡುವ ಮೂಲಕ ಶಿವಸೇನೆ ಮತ್ತೆ ಕಿತಾಪತಿ ಮಾಡುತ್ತಿದೆ.