ಅಥಣಿಯ ಜೈನ ಸಮಿತಿ ವತಿಯಿಂದ ಗೊಮಟೇಶ್ವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಅಯೂಬ್ ಖಾನ್ ವಿರುದ್ಧ ದೂರು ದಾಖಲಿಸಲು ಮನವಿ
ಅಥಣಿ-
ಜೈನ ಧರ್ಮ ಹಾಗೂ ಗೊಮಟೇಶ್ವರ ಮೂರ್ತಿಯ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟ ಆಯೂಬ್ ಖಾನ್ ಇತನ ಮೇಲೆ ಕಾನೂನು ಕ್ರಮ ಜರುಗಿಸುವ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಹಾಗೂ ಮುಖ್ಯಮಂತ್ರಿಗಳಿಗೆ ತಹಶೀಲ್ದಾರ ಮೂಲಕ ಕಾನೂನು ಕ್ರಮ ಕೈಗೊಳ್ಳುವಂತೆ ಅಥಣಿಯ 1008 ಆದಿನಾಥ ದಿಗಂಬರ ಜೈನ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.
ನ್ಯೂ ಕಾಂಗ್ರೇಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಅಯೂಬ್ ಖಾನ್ ಎಂಬ ವ್ಯಕ್ತಿಯು ಜೈನ ಧರ್ಮ ಹಾಗೂ ಜೈನ ಧರ್ಮದ ಆರಾಧ್ಯ ದೇವರ ಬಗ್ಗೆ ದಿನಾಂಕ 08/02/2022 ರಂದು ಖಾಸಗಿ ಸುದ್ದಿವಾಹಿನಿಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದು, ಇದು ಜೈನ ಧರ್ಮದ ನಿಂದನೆ ಹಾಗೂ ಸಮಾಜದಲ್ಲಿ ಸಾಮರಸ್ಯ ಕದಡುವ ಉದ್ಧೇಶವಾಗಿರುತ್ತದೆ. ಹಾಗೂ ವಿಶ್ವದ ಅದ್ಭುತಗಳಲ್ಲೊಂದಾದ ಶ್ರವಣಬೆಳಗುಳದ ಏಕ ಶಿಲಾಮೂರ್ತಿ ಭಗವಾನ ಬಾಹುಬಲಿ ಸ್ವಾಮಿಯ ಬಗ್ಗೆ ನಿಂದಾನಾತ್ಮಕ ಹೇಳಿಕೆ ನೀಡಿರುವುದು ಖಂಡನೀಯ, ಒಂದು ಧರ್ಮದ ಭಾವನೆಗಳ ಹಾಗೂ ನಮ್ಮ ದೇಶದ ಕಳಸವಾಗಿರುವ ಗೊಮ್ಮಟೇಶನಿಗೆ ಬಟ್ಟೆ ಧರಿಸುವ ಬಗ್ಗೆ ಹೇಳಿಕೆ ನೀಡಿರುವುದು. ಜೈನ ಧರ್ಮಿಯರ ಭಾವನೆಗಳಿಗೆ ಧಕ್ಕೆ ತಂದಿರುತ್ತದೆ. ಭಗವಾನ ಬಾಹುಬಲಿ ಸ್ವಾಮಿಯ ಕುರಿತು ಮೈಸೂರಿನ ಅಯೂಬ್ ಖಾನ್ ಎಂಬ ವ್ಯಕ್ತಿ ಅವಹೇಳನಕಾರಿಯಾಗಿ ಮಾತನಾಡಿರುವ ಇತನ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ ಸಮಾಜ ಭಾಂದವರಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ಮನವಿಯನ್ನು ಸಲ್ಲಿಸಿರುತ್ತಾರೆ. ಈ ಸಂದರ್ಭದಲ್ಲಿ 1008 ಆದಿನಾಥ ದಿಗಂಬರ ಜೈನ ಸಮಿತಿ ಅಥಣಿಯ ಅಧ್ಯಕ್ಷರಾದ ಚಂದ್ರಕಾಂತ ಗೊಂಗಡಿ, ಅರುಣ ಯಲಗುದ್ರಿ, ಶ್ರೀಕಾಂತ ಅಸ್ಕಿ, ವಿಜಯ ಕರೋಳಿ, ಅಮರ ದುಗ೯ಣ್ಣವರ, ವೈಭವ ಪಡಾನಾಡ, ಅಶೋಕ ಪಡಾನಾಡ, ಅಶೋಕ್ ದಾನಗೌಡ್, ಬಾಹುಬಲಿ ಕಡೋಲಿ, ಕೆಎ ವನಜೋಳ, ಮಿಲಿಂದ್ ಪಾಟೀಲ, ಎಸಿ ಪಾಟೀಲ್, ಆರ್ ಬಿ ಪಾಟೀಲ, ರಾಜು ಕರ್ಪೂರ ಶೆಟ್ಟಿ, ವಿದ್ಯಾಧರ ಡುಮ್ಮನವರ್, ಆರ್ ಡಿ ಪಾಟೀಲ, ಮಹಾವೀರ ನಂದೇಶ್ವರ್, ಸಂಜಯ ನಾಡಗೌಡ, ದುಂಡಪ್ಪ ಅಸ್ಕಿ, ನೇಮಿನಾಥ ನಂದಗಾಂವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.