ಬೆಳಗಾವಿ- ಬೆಳಗಾವಿ ಮಹಾನಗರದ ಕ್ಲಬ್ ರಸ್ತೆಯಲ್ಲಿರುವ ತೋಟಗಾರಿಕೆ ಇಲಾಖೆಯ ಹ್ಯುಮ್ ಪಾರ್ಕ್ ನಲ್ಲಿ ಮಾವುಗಳ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯುತ್ತಿದೆ.ಈ ಮ್ಯಾಂಗೋ ಮೇಳದಲ್ಲಿ ಬಗೆ,ಬಗೆಯ ಮಾವುಗಳು ಮಾರಾಟಕ್ಕೆ ಬಂದಿದ್ದು,ಈಬಾರಿ ಸ್ವರ್ಣಲೇಖಾ ಎಂಬ ಶುಗರ್ ಪ್ರೀ ಮಾವಿನಹಣ್ಣು ಕೂಡಾ ಬಂದಿರುವದು ವಿಶೇಷ.
ಮೇ 26 ರಿಂದ ನಡೆಯುತ್ತಿರುವ ಮ್ಯಾಂಗೋ ಮೇಳ ನಾಳೆ ಭಾನುವಾರ ರಾತ್ರಿಯವರೆಗೂ ನಡೆಯಲಿದ್ದು ಇಲ್ಲಿ ರತ್ನಾಗಿರಿ ಆಫುಸು,ಪೈರಿ,ಧಾರವಾಡ ಆಫುಸು,ಪೈರಿ,ಮಲಗೋಬಾ,ಸೇರಿದಂತೆ ಹತ್ತು ಹಲವು ತಳಿಯ ಮಾವುಗಳು ಇಲ್ಲಿ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತಿದೆ.ಪಕ್ಕದ ಮಹಾರಾಷ್ಟ್ರದ ವೆಂಗುರ್ಲಾದಿಂದ ಬಂದಿರುವ ಸ್ವರ್ಣಲೇಖಾ ಎಂಬ ಶುಗರ್ ಫ್ರೀ ಮಾವು ಎಲ್ಲರ ಗಮನ ಸೆಳೆಯುತ್ತಿದೆ ಈ ಮೇಳದಲ್ಲಿ ಸಿಗುವ ಎಲ್ಲ ಬಗೆಯ ಮಾವಿನ ಹಣ್ಣುಗಳು ಶುದ್ಧ ಆರ್ಗ್ಯಾನಿಕ್ ಎಂಬುದು ಈ ಮೇಳದ ವಿಶಿಷ್ಟವಾಗಿದೆ.
ಬೆಳಗಾವಿಯ ಮ್ಯಾಂಗೋ ಮೇಳದಲ್ಲಿ ವ್ಯಾಪಾರಿಗಳಿಗೆ ಸ್ಟಾಲ್ ಹಾಕಲು ಅವಕಾಶ ನೀಡಿಲ್ಲ,ರೈತರಿಗೆ ಮಾತ್ರ ಇಲ್ಲಿ ಸ್ಟಾಲ್ ಗಳನ್ನು ನೀಡಲಾಗಿದ್ದು.ಪಕ್ಕದ ಮಹಾರಾಷ್ಟ್ರದ ರತ್ನಾಗಿರಿಯ ರತ್ನಾ ಆಫುಸು ಭರ್ಜರಿಯಾಗಿ ಸೇಲ್ ಆಗ್ತಾ ಇದೆ.ಧಾರವಾಡದ ಆಫುಸು ಕಡಿಮೆ ಬೆಲೆಯಲ್ಲಿ ಸಿಗುತ್ತಿದೆ.
ಮಾರುಕಟ್ಟೆಯಲ್ಲಿ ಸಿಗುವ ಮಾವಿನಹಣ್ಣಿಗೆ ಕೆಮಿಕಲ್ ಸಿಂಪಡಿಸುತ್ತಾರೆ,ಇದು ಆರೋಗ್ಯಕ್ಕೆ ಹಾನಿಕರ,ರೈತರು ಬತ್ತದ ಹುಲ್ಲಿನಲ್ಲಿ ನೈಸರ್ಗಿಕವಾಗಿ ,ಹಣ್ಣು ಮಾಡಿದ ಮಾವುಗಳನ್ನು ಮಾತ್ರ ಬೆಳಗಾವಿಯ ಮಾವು ಮೇಳದಲ್ಲಿ ತರುತ್ತಿದ್ದಾರೆ ಹೀಗಾಗಿ ಸಾರ್ವಜನಿಕರು ಇಲ್ಲಿಯ ಮ್ಯಾಂಗೋ ಖರೀಧಿಸಲು ಮುಗಿಬಿದ್ದಿದ್ದಾರೆ.
ಬೆಳಗಾವಿಯ ಮಾವು ಮೇಳಕ್ಕೆ ಬೆಳಗಾವಿಯ ನಿವಾಸಿಗಳಿಂದ ಸಖತ್ ರಿಸ್ಪಾನ್ಸ್ ಸಿಗುತ್ತಿದೆ.ಪ್ರತಿ ದಿನ ಲಾರಿಗಟ್ಟಲೇ ಮಾವು ಇಲ್ಲಿ ಮಾರಾಟವಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆಯ ನಿರ್ದೇಶಕ ಮುರುಗೋಡ ಬೆಳಗಾವಿ ಸುದ್ದಿ ಡಾಟ್ ಕಾಮ್ ಗೆ ತಿಳಿಸಿದ್ದು,ಎಲ್ಲ ಮಾವಿನ ಹಣ್ಣಿನಲ್ಲಿ ಸಕ್ಕರೆ ಅಂಶ ಇದ್ದೇ ಇರುತ್ತದೆ.ಆದ್ರೆ ಸ್ವರ್ಣಲೇಖಾ ಎಂಬ ಮಾವಿನ ಹಣ್ಣು ಶುಗರ್ ಪ್ರೀ ಇರಲಿಕ್ಕೆ ಸಾಧ್ಯವಿಲ್ಲ,ಇದರಲ್ಲಿ ಸಕ್ಕರೆ ಅಂಶ ಕಡಿಮೆ ಇರಬಹುದು.ವೆಂಗುರ್ಲಾದಲ್ಲಿ ಮಾತ್ರ ಬೆಳೆಯುವ ಸ್ವರ್ಣಲೇಖಾ ಮಾವಿಗೆ ಮಹಾರಾಷ್ಟ್ರದಲ್ಲಿ ಶುಗರ್ ಪ್ರೀ ಮ್ಯಾಂಗೋ ಎಂದೇ ಕರೆಯುತ್ತಾರೆ ಎಂದು ಈ ಮಾವು ಮಾರಾಟ ಮಾಡುತ್ತಿರುವ ಅಜ್ಜಿ ತಿಳಿಸಿದ್ದಾರೆ.