Home / Breaking News / ಕರುನಾಡೇ… ಎಂಇಎಸ್ ಗುಂಡಾಗಿರಿ, ನೋಡೇ….!!!

ಕರುನಾಡೇ… ಎಂಇಎಸ್ ಗುಂಡಾಗಿರಿ, ನೋಡೇ….!!!

ಬೆಳಗಾವಿ-ಬೆಳಗಾವಿಯ ಮಡಿಲಲ್ಲಿ ಇರುವ ಪುಟ್ಟಗ್ರಾಮ ಧಾಮಣೆ. ಈ ಗ್ರಾಮದಲ್ಲಿ ಕನ್ನಡಿಗರ ಸಂಖ್ಯೆ ತೀರಾ ಕಡಿಮೆ ಇದ್ದರೂ ಸಹ,ಕನ್ನಡ ಅಭಿಮಾನಕ್ಕೆ ಇಲ್ಲಿ ಯಾವುದೇ ಕೊರತೆ ಇಲ್ಲ.ಆದರೂ ಬಹುಸಂಖ್ಯಾತ ಎಂಇಎಸ್ ಪುಂಡರ ಪುಂಡಾಟಿಕೆ ಇಲ್ಲಿ ನಿರಂತರವಾಗಿ ನಡೆಯುತ್ತಿದೆ.ಗ್ರಾಮಸ್ಥರು ಪುಂಡರ ಪುಂಡಾಟಿಕೆಯನ್ನು ಸಹಿಸುತ್ತಲೇ ಇದ್ದು ಜಿಲ್ಲಾಡಳಿತ ಮಾತ್ರ ಇಲ್ಲಿ ಮೂಕ ಪ್ರೇಕ್ಷಕ.

ಧಾಮಣೆ ಗ್ರಾಮದಲ್ಲಿ ನಿನ್ನೆ ಕನ್ನಡದ ಹುಡುಗ ಸಿದ್ದು ಸೈಬನ್ನವರ ಮದುವೆ ನಡೆದಿತ್ತು.ಮದುವೆ ಮುಗಿದ ಬಳಿಕ ಕುಟುಂಬಸ್ಥರು, ಬಂಧು ಬಳಗದವರು ರವಿಚಂದ್ರನ್ ಅಭಿನಯದ ಮಲ್ಲ ಚಿತ್ರದ ಕರುನಾಡೇ…ಕೈ ಚಾಚಿದೇ ನೋಡೇ ಹಾಡು ಹಚ್ವಿ ಡ್ಯಾನ್ಸ್ ಮಾಡುತ್ತ ವಧು- ವರನ ಮೆರವಣಿಗೆ ಮಾಡುವ ಸಂಧರ್ಭದಲ್ಲಿ,ಮೆರವಣಿಗೆಯ ಮೇಲೆ ದಾಳಿ ಮಾಡಿದ ಎಂಇಎಸ್ ಪುಂಡರು, ವಧು- ಮತ್ತು ವರನನ್ನು ಕಾರಿನಿಂದ ಹೊರಗೆ ಎಳೆದು,ಇಟ್ಟಂಗಿ ಮತ್ತು ಬಡಿಗೆಯಿಂದ ವರನ ಮೇಲೆ ಹಲ್ಲೆ ಮಾಡಿದ್ದಾರೆ. ಎಂಇಎಸ್ ಪುಂಡಾಟಿಕೆಯಿಂದ ವರ ಹಾಗು ವರನ ಸಹೋದರ ಗಂಭೀರವಾಗಿ ಗಾಯಗೊಂಡಿದ್ದಾರೆ.ವಧುವಿನ ತಲೆಗೆ ಇಟ್ಟಂಗಿಯಿಂದ ಹಲ್ಲೆ ಮಾಡಿರುವ ಪುಂಡರು ಪುಂಡಾಟಿಕೆ ಪ್ರದರ್ಶಿಸಿದ್ದಾರೆ.

ಈ ಘಟನೆ ನಿನ್ನೆ ರಾತ್ರಿಯೇ ನಡೆದಿದೆ.ಸ್ಥಳಕ್ಕೆ ಧಾವಿಸಿದ ಪೋಲೀಸರು ರಾಜಿ,ಪಂಚಾಯತಿ ಮಾಡಿಸುವ ಪ್ರಯತ್ನ ಮಾಡಿದ್ದಾರೆ.ಪೋಲೀಸರ ಮೃದು ಧೋರಣೆಯ ವಿರುದ್ದ ಧಾಮಣೆ ಗ್ರಾಮದ ಕನ್ನಡದ ಕುಟುಂಬಗಳು ಇವತ್ತು ಬೆಳಗ್ಗೆ ಬೆಳಗಾವಿ ಮಹಾನಗರದಲ್ಲಿ ಎಂಇಎಸ್ ವಿರುದ್ಧ ಕನ್ನಡ ಸಂಘಟನೆಗಳು ಪ್ರತಿಭಟನೆ ನಡೆಸಿದ ಬಳಿಕ ಪೋಲೀಸ್ರು ಎಚ್ಚೆತ್ರುಕೊಂಡಿದ್ದಾರೆ.

ಧಾಮಣೆ ಗ್ರಾಮದಲ್ಲಿ ಈಗ ಬಿಗುವಿನ ವಾತಾವರಣ ಇದೆ,ಪರಿಸ್ಥಿತಿ ಬೂದಿ ಮುಚ್ವಿದ ಕೆಂಡದಂತಿದೆ.ಬಿಗಿ ಪೋಲೀಸ್ ಭದ್ರತೆ ಒದಗಿಸಲಾಗಿದೆ.ಎಂಇಎಸ್ ಪುಂಡರಿಂದ ಹಲ್ಲೆಗೊಳಗಾದ ಕನ್ನಡದ ಯುವಕರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಧಾಮಣೆ ಗ್ರಾಮದ ಕುರಬರಹಟ್ಟಿ ಬಡಾವಣೆಯಲ್ಲಿ ಕನ್ನಡದ ಯುವಕರು ರಾಣಿ ಚನ್ನಮ್ಮ ನಗರ ಎಂದು ಫಲಕ ಹಾಕಿದ್ದರು.ಇದಕ್ಕೆ ಪ್ರತಿಯಾಗಿ ಎಂಇಎಸ್ ಹುಡುಗರು ಸಂಬಾಜಿ ನಗರ ಎಂದು ಎರಡು ದಿನದ ಹಿಂದೆ ಫಲಕ ಹಾಕಿದ್ರು ಇದೆಲ್ಲಾ ಘಟನೆ ನಡೆದ ಬಳಿಕ ಇದೇ ಗ್ರಾಮದಲ್ಲಿ ನಿನ್ನೆ ರಾತ್ರಿ ಎಂಇಎಸ್ ಪುಂಡರು ಕನ್ನಡ ಹುಡುಗನ ಮದುವೆ ಮೆರವಣಿಗೆ ಮೇಲೆ ದಾಳಿ ಮಾಡಿದ್ದಾರೆ.

ಕನ್ನಡ ಸಂಘಟನೆಗಳ ಆಕ್ರೋಶ ಹೊರಬಂದ ಬಳಿಕ,ಬೆಳಗಾವಿ ಗ್ರಾಮೀಣ ಠಾಣೆಯ ಪೋಲೀಸ್ರು F.I.R ದಾಖಲು ಮಾಡಿದ್ದಾರೆ.ನಿನ್ನೆ ರಾತ್ರಿ ನಡೆದ ಘಟನೆಗೆ ಸಮಂಧಿಸಿದಂತೆ ಹತ್ತು ಜನ ಎಂಇಎಸ್ ಪುಂಡರನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ.

ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಡಿ,ಮಹಾದೇವ ತಳವಾರ,ಗಣೇಶ್ ರೋಕಡೆ ಅವರು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಗೆ ಧೈರ್ಯ ತುಂಬಿದ್ದಾರೆ‌. ನಾವು ನಿಮ್ಮ ಜೊತೆಗಿದ್ದೇವೆ ಎಂದು ಬೆಳಗಾವಿಯ ಕನ್ನಡ ಸಂಘಟನೆಗಳು ಸಂದೇಶ ನೀಡಿವೆ.

Check Also

ಆಮೀಷಗಳಿಗೆ ಬಲಿಯಾಗಬೇಡಿ, -ಬಾಲಚಂದ್ರ ಜಾರಕಿಹೊಳಿ

ಮೂಡಲಗಿ- ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರ ಪರ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮತಬೇಟೆ ಮುಂದುವರೆಸಿದ್ದಾರೆ‌ …

Leave a Reply

Your email address will not be published. Required fields are marked *