ಬೆಳಗಾವಿ- ಭ್ರೂಣ ಹತ್ಯೆ ತಡೆಯಲು ಕೇಂದ್ರ,ಹಾಗೂ ರಾಜ್ಯ ಸರ್ಕಾರಗಳು ಕಠಿಣ ಕಾನೂನು ಜಾರಿಗೆ ತಂದರೂ,ಭ್ರೂಣ ಹತ್ಯೆಗಳು ನಿಲ್ಲುತ್ತಿಲ್ಲ.ಹಣ ಗಳಿಸುವದಕ್ಕಾಗಿ ಪಾಪಿಗಳು ನಿರಂತರವಾಗಿ ಭ್ರೂಣ ಹತ್ಯೆ ಮಾಡುತ್ತಲೇ ಇದ್ದು ಈ ಧಂದೆ ನಿಲ್ಲುತ್ತಿಲ್ಲ ಎನ್ನುವದಕ್ಕೆ ಮೂಡಲಗಿಯ ಘಟನೆಯೇ ಸಾಕ್ಷಿಯಾಗಿದೆ.
ಬೆಳಗಾವಿ ಜಿಲ್ಲೆಯ ಮೂಡಲಗಿ ಬಸ್ ನಿಲ್ದಾಣದ ಬಳಿ ಹರಿದ ಹಳ್ಳದಲ್ಲಿ ಹತ್ಯೆ ಮಾಡಲಾದ ಏಳು ಭ್ರೂಣಗಳು ಪತ್ತೆಯಾಗಿದ್ದು, ರಾಜ್ಯವನ್ನೇ ಬೆಚ್ಚಿಬೀಳಿಸಿದೆ.
ಎಲ್ಲ ಏಳೂ ಭ್ರೂಣಗಳನ್ನು ಪ್ಸಾಸ್ಟಿಕ್ ಡಬ್ಬಗಳಲ್ಲಿ ತುಂಬಿರುವ ಕಿರಾತಕರು, ಶುಕ್ರವಾರ ಮಧ್ಯಾಹ್ನ ಹಳ್ಳದಲ್ಲಿ ಕಂಡುಬಂದ ಈ ಪ್ಲಾಸ್ಟಿಕ್ ಡಬ್ಬಗಳನ್ನು ಜನರು ಕುತೂಹಲಕ್ಕೆ ಗಮನಿಸಿದ್ದಾರೆ. ನಂತರ ಸಮೀಪ ಹೋಗಿ ನೋಡಿದಾಗ ಮಗುವಿನ ಆಕಾರದ ಭ್ರೂಣಗಳನ್ನು ಹಾಕಿ ಮುಚ್ಚಳ ಮುಚ್ಚಿರುವ ವಿಷಯ ಗೊತ್ತಾಗಿದೆ. ವಿಷಯ ತಿಳಿದ ತಕ್ಷಣ ಪಟ್ಟಣದಲ್ಲಿ ಭ್ರೂಣಗಳನ್ನು ನೋಡಲು ಜನಸ್ತೋಮವೇ ಸೇರಿತ್ತು.
ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿದ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಭ್ರೂಣಗಳಿದ್ದ ಡಬ್ಬಗಳನ್ನು ವಶಕ್ಕೆ ಪಡೆದು ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಸಂರಕ್ಷಿಸಿ ಇಟ್ಟಿದ್ದಾರೆ. ಈ ಭ್ರೂಣಗಳಲ್ಲಿ ಕೆಲವು ಐದು ತಿಂಗಳು ತುಂಬಿವೆ. ಮತ್ತೆ ಕೆಲವು ಏಳು ತಿಂಗಳಾಗಿವೆ. ಮೂಡಲಗಿ ಠಾಣೆಯಲ್ಲಿ ಕೇಸ್ ದಾಖಲಿಸುವ ಪ್ರಕ್ರಿಯೆ ಮುಗಿಸಿದ ನಂತರ ಬೆಳಗಾವಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ತರಲಾಗುವುದು. ನಂತರ ಪೂರ್ಣ ವಿವರ ಗೊತ್ತಾಗಲಿದೆ’ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ ಕೋಣಿ ತಿಳಿಸಿದ್ದಾರೆ.