Breaking News
Home / Breaking News / ನಾಯಿ ಬರ್ತಡೇ,ಕ್ವಿಂಟಲ್ ಕೇಕ್,3ಕ್ವಿಂಟಲ್ ಚಿಕನ್, 1ಕ್ವಿಂಟಲ್ ಮೊಟ್ಟೆ…!!

ನಾಯಿ ಬರ್ತಡೇ,ಕ್ವಿಂಟಲ್ ಕೇಕ್,3ಕ್ವಿಂಟಲ್ ಚಿಕನ್, 1ಕ್ವಿಂಟಲ್ ಮೊಟ್ಟೆ…!!

ಬೆಳಗಾವಿ- ನಾವು ನಮ್ಮ ಮಕ್ಕಳ ಬರ್ತಡೇ ಆಚರಿಸಲು ಅರ್ದ ಕೆ.ಜಿ ಕೇಕ್ ತರಿಸಬೇಕೋ ಅಥವಾ ಒಂದು ಕೆ.ಜಿ ಕೇಕ್ ಬೇಕೋ ಅಂತಾ ವಿಚಾರ ಮಾಡ್ತೀವಿ,ಆದ್ರೆ ಬೆಳಗಾವಿ ಜಿಲ್ಲೆಯಲ್ಲಿ ಒಬ್ಬ ತನ್ನ ಸಾಕು ನಾಯಿ ಬರ್ತಡೇಗೆ ಕ್ವಿಂಟಲ್ ಕೇಕ್,ಕಟ್ ಮಾಡಿ,ಬರ್ತಡೇ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜನರಿಗೆ 3ಕ್ವಿಂಟಲ್ ಚಿಕನ್, 1ಕ್ವಿಂಟಲ್ ಮೊಟ್ಟೆ, ಸಸ್ಯಹಾರಿಗಳಿಗೆ 50ಕೆಜಿ ಕಾಜುಕರಿ ಮಾಡಿಸಿ ಬಾಡೂಟ ಹಾಕಿಸಿ,ಎಲ್ಲರ ಗಮನ ಸೆಳೆದಿದ್ದಾನೆ.

ತನ್ನ ನೆಚ್ಚಿನ ಸಾಕು ನಾಯಿ ‘ಕ್ರಿಶ್’ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿದ ಈ ಘಟನೆ ನಡೆದಿದ್ದು
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ತುಕ್ಕಾನಟ್ಟಿಯಲ್ಲಿ.

ಈ ಅಪರೂಪದ ನಾಯಿ ಹುಟ್ಟು ಹಬ್ಬಕ್ಕೆ ಶಿವಪ್ಪ ಮರ್ದಿಎಂಬುವವರಿಂದ ಗ್ರಾಮದ ಜನರಿಗೆ ಭರ್ಜರಿ ಬಾಡೂಟದ ವ್ಯವಸ್ಥೆ ಮಾಡಲಾಗಿತ್ತು.ಒಂದು ಕ್ವಿಂಟಲ್ ಕೇಕ್ ಕಟ್ ಮಾಡಿ,ಶುಭಾಶಯ ಕೋರುವ ಮೂಲಕ ಅಚ್ಚರಿ ಮೂಡಿಸಿದ್ದಾನೆ.

ಕ್ವಿಂಟಲ್ ಕೇಕ್ ಕಟ್ ಮಾಡಿದ ಬಳಿಕ,ನೆಚ್ಚಿನ ನಾಯಿಯ ಗ್ರಾಮದಲ್ಲಿ ವಾದ್ಯಗಳ ಮೂಲಕ ಅದ್ದೂರಿ ಮೆರವಣಿಗೆ ಮಾಡಿದ್ದಾನೆ.5ಸಾವಿರ ಜನರು ಈ ಬರ್ತಡೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಅವರಿಗಾಗಿ 3ಕ್ವಿಂಟಲ್ ಚಿಕನ್, 1ಕ್ವಿಂಟಲ್ ಮೊಟ್ಟೆ, ಸಸ್ಯಹಾರಿಗಳಿಗೆ 50ಕೆಜಿ ಕಾಜುಕರಿ ತಯಾರಿಸಿ, ಊಟದ ವ್ಯವಸ್ಥೆ ಮಾಡಿ ಹೌದ್ದೋ ಹುಲಿಯಾ ಎನಿಸಿಕೊಂಡಿದ್ದಾನೆ.

ನಾಯಿ ಹುಟ್ಟು ಹಬ್ಬಕ್ಕೆ ಅಕ್ಕ ಪಕ್ಕದ ಜನರು ಆಗಮಿಸಿ ಶುಭಾಶಯ ಕೋರಿದರು‌ ನಾಯಿ ಮಾಲೀಕ ಶಿವಪ್ಪ ಕಳೆದ 20ವರ್ಷಗಳಿಂದಸ್ಥಳೀಯಗ್ರಾ.ಪಂ.ಸದಸ್ಯರಾಗಿದ್ದಾರೆ.ನೂತನ ಸದಸ್ಯರೊಬ್ಬರು ತಮ್ಮ ಹುಟ್ಟು ಹಬ್ಬ ಸಂದರ್ಭದಲ್ಲಿ ಹಳೆ ಸದಸ್ಯರ ಬಗ್ಗೆ ಅವಹೇಳನ ಮಾಡಿದ್ದ.ಹಿಂದಿನ ಸದಸ್ಯರು ನಾಯಿಯಂತೆ ತಿಂದು ಹೋಗಿದ್ದಾರೆಂದು ಅವಮಾನ ಮಾಡಿದ್ದ. ಅವರಿಗೆ ಪ್ರತ್ಯುತ್ತರ ಕೊಡಲು ನಿಯತ್ತಿನ ನಾಯಿ ಹುಟ್ಟು ಹಬ್ಬ ಅದ್ದೂರಿಯಾಗಿ ಆಚರಣೆ ಮಾಡಿದ್ದಾನೆ ಎಂದು ಹೇಳಲಾಗಿದೆ.

Check Also

ಸಂಜಯ ಪಾಟೀಲ ವಿರುದ್ಧ ದೂರು ದಾಖಲು…

ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ; ಸಂಜಯ್ ಪಾಟೀಲ್ ವಿರುದ್ಧ ಪ್ರಕರಣ ದಾಖಲು ಬೆಳಗಾವಿ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ …

Leave a Reply

Your email address will not be published. Required fields are marked *