ಬೆಳಗಾವಿ-ಖಾನಾಪೂರ ತಾಲ್ಲೂಕಿನ ಜಾಂಬೋಟಿ ಬಳಿಯ ಚಿಕಲೆ ಫಾಲ್ಸ್ ನಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಪ್ರವಾಸಿಗರಿಂದ ತಲಾ 295 ರೂ ಪ್ರವೇಶ ಶುಲ್ಕ ವಸೂಲಿ ಮಾಡುವ ಯೋಜನೆಗೆ ಬ್ರೇಕ್ ಬಿದ್ದಿದೆ.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮಾದ್ಯಮ ಮಿತ್ರರ ಜೊತೆ ಮಾತನಾಡಿದ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ,ಅರಣ್ಯ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ಮಾಡಿ,ಚಿಕಲೆ ಫಾಲ್ಸ್ ನಲ್ಲಿ ಪ್ರವಾಸಿರಿಂದ ಪ್ರವೇಶ ಶುಲ್ಕ ವಸೂಲಿ ಮಾಡಬಾರದು ಎಂದು ಸೂಚಿಸಲಾಗಿದ್ದು.ಶುಲ್ಕ ವಸೂಲಿಯ ಕಾರ್ಯ ನಿನ್ನೆ ಸೋಮವಾರದಿಂದ ಸ್ಥಗಿತಗೊಳಿಸಲಾಗಿದೆ,ಎಂದು ಹೇಳಿದ್ರು.
ಪ್ರಸಿದ್ದ ಚಿಕಲೆ ಫಾಲ್ಸ್ ನೋಡಲು ಹೆಚ್ವಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರ್ತಾರೆ, ಪ್ರವಾಸಿಗರಿಗೆ ಅನುಕೂಲವಾಗುವಂತೆ ಅನೇಕ ಸವಲತ್ತುಗಳನ್ನು ಒದಗಿಸುವ ಚಿಂತನೆ ಇದೆ,ಎಂದು ಬೆಳಗಾವಿ ಜಿಲ್ಲಾಧಿಕಾರಿಗಳು ಹೇಳಿದರು.