ಬೆಳಗಾವಿಕಳೆದ ಮೂರು ದಿನಗಳಿಂದ ಬೆಳಗಾವಿಯಲ್ಲಿ ಚಿರತೆಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಚಿರತೆ ಪ್ರತ್ಯಕ್ಷವಾದ ಮಾಹಿತಿ ದೊರೆತ ಕಾರಣ,ಅರಣ್ಯ ಇಲಾಖೆ ಸಿಬ್ಬಂದಿಯಿಂದ ಶೋಧ ಕಾರ್ಯಾಚರಣೆ ಮುಂದುವರೆದಿದೆ.
ಕಳೆದ ಎರಡು ದಿನಗಳ ಹಿಂದೆ ಜಾಧವ ನಗರದಲ್ಲಿ ಪ್ರತ್ಯಕ್ಷವಾಗಿದ್ದ ಚಿರತೆ ನಾಪತ್ತೆಯಾಗಿದೆ.ಕಟ್ಟಡ ಕಾರ್ಮಿಕ ಸಿದರಾಯಿ ಎಂಬುವರ ಮೇಲೆ ದಾಳಿ ಮಾಡಿದ್ದ ಚಿರತೆ ಕಾಣದಂತೆ ಮಾಯವಾಗಿದೆ.ಜಾಧವ್ ನಗರದಲ್ಲಿ ಚಿರತೆ ಪ್ರತ್ಯಕ್ಷವಾದ ಸ್ಥಳದಿಂದ ಒಂದು ಕಿಲೋಮೀಟರ್ ಅಂತರದಲ್ಲಿರುವ ಗಾಲ್ಫ್ ಮೈದಾನವಿದ್ದು ಈ ಮೈದಾನದಲ್ಲಿ ಚಿರತೆ ಕಾಣಿಸಿಕೊಂಡಿದೆ ಎನ್ನುವ ಮಾಹಿತಿ ಅರಣ್ಯ ಇಲಾಖೆಗೆ ಲಭಿಸಿದ್ದು,ಗಾಲ್ಫ್ ಮೈದಾನದಲ್ಲಿ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ.
ಕಳೆದ ಎರಡು ದಿನಗಳಿಂದ ಜಾಧವ್ ನಗರದಲ್ಲಿದ್ದ ಬೋನು ಗಾಲ್ಫ್ ಮೈದಾನಕ್ಕೆ ಇಂದು ಬೆಳಗ್ಗೆ ಶಿಫ್ಟ್ ಮಾಡಲಾಗಿದೆ.ಗಾಲ್ಫ್ ಮೈದಾನಕ್ಕೆ ಬೋನು ಸ್ಥಳಾಂತರ ಮಾಡುತ್ತಿರುವ ಅರಣ್ಯ ಇಲಾಖೆಯ ಸಿಬ್ಬಂದಿ,ಚಿರತೆಗಾಗಿ ಹೊಸ ಸ್ಥಳದಲ್ಲಿ ಬಲೆ ಹಾಕಿದ್ದಾರೆ.ಮೂರು ದಿನಗಳಿಂದ ಚಿರತೆ ಪತ್ತೆಯಾಗದ ಹಿನ್ನೆಲೆ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ.
ಬೆಳಗಾವಿ ನಗರಕ್ಕೆ ನುಗ್ಗಿರುವ ಚಿರತೆ ಕಳೆದ ಮೂರು ದಿನಗಳಿಂದ ಅರಣ್ಯ ಇಲಾಖೆಯ ಸುಬ್ಬಂಧಿ ಜೊತೆ ನವರಂಗಿ ಆಟ ಆಡುತ್ತಿದೆ.ಚಿರತೆಗೆ ಚಲ್ಲಾಟವಾದರೆ,ಸಾರ್ವಜನಿಕರಿಗೆ ಇದು ಪ್ರಾಣ ಸಂಕಟವಾಗಿದೆ
ಫೇಕ್ ವಿಡಿಯೋಗಳ ಹಾವಳಿ
ಬೆಳಗಾವಿ ನಗರದಲ್ಲಿ ಚಿರತೆ ನುಗ್ಗಿದೆ. ಚಿರತೆಗಾಗಿ ಒಂದು ಕಡೆ ಶೋಧ ಕಾರ್ಯಾಚರಣೆ ನಡೆದಿದೆ.ಇನ್ನೊಂದು ಕಡೆ,ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೋ ಚಿರತೆ ಪ್ರತ್ಯಕ್ಷವಾಗಿರುವ ವಿಡಿಯೋಗಳನ್ಬು ಡೌನ್ ಲೋಡ್ ಮಾಡಿಕೊಂಡು,ಇದು ಜಾಧವ ನಗರ,ಇದು ಹನುಮಾನನಗರದ ವಿಡಿಯೋಗಳೆಂದು ಅಪಲೋಡ್ ಮಾಡುವ ಮೂಲಕ ಸಾರ್ವಜನಿಕರಲ್ಲಿ ಆತಂಕ ಮೂಡಿಸುವ ಪ್ರಯತ್ನಗಳು ನಡೆದಿವೆ.