ಬೆಳಗಾವಿ- 75 ನೇಯ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕ್ರಾಂತಿಯ ನೆಲ ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಬೃಹತ್ತ್ ಪಾದಯಾತ್ರೆಯನ್ನು ಭಾರಿ ಮಳೆಯ ಕಾರಣ ರದ್ದು ಪಡಿಸಲಾಗಿದೆ.
ನಾಳೆ ಮಂಗಳವಾರ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ನೇತ್ರತ್ವದಲ್ಲಿ ಬೆಳಗಾವಿಯಲ್ಲಿ ಬೃಹತ್ತ್ ತಿರಂಗಾ ಯಾತ್ರೆಯನ್ನು ಆತೋಜಿಸಲಾಗಿತ್ತು,ಬೆಳಗಾವಿಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಈ ಪಾದಯತ್ರೆಯನ್ನು ಮುಂದೂಡಲಾಗಿದೆ.
ರಾಷ್ಟ್ರಪಿತ ಮಹಾತ್ಮಾ ಗಾಂಧಿಜಿ ಅವರ ಅಧ್ಯಕ್ಷತೆಯಲ್ಲಿ ಕೇವಲ ಒಂದೇ ಒಂದು ಕಾಂಗ್ರೆಸ್ ಅಧಿವೇಶನ ನಡೆದಿತ್ತು.ಈ ಅಧಿವೇಶನ ನಡೆದಿದ್ದು ಬೆಳಗಾವಿಯಲ್ಲಿ ಅನ್ನೋದು ವಿಶೇಷ.ಈ ಐತಿಹಾಸಿಕ ಸ್ಣಳ ಬೆಳಗಾವಿ,ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಸಮಾಧಿ ಸ್ಥಳ ನಂದಗಡ,ಹಾಗೂ ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ಸಮಾಧಿ ಸ್ಥಳ ಬೈಲಹೊಂಗಲದಲ್ಲಿ ಕಾಂಗ್ರೆಸ್ ತಿರಂಗಾ ಯಾತ್ರೆ ನಡೆಸಿ ಮೂರು ಜನ ಮಹಾಪುರುಷರಿಗೆ ಗೌರವ ಸಮರ್ಪಿಸಲು ತಿರಂಗಾ ಯಾತ್ರೆಯನ್ನು ಆಯೋಜಿಸಿತ್ತು.