ಬೆಳಗಾವಿ ಅಧಿಕಾರಿಗಳ ಸ್ಪಂದನೆಗೆ “ಯಜಮಾನ” ಖುಷ್ ಆದ್ರು….!!
ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇಂದು ಹಾನಿಗೊಳಗಾದ ಮನೆಗಳಿಗೆ ಇಂದೇ ಪರಿಹಾರ ನೀಡಿ ಸ್ತುತ್ಯಾರ್ಹ ಕಾರ್ಯನಿರ್ವಹಿಸಿದ ಜಿಲ್ಲಾ ಆಡಳಿತ ಮತ್ತು ಬೆಳಗಾವಿ ಮಹಾನಗರ ಪಾಲಿಕೆ ಆಡಳಿತದ ಕಾರ್ಯ ವೈಖರಿ ಕುರಿತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಹರ್ಷ ವ್ಯಕ್ತಪಡಿಸಿ ಬೆಳಗಾವಿ ಜಿಲ್ಲಾಡಳಿತಕ್ಕೆ ಅಭಿನಂದನಾ ಪತ್ರ ಕಳಿಸಿದ್ದಾರೆ.
ಬೆಳಗಾವಿ ನಾಗರೀಕರ ನೋವುಗಳಿಗೆ ತಕ್ಷಣ ಸ್ಪಂದಿಸುವ ಸೇವೆ ಮಾಡಿದೆ. ಈ ಕಾರ್ಯಕ್ಕಾಗಿ ನಾನು ಬೆಳಗಾವಿ ಜಿಲ್ಲಾಡಳಿತ ಮತ್ತು ಬೆಳಗಾವಿ ಮಹಾನಗರ ಪಾಲಿಕೆಯ ಸಮಸ್ತ ಅಧಿಕಾರಿ ಮತ್ತು ಸಿಬ್ಬಂದಿ ವರ್ಗಕ್ಕೆ ಹೃತ್ಪೂರ್ವಕ ಅಭಿನಂದನೆಗಳು ಸಲ್ಲಿಸುತ್ತೇನೆ
ವಿಶೇಷವಾಗಿ ಜಿಲ್ಲಾಧಿಕಾರಿ ಮತ್ತು ಇತರೆ ಹಿರಿಯ ಅಧಿಕಾರಿಗಳ ಮುತುವರ್ಜಿ ಮತ್ತು ಜನಪರ ಕಾಳಜಿಯಿಂದಾಗಿ ಸರ್ಕಾರದ ಈ ಸ್ಪಂದನೆಗೆ ಕಾರಣವಾಗಿದೆ. ಈ ಕಾರ್ಯವನ್ನು ನಾನು ಮೆಚ್ಚಿದ್ದೇನೆ.
ಜಿಲ್ಲಾಡಳಿತಗಳ ಜನಸ್ಪಂದನೆ ಇದೇ ರೀತಿ ಮುಂದುವರೆಯಲಿ ಮತ್ತು ಸಂಕಷ್ಟದಲ್ಲಿರುವ ನಾಗರಿಕರ ನೆರವಿಗೆ ತಕ್ಷಣ ಆಡಳಿತ ವ್ಯವಸ್ಥೆ ಸ್ಪಂದಿಸಿ ತಮ್ಮ ಕರ್ತವ್ಯ ನಿರ್ವಹಿಸಲು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿ
ಗೋವಿಂದ ಎಂ ಕಾರಜೋಳ ಪತ್ರದ ಮೂಲಕ ಬೆಳಗಾವಿ ಜಿಲ್ಲಾಡಳಿತಕ್ಕೆ ಶಹಬ್ಬಾಶ್ ಗಿರಿ ನೀಡಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
