ಚಿರತೆಯನ್ನು ಸೆರೆಹಿಡಿಯುವ ಕಾರ್ಯಾಚರಣೆ ಮುಂದುವರಿದಿರುವುದರಿಂದ ಬೆಳಗಾವಿ ನಗರ ಮತ್ತು ಗ್ರಾಮೀಣ ಶಿಕ್ಷಣ ವಲಯದ ವ್ಯಾಪ್ತಿಯ 22 ಶಾಲೆಗಳಿಗೆ ಶುಕ್ರವಾರ(ಆ.12) ರಜೆಯನ್ನು ಮುಂದುವರಿಸಲಾಗಿದೆ ಎಂದು ಡಿಡಿಪಿಐ ಬಸವರಾಜ ನಾಲತವಾಡ ತಿಳಿಸಿರುತ್ತಾರೆ.
ಸದರಿ ಪ್ರದೇಶಗಳಿಂದ ಬೇರೆ ಬೇರೆ ಕಡೆಯ ಶಾಲೆಗಳಿಗೆ ಮಕ್ಕಳನ್ನು ಕಳಿಸುವಾಗ ಪಾಲಕರು ಸೂಕ್ತ ಎಚ್ಚರಿಕೆಯನ್ನು ವಹಿಸಬೇಕು ಎಂದು ಅವರು ತಿಳಿಸಿದ್ದಾರೆ.
ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಚಿರತೆ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.ಹನುಮಾನ ನಗರ,ಕುವೆಂಪು ನಗರ,ಜಾಧವ ನಗರ,ಸದಾಶಿವ ನಗರ,ಹಾಗು ದೂರದರ್ಶನ ನಗರದ ನಿವಾಸಿಗಳು ಮುನ್ನಚರಕೆ ವಹಿಸಬೇಕು,ಮಕ್ಕಳು ಹೊರಗಡೆ ಓಡಾದಂತೆ ತಡೆಯುವುದು ಸೂಕ್ತ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ