ಬೆಳಗಾವಿ-ಬೆಳಗಾವಿ: ಇಂದು ಭಾರತ ಮತ್ತು ಪಾಕಿಸ್ತಾನ ನಡುವೆ ಏಷ್ಯಾ ಕಪ್ ಹೈವೋಲ್ಟೇಜ್ ಮ್ಯಾಚ್ ನಡೆಯಲಿದೆ. ಇದರಲ್ಲಿ ಭಾರತ ತಂಡ ಭರ್ಜರಿ ಗೆಲುವು ಸಾಧಿಸಲಿ ಎಂದು ಬೆಳಗಾವಿಯ ದರ್ಗಾವೊಂದರಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.
ಬೆಳಗಾವಿ ನಗರದ ಕೋಟೆ ಆವರಣದಲ್ಲಿರುವ ಹಜರತ ಭದ್ರುದ್ದೀನ್ ಶ್ಯಾವಲಿ ದರ್ಗಾದಲ್ಲಿ ಮುಸ್ಲಿಂ ಸಮುದಾಯದ ಯವಕರು, ಕಾಂಗ್ರೆಸ್ ಸೇವಾದಳದ ಯಂಗ್ ಬ್ರಿಗೇಡ್ ಕಾರ್ಯಕರ್ತರು ಭಾರತದ ಗೆಲುವಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ
ಪಾಕಿಸ್ತಾನದ ವಿರಯದ್ಧ ಟೀಂ ಇಂಡಿಯಾ ಗೆಲುವಿಗೆ ಮುಸ್ಲಿಂ ಸಮುದಾಯದಿಂದ ದರ್ಗಾದಲ್ಲಿ ಪ್ರಾರ್ಥನೆ ಮಾಡಲಾಯಿತು. ದರ್ಗಾದ ಮುಲ್ಲಾ ರಫೀಕ್ ಮುಜಾವರ, ಯಂಗ್ ಬ್ರಿಗೇಡ್ ಜಿಲ್ಲಾ ಅಧ್ಯಕ್ಷ ಇರ್ಫಾನ್ ಅತ್ತಾರ, ತಾಜಮುಲ್ಲಾ ಬಾಕ್ಸಿ, ವಾಸೀಂ ನದಾಫ್ ಸೇರಿದಂತೆ ಭಾರತದ ತಂಡದ ಅಭಿಮಾನಿಗಳು ಇದ್ದರು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ