Breaking News
Home / Breaking News / ವ್ಹಾ..ರೇ..ವ್ಹಾ..ಪಾಂಡ್ಯಾ..ದುಬೈನಲ್ಲಿ ಟೀಂ ಇಂಡಿಯಾ ಹವಾ…!!

ವ್ಹಾ..ರೇ..ವ್ಹಾ..ಪಾಂಡ್ಯಾ..ದುಬೈನಲ್ಲಿ ಟೀಂ ಇಂಡಿಯಾ ಹವಾ…!!

ದುಬೈ: ಟೀಂ ಇಂಡಿಯಾ ಏಷ್ಯಾಕಪ್ 2022 ರಲ್ಲಿ ಗೆಲುವಿನೊಂದಿಗೆ ಖಾತೆ ತೆರೆದಿದೆ. ಟೂರ್ನಿಯ ಇಂದಿನ ಹೈ ವೋಲ್ಟೇಜ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ತಂಡ 5 ವಿಕೆಟ್ ಗಳ ರೋಚಕ ಜಯ ಸಾಧಿಸಿದೆ.

ಟೀಂ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನ ತಂಡಕ್ಕೆ ಸೋಲೀನ ರುಚಿ ತೋರಿಸಿದೆ.ಪಾಕಿಸ್ತಾನ ನೀಡಿದ 148 ರನ್ ಗಳ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡ ವಿರಾಟ್ ಕೊಹ್ಲಿ (35) ಸಮಯೋಚಿತ ಬ್ಯಾಟಿಂಗ್ ಹಾಗೂ ಹಾರ್ದಿಕ್ ಪಾಂಡ್ಯಾ (ಆಜೇಯ 33) ಆಲ್ರೌಂಡ್ ಪ್ರದರ್ಶನದ ನೆರವಿನಿಂದ 19.5 ಓವರ್ ನಲ್ಲಿ 148 ರನ್ ಗಳಿಸಿ 5 ವಿಕೆಟ್ ಗಳ ರೋಚಕ ಜಯ ಸಾಧಿಸಿತು.

ಸವಾಲಿನ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡಕ್ಕೆ ಆರಂಭಿಕ ಆಘಾತ ಎದುರಾಗಿತ್ತು. ಶೂನ್ಯಕ್ಕೇ ಆರಂಭಿಕ ಆಟಗಾರ ಕೆಎಲ್ ರಾಹುಲ್ ಔಟಾಗಿದ್ದು ತಂಡಕ್ಕೆ ದುಬಾರಿಯಾಗಿ ಪರಿಣಮಿಸಿತು. ನಿಧಾನಗತಿಯಲ್ಲಿ ಬ್ಯಾಟಿಂಗ್ ಆರಂಭಿಸಿದ್ದ ನಾಯಕ ರೋಹಿತ್ ಶರ್ಮಾ, ಕೊಹ್ಲಿ ಜೊತೆಗೂಡಿ ಅರ್ಧಶತಕದ ಜೊತೆಯಾಟವಾಡಿದರು.

ಈ ಜೊತೆಯಾಟದಲ್ಲಿ ಕೊಹ್ಲಿಯದ್ದೇ ಸಿಂಹಪಾಲಿತ್ತು. ಈ ಹಂತದಲ್ಲಿ 12 ರನ್ ಗಳಿಸಿದ್ದ ರೋಹಿತ್ ಶರ್ಮಾ ನವಾಜ್ ಬೌಲಿಂಗ್ ನಲ್ಲಿ ಔಟಾದರು. ರೋಹಿತ್ ಬೆನ್ನಲ್ಲೇ 35 ರನ್ ಗಳಿಸಿದ್ದ ಕೊಹ್ಲಿ ಕೂಡ ಇದೇ ನವಾಜ್ ಬೌಲಿಂಗ್ ನಲ್ಲಿ ಔಟಾಗಿದ್ದು ತಂಡಕ್ಕೆ ದುಬಾರಿಯಾಗಿ ಪರಿಣಮಿಸಿತು.

ಹಾರ್ದಿಕ ಪಾಂಡೆ ಸಿಕ್ಸರ್ ಹೊಡೆದು ಭಾರತವನ್ನು ಗೆಲ್ಲಿಸುತ್ತಿದ್ದಂತೆ ಇಡೀ ಭಾರತಾದ್ಯಂತ ಕ್ರಕೆಟ್ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಬ್ರಮಿಸಿದ್ದಾರೆ.

Check Also

ಬೆಳಗಾವಿಯಲ್ಲಿ FM ರೇಡಿಯೋ ಶುರು ಮಾಡಿ…!!

ಬೆಳಗಾವಿ- ಕರ್ನಾಟಕ,ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಸಂಪರ್ಕದ ಕೊಂಡಿಯಾಗಿರುವಬೆಳಗಾವಿಯಲ್ಲಿ ಎಫ್.ಎಂ ರೇಡಿಯೋ ಪ್ರಾರಂಭಿಸಲು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಅವರು …

Leave a Reply

Your email address will not be published. Required fields are marked *