Breaking News

ಲಕ್ಷ್ಮೀದೇವಿ ಜಾತ್ರೆಯಲ್ಲಿಯೂ ಜಗಳವಾಗಿತ್ತು.ಆಮೇಲೆ ಮರ್ಡರ್ ಆಯ್ತು…!!

ಹತ್ತರಗಿ ಕೊಲೆ ಪ್ರಕರಣ: ಆರು ಆರೋಪಿಗಳ ಸೆರೆ

ಬೆಳಗಾವಿ: ಹತ್ತರಗಿಯ ದಾಬಾವೊಂದರ ಬಳಿ ನಡೆದ ಯುವಕನ ಹತ್ಯೆ ಪ್ರಕರಣವನ್ನು ಭೇದಿಸಿರುವ ಯಮಕನಮರಡಿ ಪೊಲೀಸರು, ಈ ಪ್ರಕರಣ ಸಂಬಂಧ ಆರು ಜನ ಆರೋಪಿಗಳನ್ನುಬಂಧಿಸಿದ್ದಾರೆ.
ಯುಮಕನಮರಡಿಯ ವಿನಾಯಕ ಸೋಮಶೇಖರ ಹೊರಕೇರಿ ( ೨೮ ) ಎಂಬ ಯುವಕನನ್ನು ಸೆ. ೪ ರಂದು ರಾತ್ರಿ ೮.೧೫ರ ಸುಮಾರಿಗೆ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಲಾಗಿತ್ತು. ಏಳು ವರ್ಷಗಳ ಹಿಂದೆ ಲಕ್ಷ್ಮೀ ದೇವರ ಜಾತ್ರೆಯಲ್ಲಿ ಮುತ್ಯಾನಟ್ಟಿಯ ಸಂತೋಷ ಸಿದ್ದಪ್ಪ ಗುರವ ತಂಟೆ ತೆಗೆದು ವಿನಾಯಕನ ಜೊತೆಗೆ ವೈರತ್ವ ಸಾಧಿಸಿದ್ದ. ಹಳೆಯ ವೈಷಮ್ಯದಿಂದ ತನ್ನ ಸಹಚರರೊಂದಿಗೆ ಸೇರಿ ಮಾರಕಾಸ್ತ್ರಗಳಿಂದ ಕೊಚ್ಚಿ ವಿನಾಯಕನನ್ನು ಹತ್ಯೆ ಮಾಡಿದ್ದರು.
ಈ ಹತ್ಯೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಮುತ್ಯಾನಟ್ಟಿಯ ಸಂತೋಷ ಸಿದ್ದಪ್ಪ ಗುರವ ( ೩೧), ಹತ್ತರಗಿಯ ಈರಣ್ಣ ಶಂಕರ ಹೊನ್ನಕ್ಕನವರ ( ೨೧), ಆದಿತ್ಯಾ ಪ್ರಕಾಶ ಗಣಾಚಾರಿ ( ೨೨), ಶಾನುರ್ ಗಜಬರಸಾಬ ನದಾಫ್ ( ೨೨), ಮಹಾಂತೇಶ ಈರಪ್ಪ ಕರಗುಪ್ಪಿ ( ೨೨) ಪಾರೀಶ ಉರ್ಫ ಪ್ರಶಾಂತ ನಾಶಿಪುಡಿ ( ೨೨) ಬಂಧಿತ ಆರೋಪಿಗಳು. ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಪೊಲೀಸರು ವಿಚಾರಣೆ ನಡೆಸಿದ ವೇಳೆ ಆರೋಪಿಗಳು ಕೊಲೆಗೆ ಕಾರಣಏನೆಂಬುದನ್ನು ಬಾಯಿಬಿಟ್ಟಿದ್ದಾರೆ. ಆರೋಪಿ ಸಂತೋಷ ಗುರವ ಇಸ್ಪೇಟ್ ದಂಧೆ ನಡೆಸುತ್ತಿದ್ದ. ಇದಕ್ಕೆ ಹತ್ಯೆಗೀಡಾದ ವಿನಾಯಕ ಇಸ್ಪೇಟ್ ಅಡ್ಡೆ ಮೇಲೆ ದಾಳಿ ಮಾಡಿಸುತ್ತಿದ್ದ. ಗ್ರಾಹಕರೆಲ್ಲರನ್ನೂ ಕಡಲಗಿ ಗ್ರಾಮಕ್ಕೆ ಕರೆದುಕೊಂಡು ಹೋಗಿ ತಾನೇ ಇಸ್ಪೇಟ್ ಆಟವನ್ನು ಆಡಿಸುತ್ತಿದ್ದ. ಆರೋಪಿಗೆ ತನ್ನ ದಂಧೆಯಲ್ಲಿ ಬಹಳಷ್ಟು ಹಾನಿಯಾಗಿತ್ತು. ಲಕ್ಷ್ಮೀದೇವಿ ಜಾತ್ರೆಯಲ್ಲಿಯೂ ಜಗಳವಾಗಿತ್ತು. ಈರಣ್ಣ ಹೊನ್ನಕ್ಕನವರ ಈತನು ವಿನಾಯಕನ ಗೆಳೆಯ ಸುಪ್ರೀಂತ ಮುಕ್ಕನ್ನವರ ಕಡೆಯಿಂದ ಹಣ ಇಸಿದುಕೊಂಡು ಮರಳಿ ಕೊಟ್ಟಿರಲಿಲ್ಲ. ಈರಣ್ಣನಿಗೆ ವಿನಾಯಕ ಜೀವಬೆದರಿಕೆ ಹಾಕಿದ್ದ. ಹಾಗಾಗಿ, ಆತನನ್ನು ಹತ್ಯೆ ಮಾಡಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಹೇಳಿದ್ದಾರೆ. ಈ ಕುರಿತು ಯಕಮನಮರಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *