Breaking News

ಚಿನ್ನ ,ಎಮ್ಮೆ, ಕದ್ದವರು,ಪೋಲೀಸರ ಬಲೆಗೆ ಬಿದ್ದರು…!!

ಬೆಳಗಾವಿ-ಮಹಿಳೆಯರ ಚಿನ್ನಾಭರಣ,ಮನೆ ಮುಂದೆ ಕಟ್ಟಿದ ಎಮ್ಮೆಗಳನ್ನು ದೋಚುತ್ತಿದ್ದ ಖತರ್ನಾಕ್ ಕಳ್ಳರ ಗ್ಯಾಂಗ್ ಹಾರುಗೇರಿ ಠಾಣೆಯ ಪೋಲೀಸರ ಬಲೆಗೆ ಬಿದ್ದಿದೆ.

ಹಾರೂಗೇರಿ ಮುಗುಳಖೋಡ,ತೇರದಾಳ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಮಹಿಳೆಯರ ಕೊರಳಲ್ಲಿದ್ದ ಚಿನ್ನಾಭರಣ ಎಮ್ಮೆ ಕಳುವು ಮಾಡಿ ಮಾರಾಟ ಮಾಡುತ್ತಿದ್ದ,ಹಲವಾರು ಕಳ್ಳತನದ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಒಟ್ಟು ಐದು ಜನ ಆರೋಪಿಗಳನ್ನು ಹಾರೂಗೇರಿ ಪೋಲೀಸರು ಬಂಧಿಸಿದ್ದಾರೆ.

ಕಳವು ಮಾಡಲಾಗಿದ್ದ ,49 ಗ್ರಾಂ ಚಿನ್ನಾಭರಣ,ಎರಡು ಎಮ್ಮೆ,ಒಂದು ಗೂಡ್ಸ್ ವಾಹನ ಸೇರಿದಂತೆ ಆರು ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳನ್ನು ಹಾರೂಗೇರಿ ಪೋಲೀಸರು ವಶಪಡಿಸಿಕೊಂಡಿದ್ದಾರೆ.

ಹಾರೂಗೇರಿ ಸಿಪಿಐ ಹಟ್ಟಿ,ನೇತ್ರತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೋಲೀಸರು ತ್ವರಿತಗತಿಯಲ್ಲಿ ಕಳ್ಳತನ ಪ್ರಕರಣಗಳನ್ನು ಭೇದಿಸಿ ಕಳ್ಳರಿಗೆ ಜೈಲು ತೋರಿಸಿದ್ದಾರೆ.

Check Also

ರಾತ್ರಿ ಮಠದಲ್ಲಿ ಲೇಡಿ……..ಗ್ರಾಮಸ್ಥರಿಂದ ಮುತ್ತಿಗೆ ಮಠದಿಂದ ಸ್ವಾಮೀಜಿ ಉಚ್ಛಾಟನೆ

ಮೂಡಲಗಿ : ತಾಲೂಕಿನ ಶಿವಾಪೂರ(ಹ) ಗ್ರಾಮದ ಅಡವಿ ಸಿದ್ದೇಶ್ವರ ಮಠದ ಅಡವಿಸಿದ್ದರಾಮ ಸ್ವಾಮೀಜಿಯ ಅಕ್ರಮ ಸಂಭಂದದ ಆರೋಪದ ಹಿನ್ನಲೆ ಇಡೀ …

Leave a Reply

Your email address will not be published. Required fields are marked *