ಬೆಳಗಾವಿ-ದೀಪಾವಳಿ ಪ್ರಯುಕ್ತ ಲಕ್ಷ್ಮಿ ಪೂಜೆಗಾಗಿ ಜಾರಕಿಹೊಳಿ ಸಹೋದರರು ಒಟ್ಟುಗೂಡಿದ್ರು..ಬೆಳಗಾವಿ ಜಿಲ್ಲೆಯ ಗೋಕಾಕ ನಗರದ ಹೊಸಪೇಟ ಗಲ್ಲಿಯ ಕಚೇರಿಯಲ್ಲಿ ಜಾರಕಿಹೊಳಿ ಸಹೋದರರು ಪೂಜೆ ನೆರವೇರಿಸಿ ಎಲ್ಲರ ಗಮನ ಸೆಳೆದರು.
ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರಿಂದ ಲಕ್ಷ್ಮಿ ಪೂಜೆ ನೆರವೇರಿತುಮಾಜಿ ಸಚಿವ ರಮೇಶ್ ಜಾರಕಿಹೊಳಿ, ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಭಾಗಿಯಾಗಿದ್ರು.ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಪುತ್ರ ರಾಹುಲ್ ಜಾರಕಿಹೊಳಿ,ಭೀಮಶಿ ಜಾರಕಿಹೊಳಿ ಪುತ್ರರಾದ ಸನತ್, ಸರ್ವೋತ್ತಮ ಜಾರಕಿಹೊಳಿ ಭಾಗಿಯಾಗಿದ್ದು ವಿಶೇಷ.
ದೀಪಾವಳಿ ಹಬ್ಬದಲ್ಲಿ ಮಾತ್ರ ಒಂದೆಡೆ ಸೇರುವ ಜಾರಕಿಹೊಳಿ ಕುಟುಂಬಸ್ಥರು ಲಕ್ಷ್ಮೀ ಪೂಜೆ ನೆರವೇರಿಸಿ ಎಲ್ಲರ ಗಮನ ಸೆಳೆಯುತ್ತಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ