ಬೆಳಗಾವಿ-ಹುಕ್ಕೇರಿ ಹಿರೇಮಠದ ಕೃಪೆ,ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಕನ್ನಡದ ಅಭಿಮಾನದ ಪರಿಣಾಮ ಈ ಬಾರಿ ಬೆಳಗಾವಿಯ ರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುವ ಲಕ್ಷಕ್ಕೂ ಹೆಚ್ವು ಜನರಿಗೆ ಹೋಳಗಿ ಊಟ ಸಿಗಲಿದೆ.
ಬೆಳಗಾವಿಯ ಸರ್ದಾರ್ ಮೈದಾನದಲ್ಲಿ ನೂರಕ್ಕೂ ಹೆಚ್ಚು ಜನ ಇಂದು ಬೆಳಗ್ಗೆಯಿಂದ ಹೋಳಗಿ ರೆಡಿ ಮಾಡ್ತಾ ಇದ್ದಾರೆ.ಈಗಾಗಲೇ ಹತ್ತು ಸಾವಿರಕ್ಕೂ ಹೆಚ್ಚು ಹೋಳಿಗೆ ರೆಡಿ ಆಗಿವೆ.ಹೋಳಗಿ ತಯಾರಿಸುವ ಕೆಲಸ ಅತ್ಯಂತ ಉತ್ಸಾಹದಿಂದ ನಡೆಯುತ್ತಿದೆ.ಹುಕ್ಕೇರಿ ಹಿರೇಮಠದ ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮಿಗಳ ಜೋಳಿಗೆಯಿಂದ ಕನ್ನಡಿಗರಿಗೆ ಕನ್ನಡ ಹಬ್ಬದ ಪ್ರಸಾದವಾಗಿ ಹೋಳಿಗೆ ಊಟ ಸಿಗಲಿದೆ.
ಬೆಳಗಾವಿಯ ಸರ್ದಾರ್ ಮೈದಾನದಲ್ಲಿ ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದೆ.ಅದಕ್ಕಾಗಿ ಪೆಂಡಾಲ್ ಹಾಕಲಾಗಿದೆ.ಎಲ್ಲರೂ ಸರದಿಯಲ್ಲಿ ನಿಂತು ಊಟ ಪಡೆಯಲು ಬ್ಯಾರಿಕೇಡ್ ಹಾಕಲಾಗುತ್ತಿದೆ. ಊಟದ ವ್ಯವಸ್ಥೆ ನಿಭಾಯಿಸಲು ಕನ್ನಡದ ಹುಡುಗರು ಸ್ವಯಂ ಪ್ರೇರಣೆಯಿಂದ ಕನ್ನಡದ ಸೇವೆ ಮಾಡಲು ಮುಂದಾಗಿದ್ದಾರೆ.
ಹೋಳಗಿ ತಯಾರಿಸುವ ಕೆಲಸ ಹಗಲು ರಾತ್ರಿ ನಡೆಯುತ್ತಿದೆ.ಪ್ರಸಿದ್ದ ಹೋಳಗಿ ತಯಾರಕರಿಂದ ಹೋಳಿಗೆ ಮಾಡಿಸಲಾಗುತ್ತಿದೆ. ನಾಳೆ ಮಂಗಳವಾರ ಕನ್ನಡದ ತೇರು ಎಳೆಯಲು ಆಗಮಿಸುವ ಕನ್ನಡದ ಅಭಿಮಾನಿಗಳು ಬೆಳಗಾವಿಯ ಸರ್ದಾರ್ ಮೈದಾನಕ್ಕೆ ಆಗಮಿಸಿ ಹೋಳಗಿ ಊಟ ಮಾಡಿ,ಹುಕ್ಕೇರಿ ಹಿರೇಮಠದ ಪ್ರಸಾದ ಸ್ವೀಕರಿಸಿ ಪುಣೀತರಾಗಿ